Site icon Vistara News

Murder Case: ವಿಚ್ಛೇದಿತ ಪತ್ನಿಯನ್ನು ಕೊಲೆಗೈದು ಮಗುವಿನೊಂದಿಗೆ ಗಂಡ ಪರಾರಿ

varthur police station

#image_title

ಬೆಂಗಳೂರು: ಇಲ್ಲಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ಹತ್ಯೆ (Murder Case) ಮಾಡಿ ಮಗುವಿನೊಂದಿಗೆ ಪತಿ ಪರಾರಿ ಆಗಿರುವ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಮಜೀದ್ ಎಂಬಾತ ಪತ್ನಿ ಮೋನಿಷಾಳನ್ನು (30) ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಮನೆ ಮಾಲೀಕ ಅನುಮಾನಗೊಂಡು ಮನೆ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಬಾಡಿಗೆ ಹೊರೆಗಾಗಿ ಒಟ್ಟಿಗೆ ಇದ್ದ ವಿಚ್ಛೇದಿತರು

ಮಜೀದ್‌ ಮೋನಿಷಾಳನ್ನು ಎರಡನೇ ಮದುವೆಯಾಗಿದ್ದ. ಆದರೆ 15 ದಿನಗಳ ಹಿಂದಷ್ಟೇ ಇಬ್ಬರಿಗೂ ವಿಚ್ಛೇದನವಾಗಿತ್ತು. ಈ ವಿಚಾರವನ್ನು ಮೋನಿಷಾ ಪಕ್ಕದ ಮನೆಯವರಿಗೆ ಹೇಳಿದ್ದಾಳೆ. ವಿಚ್ಛೇದನ ಆಗಿದ್ದರೂ ಕೂಡ ಒಂದೇ ಮನೆಯಲ್ಲಿಯೇ ಇರೋಣ ಎಂದು ಮಜೀದ್‌ ಹೇಳಿದ್ದನಂತೆ. ಮನೆ ಬಾಡಿಗೆ ಹೊರೆಯಾಗುತ್ತದೆ, ಇಬ್ಬರು ಒಟ್ಟಿಗೇ ಇದ್ದರೆ ಹಂಚಿಕೊಳ್ಳಬಹುದು ಎಂದಿದ್ದನಂತೆ. ಹೀಗೆ ಜತೆಯಾಗಿದ್ದ ಇವರಿಬ್ಬರಿಗೆ ಯಾವುದೋ ವಿಚಾರವಾಗಿ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿ ಮಜೀದ್‌ ಕೋಪಗೊಂಡವನೇ ಮೋನಿಷಾಳನ್ನು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: Love Tragedy: ಆಂಟಿ ಪ್ರೀತ್ಸೆ ಎಂದ ಬಿಎಂಟಿಸಿ ಚಾಲಕ; ಒಲ್ಲೆ ಎಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ!

ಹತ್ಯೆ ಬಳಿಕ ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಮನೆಗೆ ಬೀಗ ಹಾಕಿ ಅಲ್ಲಿಂದ ಪರಾರಿ ಆಗಿದ್ದಾನೆ. ಸದ್ಯ, ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮಜೀದ್‌ಗಾಗಿ ಹುಡುಕಾಟ ನಡೆಯುತ್ತಿದೆ.

Exit mobile version