Site icon Vistara News

Murder Case : ಪ್ರಿಯಕರನಿಂದಲೇ ಹತ್ಯೆಯಾದಳು ಇಬ್ಬರು ಮಕ್ಕಳ ತಾಯಿ!

Accused arrested for killing three in Hassan

ಹಾಸನ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ನಿಗೂಢವಾಗಿ ಮೃತಪಟ್ಟಿದ್ದ (Mysterious death) ಘಟನೆ ಜನವರಿ 1ರಂದು ಹಾಸನ ನಗರದ (Hasana News) ದಾಸರಕೊಪ್ಪಲಿನಲ್ಲಿ ನಡೆದಿತ್ತು. ಶಿವಮ್ಮ (36), ಮಕ್ಕಳಾದ ಸಿಂಚು (7) ಹಾಗೂ ಪವನ (10) ಮೃತ ದುರ್ದೈವಿಗಳು. ಈ ಮೂವರ ಸಾವಿನ ಪ್ರಕರಣವನ್ನು ಮೊದಮೊದಲು ಆತ್ಮಹತ್ಯೆ ಎಂದೇ ಪೊಲೀಸರು ಶಂಕಿಸಿದ್ದರು. ಆದರೆ ತನಿಖೆಗಿಳಿದಾಗಲೇ ಅದು ಕೊಲೆ (Murder Case) ಎಂಬುದು ತಿಳಿದು ಬಂದಿದೆ.

ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ ಶಿವಮ್ಮ ಮತ್ತೊಬ್ಬನ ಮೋಹಕ್ಕೆ ಸಿಲುಕಿದ್ದಳು. ಶಿವಮ್ಮಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಬಿಜಾಪುರ ಮೂಲದ ನಿಂಗಪ್ಪ ಕಾಗವಾಡ ಎಂಬಾತನೇ ಮೂವರನ್ನು ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ.

ತೀರ್ಥಪ್ರಸಾದ್‌ ಎಂಬವರೊಂದಿಗೆ ಶಿವಮ್ಮ ಮದುವೆ ಆಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದರು. ಸಣ್ಣ ಮನೆಯೊಂದರಲ್ಲಿ ವಾಸವಾಗಿದ್ದ ಈ ಕುಟುಂಬ ಖುಷಿ ಖುಷಿಯಾಗಿಯೇ ಇತ್ತು. ಕುಟುಂಬವನ್ನು ನೋಡಿಕೊಳ್ಳಲು ಪತಿ ತೀರ್ಥಪ್ರಸಾದ್‌ ಬಿಜಾಪುರದಲ್ಲಿ ಬೇಕರಿ ಇಟ್ಟಿದ್ದರು. ಈ ವೇಳೆ ಶಿವಮ್ಮಳಿಗೆ ನಿಂಗಪ್ಪ ಕಾಗವಾಡ ಎಂಬಾತ ಪರಿಚಯವಾಗಿದ್ದ. ಸ್ನೇಹ ಅದ್ಯಾವಾಗ ಪ್ರೀತಿಗೆ ತಿರುಗಿತೋ ಏನೋ ಇಬ್ಬರು ಅನೈತಿಕ ಸಂಬಂಧವನ್ನು ಹೊಂದಿದ್ದರು.

ಇದನ್ನೂ ಓದಿ: Road Accident : ಲಾರಿ-ಬೈಕ್‌ ಮುಖಾಮುಖಿ ಡಿಕ್ಕಿ; ಸವಾರನ ತಲೆ ಛಿದ್ರ, ಮತ್ತೊಬ್ಬ ಗಂಭೀರ

ಈ ಮಧ್ಯೆ ಬೇಕರಿಯಲ್ಲಿ ನಷ್ಟದಲ್ಲಿ ಮುಳುಗಿತ್ತು. ಹೀಗಾಗಿ ಬಿಜಾಪುರದಲ್ಲಿ ಬೇಕರಿ ಮುಚ್ಚಿ, ತುಮಕೂರಿನ ಬೇಕರಿಯೊಂದರಲ್ಲಿ ತೀರ್ಥಪ್ರಸಾದ್‌ ಕೆಲಸ ಮಾಡುತ್ತಿದ್ದರು. ಆದರೆ ಪತ್ನಿ ಮತ್ತೊಬ್ಬನೊಂದಿಗೆ ಸ್ನೇಹ ಹೊಂದಿರುವುದು ತೀರ್ಥಪ್ರಸಾದ್‌ಗೆ ತಿಳಿದೇ ಇರಲಿಲ್ಲ. ಕೆಲಸದ ನಿಮಿತ್ತ ಕುಟುಂಬದಿಂದ ದೂರವಿದ್ದ ಪತಿ ತೀರ್ಥಪ್ರಸಾದ್‌ನನ್ನು ಯಾಮಾರಿ ಪ್ರಿಯಕರ ನಿಂಗಪ್ಪನ ಜತೆಗೆ ಮತ್ತಷ್ಟು ಸಲುಗೆಯನ್ನು ಶಿವಮ್ಮ ಹೊಂದಿದ್ದಳು. ಮಾತ್ರವಲ್ಲದೇ ಪತಿ ತೀರ್ಥಪ್ರಸಾದ್‌ಗೆ ನಿಂಗಪ್ಪನನ್ನು ಈತ ಕಾರು ಚಾಲಕ ಎಂದು ಪರಿಚಯ ಕೂಡ ಮಾಡಿಕೊಟ್ಟಿದ್ದಳು.

ಹೀಗಿದ್ದಾಗ ಜನವರಿ 1ರ ರಾತ್ರಿ ಶಿವಮ್ಮಳ ಕತ್ತು ಹಿಸುಕಿ ನಿಂಗಪ್ಪ ಕೊಲೆ ಮಾಡಿದ್ದಾನೆ. ಮಲಗಿದ್ದ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಮೂವರನ್ನು ಕೊಂದ ಬಳಿಕ ನಿಂಗಪ್ಪ, ಶಿವಮ್ಮಳ ಮೊಬೈಲ್ ಹಾಗೂ ಚಿನ್ನದ ತಾಳಿ ಸರವನ್ನೆಲ್ಲ ಕದ್ದಿದ್ದ. ಪರಾರಿ ಆಗುವ ಮುನ್ನ ಅಡುಗೆ ಸಿಲಿಂಡರ್‌ನ ಪೈಪ್ ತೆಗೆದು, ಅನಿಲ ಸೋರಿಕೆಯಿಂದ ಸಾವನ್ನಪ್ಪಿರುವ ರೀತಿ ಬಿಂಬಿಸಲು ಪ್ಲ್ಯಾನ್‌ ಮಾಡಿದ್ದ. ಸದ್ಯ ಪೆನ್ಷನ್ ಮೊಹಲ್ಲಾ ಪೊಲೀಸರು ಆರೋಪಿ ನಿಂಗಪ್ಪನನ್ನು ವಶಕ್ಕೆ ಪಡೆದು, ಯಾಕಾಗಿ ಹತ್ಯೆ ಮಾಡಿದ್ದಾನೆ ಎಂಬುದರ ಸಂಬಂಧ ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version