Site icon Vistara News

Murder by husband | ಪೇಟೆಗೆ ಕರೆ ತಂದು ಲಾರಿ ಕೆಳಗೆ ತಳ್ಳಿ ಪತ್ನಿಯನ್ನು ಕೊಲೆ ಮಾಡಿದ ಪತಿ!

Chintamani murder

ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಲು ಹೊಸ ದಾರಿಯೊಂದನ್ನು ಹುಡುಕಿದಂತಿದೆ. ವಾಹನ ಹಾಯಿಸಿ ಕೊಲೆ ಮಾಡುವುದನ್ನು ಕೇಳಿದ್ದೇವೆ. ರಸ್ತೆ ಬದಿ ನಡೆದುಕೊಂಡು ಹೋಗುವಾಗ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡುವುದನ್ನೂ ನೋಡಿದ್ದೇವೆ. ಇಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯನ್ನು ಲಾರಿಯಡಿಗೆ ತಳ್ಳಿ ಕೊಲೆ ಮಾಡಿದ್ದಾನೆ.

ಚಿಂತಾಮಣಿ ನಗರದ ಸುಖಸಾಗರ್ ಹೋಟೆಲ್ ಬಳಿ ಘಟನೆ ಇದಾಗಿದ್ದು, ಸುಮೇರಾ (37) ಸಾವನ್ನಪ್ಪಿದ ದುರ್ದೈವಿ. ಮುನಿಕೃಷ್ಣ (50) ಪತ್ನಿಯನ್ನು ಕೊಲೆ ಮಾಡಿದ ಪತಿರಾಯ.

ಸುಮೇರಾ ಮತ್ತು ಮುನಿಕೃಷ್ಣ ಶಿಡ್ಲಘಟ್ಟ ಮೂಲದ ದಂಪತಿ. ಇವರಿಬ್ಬರ ಮಧ್ಯೆ ಕೌಟುಂಬಿಕ ಕಲಹ ಜೋರಾಗಿತ್ತು ಎನ್ನಲಾಗಿದೆ. ಈ ಮಧ್ಯೆ, ಆತ ತನ್ನ ಹೆಂಡತಿಯನ್ನು ಪುಸಲಾಯಿಸಿ ಚಿಂತಾಮಣಿ ಪೇಟೆಗೆ ಕರೆ ತಂದಿದ್ದಾನೆ. ಅಲ್ಲಿ ಚೆನ್ನಾಗಿ ಕುಡಿದು ಮತ್ತೇರಿಸಿಕೊಂಡ ಆತ ಹೆಂಡತಿ ಜತೆ ಸುಖ ಸಾಗರ್‌ ಹೋಟೆಲ್‌ ಬಳಿ ಬರುತ್ತಿದ್ದಂತೆಯೇ ಅಲ್ಲಿ ಬರುತ್ತಿದ್ದ ಒಂದು ಲಾರಿಯಡಿಗೆ ತಳ್ಳಿಬಿಟ್ಟಿದ್ದಾನೆ!

ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮೀಪದ ಕಟ್ಟಡಗಳ ಸಿಸಿ ಟಿವಿಯನ್ನು ಪರಿಶೀಲಿಸಿ ಇದೊಂದು ಕೊಲೆ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ | Road accident | ಚಾಲಕನ ನಿಯಂತ್ರಣ ತಪ್ಪಿ ಅಂಗಡಿ ಒಳಗೆ ನುಗ್ಗಿದ ಲಾರಿ, 6 ಮಂದಿಗೆ ಗಾಯ, ನಾಲ್ವರು ಗಂಭೀರ

Exit mobile version