ಕಲಬುರಗಿ: ಶೀಲ ಶಂಕಿಸಿ ಪಾಪಿ ಪತಿಯೊಬ್ಬ ಪತ್ನಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಅಂಬಿಕಾ ನಗರದಲ್ಲಿ ನಡೆದಿದೆ. ಫರೀದಾ ಬೇಗಂ (39) ಮೃತ ದುರ್ದೈವಿ.
ಫರೀದಾ ಬೇಗಂ ರಾತ್ರಿ ನಿದ್ದೆಗೆ ಜಾರಿದಾಗ ಪತಿ ಎಜಾಜ್ ಅಹ್ಮದ್ ಮನೆಗೆ ಬಂದವನೇ ಆಕೆಯ ತಲೆ ಮೇಲೆ ದೊಡ್ಡ ಗಾತ್ರದ ಕಲ್ಲು ಎತ್ತಿಹಾಕಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ ಎಜಾಜ್ ಹಾಗೂ ಫರೀದಾ ಬೇಗಂ ಇಬ್ಬರೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ, ಎಜಾಜ್‌ಗೆ ಪತ್ನಿಯ ಶೀಲ ಶಂಕಿಸಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವೂ ಇದೆ. ಫರೀದಾ ಬೇಗಂಳನ್ನು ಶಾಲೆಗೆ ಹೋಗದಂತೆ ನಿತ್ಯವೂ ಪೀಡಿಸುತ್ತಿದ್ದ ಎನ್ನಲಾಗಿದೆ. ಆದರೆ, ಇದಕ್ಕೆ ಕಿಮ್ಮತ್ತು ಕೊಡದೆ ಇದ್ದಾಗ ಪತ್ನಿಯ ತಲೆಗೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: Ragging Case: ವಿಜಯಪುರದಲ್ಲಿ ಕಾಲೇಜು ಹುಡುಗಿಯರ ಚುಡಾಯಿಸುತ್ತಿದ್ದರಿಗೆ ಬಿತ್ತು ಧರ್ಮದೇಟು
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಟೇಷನ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರವಾನೆ ಮಾಡಲಾಗಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.