Site icon Vistara News

Murder Case | ಗಂಡನನ್ನು ಬಿಟ್ಟು ಪ್ರೇಮಕಾವ್ಯ ಬರೆಯಲು ಹೋದವಳು ಪ್ರಿಯಕರನಿಂದಲೇ ಕೊಲೆಯಾದಳು!

murder case ವಿಚ್ಛೇದಿತ ಮಹಿಳೆ ಸಾವು

ಹಾಸನ: ಇಲ್ಲಿನ ಹೊಳೆನರಸೀಪುರ ತಾಲೂಕಿನ ಪಾರಸನಹಳ್ಳಿಯಲ್ಲಿ ಪ್ರಿಯಕರನೊಬ್ಬ ವಿಚ್ಛೇದಿತ ಮಹಿಳೆಯನ್ನು ಕೊಲೆ (Murder Case) ಮಾಡಿ, ತನ್ನದೆ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿರುವ ಆರೋಪವೊಂದು ಕೇಳಿ ಬಂದಿದೆ. ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಸಮೀಪದ ಮದಲಾಪುರ ಗ್ರಾಮದ ಕಾವ್ಯಾ (22) ಮೃತ ದುರ್ದೈವಿ.

ಬಿಬಿಎಂ ಓದಿದ್ದ ಕಾವ್ಯಾ, ಅಕ್ಷಯ್‌ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಕಾಲ ಕಳೆದಂತೆ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಗಂಡನಿಂದ ಕಾನೂನು ಪ್ರಕಾರ ದೂರವಾಗಿದ್ದಳು. ಈ ನಡುವೆ ಪಾರಸನಹಳ್ಳಿಯ ಅವಿನಾಶ್‌ ಎಂಬಾತನೊಂದಿಗೆ ಪ್ರೇಮಾಂಕುರವಾಗಿತ್ತು. ಮದುವೆ ಆಗುವುದಾಗಿ ಹೇಳಿದ್ದ ಅವಿನಾಶ್‌ ಜತೆಗೆ ಕಾವ್ಯಾ ವಾಸವಾಗಿದ್ದಳು. ಆದರೆ ಕಳೆದ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಕಾವ್ಯಾ ಕಾಣೆಯಾಗಿದ್ದಳು. ಮಗಳ ನಾಪತ್ತೆಗೆ ಪ್ರಿಯಕರ ಅವಿನಾಶ್‌ ಕಾರಣವೆಂದು ಕಾವ್ಯಾಳ ಪೋಷಕರು ಆರೋಪಿಸಿದ್ದರು.

ಈ ಸಂಬಂಧ ಪೊಲೀಸರಿಗೂ ದೂರು ನೀಡಿದ್ದು, ತನಿಖೆಗಿಳಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ ಶವವನ್ನು ತಹಸೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಹೊರಗೆ ತೆಗೆಯಲಾಗಿದೆ. ಕಳೆದ ಹದಿನೈದು ದಿನಗಳ ಹಿಂದೆಯೇ ಕೊಲೆ ಮಾಡಿ ಹೂತು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಹೊಳೆನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ | Murugha Seer | ಮುರುಘಾ ಮಠದ ಹಾಸ್ಟೆಲ್‌ನಲ್ಲಿದ್ದ ಅನಾಥ ಮಕ್ಕಳ ದಾಖಲಾತಿ, ಪೋಷಣೆ, ಬಿಡುಗಡೆ ತನಿಖೆಗೆ ಆದೇಶ

Exit mobile version