Site icon Vistara News

Murder Case: ಡಂಬಲ್ಸ್‌ನಿಂದ ಹೊಡೆದು ಪತ್ನಿಯ ಕೊಂದ ಪಾಪಿ ಪತಿ; ಅನೈತಿಕ ಸಂಬಂಧ ಶಂಕೆಯಿಂದ ಕೃತ್ಯ

#image_title

ಬೆಂಗಳೂರು: ಇಲ್ಲಿನ ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್‌ನಲ್ಲಿ ಪಾಪಿ ಪತಿಯೊಬ್ಬ ಶೀಲ ಶಂಕಿಸಿ ಡಂಬಲ್ಸ್‌ನಿಂದ ಹೊಡೆದು ಪತ್ನಿಯನ್ನು ಭೀಕರವಾಗಿ ಹತ್ಯೆ (Murder Case) ಮಾಡಿದ್ದಾನೆ. ಲಿದಿಯಾ (೪೪) ಹತ್ಯೆಯಾದ ಮಹಿಳೆ.

ಮೋರಿಸ್‌ ಹಾಗೂ ಲಿದಿಯಾ

ಲಿದಿಯಾ ಪತಿ ಮೋರಿಸ್‌ ಗುರುವಾರ ಬೆಳಗ್ಗೆ ಹತ್ಯೆ ಮಾಡಿದ್ದಾನೆ. ಪತ್ನಿಗೆ ಅನೈತಿಕ ಸಂಬಂಧ ಇದೆ ಎಂದು ಶಂಕಿಸಿದ್ದ ಎಂದು ಹೇಳಲಾಗಿದೆ. ಆಗಾಗ ಇಬ್ಬರ ಮಧ್ಯೆ ಇದೇ ವಿಷಯಕ್ಕೆ ಜಗಳ ನಡೆಯುತ್ತು. ಗುರುವಾರ ಬೆಳಗ್ಗೆ ಮಕ್ಕಳು ಶಾಲೆಗೆ ಹೋದಾಗ ಇಬ್ಬರ ಮಧ್ಯೆ ಇದೇ ವಿಚಾರಕ್ಕೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: Sharavathi Project : ಶರಾವತಿ ಸಂತ್ರಸ್ತರಿಗೆ ಭೂಮಿ ಒದಗಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಬಿ.ಎಸ್‌. ಯಡಿಯೂರಪ್ಪ

ಜಗಳದ ವೇಳೆ ವಿಪರೀತ ಕೋಪಗೊಂಡ ಮೋರಿಸ್‌, ಮನೆಯಲ್ಲಿದ್ದ ಡಂಬಲ್ಸ್ ತೆಗೆದುಕೊಂಡು ಪತ್ನಿಯ ತಲೆಗೆ ಸಾಯುವವರೆಗೂ ಹೊಡೆದಿದ್ದಾನೆ. ಆರೋಪಿಯನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿಗೆ ಮೂವರು ಗಂಡು ಮಕ್ಕಳಿದ್ದಾರೆ.

Exit mobile version