Site icon Vistara News

Murder Case: ಚಂದ್ರಲೇಔಟ್‌ನಲ್ಲಿ ಹೋಮೋ ಸೆಕ್ಸ್‌ಗೆ ನಕಾರ; ಸುತ್ತಿಗೆಯಿಂದ ತಲೆಗೆ ಹೊಡೆದು, ಕತ್ತರಿಯಿಂದ ಚುಚ್ಚಿ ಕೊಲೆ

murder case

ಬೆಂಗಳೂರು: ಇಲ್ಲಿನ ನಾಯಂಡಹಳ್ಳಿ ಚೆಟ್ಟೀಸ್ ಪೆಟ್ರೋಲ್ ಬಂಕ್ ಬಳಿಯ ಮನೆಯೊಂದರಲ್ಲಿ ಫೆ. 28ರಂದು ವ್ಯಕ್ತಿಯೊಬ್ಬನ ಬರ್ಬರ ಹತ್ಯೆ (Murder Case) ಆಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಇದು ಹಣಕ್ಕಾಗಿ ಅಲ್ಲ ಹೋಮೋ ಸೆಕ್ಸ್‌ಗಾಗಿ ನಡೆದ ಕೊಲೆ ಎಂದು ತಿಳಿದು ಬಂದಿದೆ.

ಲಿಯಾಖತ್ ಅಲಿಖಾನ್ (44) ಎಂಬಾತ ರಾತ್ರಿ ಜಿಮ್‌ಗೆ ಹೋಗಿದ್ದವನು ನಾಪತ್ತೆಯಾಗಿದ್ದ, ಕುಟುಂಬಸ್ಥರಿಂದ ಹುಡುಕಾಟ ನಡೆಸಿದಾಗ ಬೆಳಗಿನ ಜಾವ ಮತ್ತೊಂದು ಮನೆಯಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿತ್ತು.

ಚಂದ್ರಾ ಲೇಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ, ಕಳೆದ ಎರಡು ವರ್ಷಗಳಿಂದ ಆರೋಪಿ ಇಲಿಯಾಸ್ ಜತೆಗೆ ಲಿಯಾಖತ್‌ ಅಲಿಖಾನ್‌ ಹೋಮೋ ಸೆಕ್ಸ್‌ನಲ್ಲಿದ್ದ ಎಂದು ತಿಳಿದು ಬಂದಿದೆ. ಕೊಲೆಯಾದ ಎರಡು ದಿನಗಳ ಹಿಂದಷ್ಟೇ ಲಿಯಾಖತ್‌ ಎರಡನೇ ಮದುವೆಯಾಗಿದ್ದ. ಆದರೆ, ಲಿಯಾಖತ್‌ ಜತೆ ಹೋಮೋ ಸೆಕ್ಸ್‌ನಲ್ಲಿ ಇದ್ದ ಕಾರಣದಿಂದಾಗಿ ಇಲಿಯಾಸ್‌ ತನ್ನ ಎಂಗೇಜ್‌ಮೆಂಟ್ ಅನ್ನೇ ಕ್ಯಾನ್ಸಲ್‌ ಮಾಡಿಕೊಂಡಿದ್ದ.

ಇದನ್ನೂ ಓದಿ: Murder Case: ಸ್ನೇಹಿತನನ್ನೇ ಕಿಡ್ನ್ಯಾಪ್‌ ಮಾಡಿ ಪೆಟ್ರೋಲ್‌ ಸುರಿದು ಹತ್ಯೆ ಮಾಡಿದ ಮಿತ್ರದ್ರೋಹಿಗಳು; ವೈದ್ಯ ಕೊಲೆಯಾಗಿದ್ದು ಏಕೆ?

ಆದರೆ, ಇತ್ತೀಚೆಗೆ ಇಲಿಯಾಸ್‌ಗೆ ಮನೆಯಲ್ಲಿ ಹುಡುಗಿ ಹುಡುಕುತ್ತಾ ಇದ್ದರು ಎಂದು ತಿಳಿದುಬಂದಿದೆ. ಆದರೆ ಲಿಯಾಖತ್‌ ಜತೆಗಿನ ಹೋಮೋ ಸೆಕ್ಸ್‌ ಬಗ್ಗೆ ಮನೆಯವರಿಗೆ ಗೊತ್ತಾಗಿ ಬಿಟ್ಟರೆ ಏನು ಕಥೆ ಎಂಬ ಚಿಂತೆಗೆ ಜಾರಿದ್ದ. ಕೊಲೆಯಾಗುವ ಮುಂಚೆ ಹೋಮೋ ಸೆಕ್ಸ್‌ನಲ್ಲಿ ತೊಡಗಿದ್ದಾಗ, ಇಲಿಯಾಸ್‌ನ ಭವಿಷ್ಯದ ವಿಚಾರವಾಗಿ ಗಲಾಟೆ ಶುರುವಾಗಿದೆ. ಗಲಾಟೆ ಅತಿರೇಕಕ್ಕೆ ತಿರುಗಿ ಇಲಿಯಾಸ್‌ ಸಿಟ್ಟಿನಿಂದ ಸುತ್ತಿಗೆಯಿಂದ ಲಿಯಾಖತ್‌ನ ತಲೆಗೆ ಹೊಡೆದಿದ್ದಾನೆ. ಬಳಿಕ ಕತ್ತರಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version