ಬೆಂಗಳೂರು: ನಗರದ ಕೊಡಿಗೆಹಳ್ಳಿಯ ಧನಲಕ್ಷ್ಮಿ ಲೇಔಟ್‌ನಲ್ಲಿ ತಂದೆಯೇ ಮಗಳನ್ನು ಹೊಡೆದು ಕೊಂದಿದ್ದಾನೆ. ರಮೇಶ್ (60) ಎಂಬಾತ ತನ್ನ ಮಗಳಾದ ಆಶಾ (32)ಳನ್ನು ದೊಣ್ಣೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಮಗಳಿಗೆ ಮದುವೆಯಾಗಿದ್ದರೂ ತವರಲ್ಲೇ ಬಂದು ಇದ್ದಳು. ಈ ವೇಳೆ ತಂದೆಯ ಜತೆ ಆಕೆಗೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಮೇಶ್ ಎಂಬವರ ಮಗಳಾದ ಆಶಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆಯಾಗಿತ್ತು. ಅದರೆ, ಗಂಡನಿಂದ ದೂರವಾಗಿದ್ದ ಆಕೆ ತವರು ಮನೆಯಲ್ಲೇ ಬಂದು ಉಳಿದುಕೊಂಡಿದ್ದಳು.
ಈ ನಡುವೆ, ಆಕೆ ತಂದೆ ಮನೆಯಲ್ಲೇ ಕಾರುಬಾರು ಮಾಡಲು ಶುರು ಮಾಡಿದ್ದಳು. ಮನೆಯವರ ಮೇಲೆ ದಬ್ಬಾಳಿಕೆ ಮಾಡುತ್ತಾ ತಂದೆ, ತಾಯಿ, ತಂಗಿಗೆ ಕುರುಕುಳ ನೀಡುತ್ತಿದ್ದಳೆಂದು ಹೇಳಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿ ಬುಧವಾರ ರಾತ್ರಿ ಮನೆಯಲ್ಲಿ ಜಗಳವಾಗಿದೆ. ಹಿಂದಿನ ಸಿಟ್ಟೆಲ್ಲ ಇದ್ದಿದ್ದರಿಂದ ತಂದೆ ರಮೇಶ್ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ದೊಣ್ಣೆಯ ಹೊಡೆತಕ್ಕೆ ಆಶಾ ಸ್ಥಳದಲ್ಲೇ ಬಿದ್ದು ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ತಂದೆ ರಮೇಶ್‌ನನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಗಗನಸಖಿ ಸಾವು: ಆತ್ಮಹತ್ಯೆ ಅಲ್ಲ ಕೊಲೆ?; ಮಗಳನ್ನು ಪ್ರಿಯಕರನೇ ತಳ್ಳಿದ್ದು ಎಂದು ತಾಯಿ ದೂರು