ಬೆಂಗಳೂರು: ಅ.16 ರಂದು ಮಹಾಲಕ್ಷ್ಮಿ ಲೇಔಟ್ ಸಮೀಪದ ಆರ್ಎಂಸಿ ಯಾರ್ಡ್ ಎಂ.ಕೆ ಎಂಟರ್ ಪ್ರೈಸಸ್ ಕಟ್ಟಡದ ಹಿಂಭಾಗದ ಕಸದ ಕೊಂಪೆಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ದುಷ್ಕರ್ಮಿಗಳು ಹೊಟ್ಟೆ, ಎದೆಭಾಗ, ಕೈ-ಕಾಲುಗಳ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಹತ್ಯೆ (Murder Case) ಮಾಡಿದ್ದರು. ತನಿಖೆಗಿಳಿದ ಪೊಲೀಸರಿಗೆ ಇದೊಂದು ಅನೈತಿಕ ಸಂಬಂಧಕ್ಕೆ ನಡೆದ ಹತ್ಯೆ ಎಂದು ತಿಳಿದು ಬಂದಿದೆ.
ಬಿಹಾರ್ ಮೂಲದ ಸಜ್ಜನ್ ಸಿಂಗ್ (33) ಎಂಬಾತ ಆರ್ಎಂಸಿ ಯಾರ್ಡ್ನಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದ. ಭಾನುವಾರ ಕೊಲೆಯಾದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿತ್ತು. ಈತನ ಪರಿಯಸ್ಥರೇ ಯಾರೋ ಹತ್ಯೆ ಮಾಡಿರಬಹುದೆಂದು ಪೊಲೀಸರು ಅಂದಾಜಿಸಿದರು. ಹತ್ಯೆಯಾದ ಮರುದಿನವೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: Murder Case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ರಾಗಿ ಹೊಲದಲ್ಲಿ ಹೂತುಹಾಕಿದವನು ಅರೆಸ್ಟ್
ರಾಜೇಶ್ ಕುಮಾರ್ ಮತ್ತು ನೇಹ ಕುಮಾರಿ ಬಂಧಿತ ದಂಪತಿಯಾಗಿದ್ದಾರೆ. ಕೊಲೆಯಾದ ಸುಜ್ಜನ್ ಸಿಂಗ್ ಹಾಗೂ ಬಂಧಿತ ದಂಪತಿ ಎಲ್ಲರೂ ಬಿಹಾರ್ ಮೂಲದವರೇ. ಈ ಸುಜ್ಜನ್ ಸಿಂಗ್ ವಿವಾಹಿತೆ ನೇಹ ಕುಮಾರಿ ಜತೆಗೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಇದೇ ವಿಚಾರಕ್ಕೆ ಮೂವರ ನಡುವೆ ಗಲಾಟೆ ನಡೆಯುತ್ತಿತ್ತು.
ಭಾನುವಾರ ರಾತ್ರಿ ಕೂಡ ರಾಜೇಶ್ ಕುಮಾರ್ ಹಾಗೂ ಸುಜ್ಜನ್ ಸಿಂಗ್ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ಮಾರಾಕಾಸ್ತ್ರದಿಂದ ಹಲ್ಲೆ ಮಾಡಿ, ಕತ್ತು ಕೂಯ್ದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ಮಹಾಲಕ್ಷ್ಮಿಲೇಔಟ್ ಪೊಲೀಸರು ಪ್ರಕರಣದ ಜಾಡು ಹಿಡಿದು ಇವರಿಬ್ಬರನ್ನು ಬಂಧಿಸಿದಾಗ ಹತ್ಯೆ ಹಿಂದಿನ ಕಥೆ ತೆರೆದುಕೊಂಡಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ