ಕಲಬುರಗಿ: ಇಲ್ಲಿನ ಜೇವರ್ಗಿ ತಾಲೂಕಿನ ಮುದಬಾಳ ಬಿ ಗ್ರಾಮದ ಕೆಬಿಜೆಎನ್ಎಲ್ ಕೆನಾಲ್ನಲ್ಲಿ ಯುವತಿಯೊಬ್ಬಳ ಶವ ಪತ್ತೆ ಆಗಿದೆ. ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ (Murder Case) ಆಗಿದ್ದು, ಯುವತಿಯ ಗುರುತು ಪತ್ತೆ ಆಗಿಲ್ಲ.
25ರಿಂದ 30 ವರ್ಷದ ಯುವತಿಯಾಗಿರಬಹುದೆಂದು ಅಂದಾಜಿಸಿದ್ದು, ಅತ್ಯಾಚಾರವೆಸಗಿ ಹತ್ಯೆ ಮಾಡಿರಬಹುದೆಂದು ಪೊಲೀಸರು ಮೇಲ್ನೋಟಕ್ಕೆ ಶಂಕಿಸಿದ್ದಾರೆ. ಕೊಲೆಯಾದ ಯುವತಿಯ ಗುರುತು ಪತ್ತೆಗಾಗಿ ಪೊಲೀಸರ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: Chinese Apps Ban: ಚೀನಿ ಲಿಂಕ್ ಹೊಂದಿರುವ 138 ಬೆಟ್ಟಿಂಗ್, 94 ಸಾಲ ನೀಡಿಕೆ ಆ್ಯಪ್ ನಿಷೇಧಿಸಿದ ಭಾರತ
ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.