ಚಿಕ್ಕಮಗಳೂರು: ಪತಿಯ ಅನೈತಿಕ ಸಂಬಂಧಕ್ಕೆ ಪತ್ನಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಪತ್ನಿಗೆ ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ ಲ್ಯಾಬ್ ಟೆಕ್ನೀಷಿಯನ್ ಮುಖವಾಡ ಬಯಲಾಗಿದೆ. ಪತ್ನಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಂದಿರುವುದು ಮರಣೋತ್ತರ ಪರೀಕ್ಷೆಯಿಂದ (Murder case) ಡೆತ್ ಸೀಕ್ರೆಟ್ ರಿವಿಲ್ ಆಗಿದೆ.
ಆರೋಗ್ಯವಾಗಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ (Suspicious death) ಮನೆಯಲ್ಲೇ ಮೃತಪಟ್ಟಿದ್ದ ಘಟನೆ ಚಿಕ್ಕಗಳೂರಿನ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿತ್ತು. ಶ್ವೇತಾ (31) ಮೃತ ದುರ್ದೈವಿ. ಇತ್ತ ತರಾತುರಿಯಲ್ಲಿ ಶ್ವೇತಾಳ ಅಂತ್ಯಕ್ರಿಯೆಗೆ ಪತಿ ಕುಟುಂಬಸ್ಥರು ಸಿದ್ಧತೆಯನ್ನು ನಡೆಸುತ್ತಿದ್ದರು. ಇದರಿಂದ ಅನುಮಾನಗೊಂಡ ಮೃತಳ ಪೋಷಕರು ಅಂತ್ಯಕ್ರಿಯೆಯನ್ನು ಅರ್ಧಕ್ಕೆ ತಡೆದಿದ್ದರು. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿ, ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು.
ಇದೀಗ ಶ್ವೇತಾಳ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಮೃತದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಜತೆಗೆ ದೇಹದಲ್ಲಿ ಗಾಯದ ಗುರುತಿದೆ. ಹೀಗಾಗಿ ಗೋಡಿಬೀಡು ಪೋಲಿಸರು ಪತಿ ದರ್ಶನ್‌ನನ್ನು ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಈಗಾಗಲೇ ದರ್ಶನ್ ವಿರುದ್ಧ ಗೋಡಿಬೀಡು ಪೊಲೀಸ್ ಠಾಣೆಯಲ್ಲಿ ಶ್ವೇತಾಳ ಪೋಷಕರು ದೂರು ದಾಖಲಿಸಿದ್ದರು, 302 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೆಂಡ್ತಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಂದನೇ ಲ್ಯಾಬ್ ಟೆಕ್ನೀಷಿಯನ್! ಅರ್ಧಕ್ಕೆ ನಿಂತ ಅಂತ್ಯಕ್ರಿಯೆ
ಏನಿದು ಪ್ರಕರಣ?
ಮೂರು ವರ್ಷದ ಹಿಂದೆ ಶ್ವೇತಾ ಹಾಗೂ ದರ್ಶನ್ ಪ್ರೀತಿಸಿ ಮದುವೆ ಆಗಿದ್ದರು. ಮೊದಮೊದಲು ಇವರ ಮದುವೆಯನ್ನು ಪೋಷಕರು ನಿರಾಕರಿಸಿದ್ದರು. ಅನಂತರ ಅವರೇ ನಿಂತೂ ಮತ್ತೊಮ್ಮೆ ಮದುವೆ ಮಾಡಿಸಿದ್ದರು. ಆದರೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಶ್ವೇತಾ (31) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು.
ದರ್ಶನ್ ಮತ್ತು ಶ್ವೇತಾ 4 ದಿನದ ಹಿಂದೆ ಬೆಂಗಳೂರಿನಿಂದ ದೇವವೃಂದಕ್ಕೆ ಆಗಮಿಸಿದ್ದರು. ಆಗ ಚೆನ್ನಾಗಿದ್ದ ಮಗಳು, ಹೀಗೆ ದಿಢೀರ್ ಸಾವು ಅನುಮಾನಕ್ಕೆ ಕಾರಣ ಮಾಡಿಕೊಟ್ಟಿತ್ತು. ಪತಿ ದರ್ಶನ್ ಶ್ವೇತಾಳಿಗೆ ಹೃದಯಘಾತವಾಗಿ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದ.
ಮಗಳ ಸಾವಿನ ಸುದ್ದಿಯಿಂದ ಪೋಷಕರು ಆಘಾತಗೊಂಡಿದ್ದರು. ಗಾಬರಿಯಿಂದಲೇ ಮಗಳನ್ನು ನೋಡಲು ಬಂದವರಿಗೆ, ಅಲ್ಲಿನ ವಾತಾವರಣ ತುಸು ಅನುಮಾನ ಮೂಡುವಂತೆ ಮಾಡಿತ್ತು. ದರ್ಶನ್ ಕುಟುಂಬಸ್ಥರು ಆತುರದಲ್ಲಿ ಅಂತ್ಯಕ್ರಿಯೆಯನ್ನು ಮಾಡಲು ಮುಂದಾಗಿದ್ದರು. ಹೀಗಾಗಿ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಮೃತಳ ಪೋಷಕರು, ಅಂತ್ಯಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿ ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದರು. ಶ್ವೇತಾಳ ಪತಿ ದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನೇ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿರುವ ಆರೋಪವನ್ನು ಶ್ವೇತಾ ಪೋಷಕರು ಮಾಡಿದ್ದರು.
ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ
ಆರೋಪಿ ದರ್ಶನ್ ಪತ್ನಿ ಶ್ವೇತಾಗೆ ಯಮಾರಿಸಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಮದುವೆ ಆಗಿ ಪತಿಯಿಂದ ದೂರಾಗಿದ್ದ ವಿವಾಹಿತೆಯೊಂದಿಗೆ ಹತ್ತಿರವಾಗಿದ್ದ. ಪ್ರೀತಿಸಿ ಮದುವೆ ಆಗಿದ್ದ ಪತಿಯನ್ನು ದೂರ ಮಾಡಿ, ವಿವಾಹಿತೆಯ ಮೋಹಕ್ಕೆ ಸಿಲುಕಿದ್ದ.
ಈ ವಿಷಯ ತಿಳಿದ ಶ್ವೇತಾ, ಪತಿ ದರ್ಶನ್‌ನಿಂದ ಆದ ಮೋಸಕ್ಕೆ ನೊಂದಿದ್ದಳು. ಆಕೆಯ ಸಹವಾಸ ಮಾಡಲ್ಲ ಇನ್ನು ಮುಂದೆ ಎಂದವನು ಪದೇಪದೆ ವಿವಾಹಿತೆಯೊಂದಿಗೆ ಮಾತಾಡುವುದು, ಮಸೇಜ್ ಮಾಡುವುದು, ಹೊರಗೆ ಸುತ್ತಾಡುವುದು ಮಾಡುತ್ತಿದ್ದ. ಕೊನೆಗೆ ಶ್ವೇತಾ, ದರ್ಶನ್ ಹಾಗೂ ಅನೈತಿಕ ಸಂಬಂಧ ಹೊಂದಿದ್ದ ಅಶ್ವಿನಿಯನ್ನು ಮನೆಗೆ ಕರೆಸಿ ಬುದ್ಧಿ ಮಾತನ್ನು ಹೇಳಿ ದೂರ ಇರುವಂತೆ ಹೇಳಿದ್ದಳು.
ಪತಿ ಆಫರ್ ಹೊಂದಿದ್ದ ಅಶ್ವಿನಿಯೊಟ್ಟಿಗೆ ಶ್ವೇತಾ ಮಾತನಾಡಿರುವ ಆಡಿಯೊವೊಂದು ವೈರಲ್ ಆಗಿದೆ. ಆಡಿಯೋದಲ್ಲಿ ಶ್ವೇತಾ ಪತಿಯಿಂದ ದೂರ ಇರುವಂತೆ ಅಶ್ವಿನಿ ಬಳಿ ಕೇಳಿಕೊಂಡಿದ್ದಾಳೆ. ಇತ್ತ ಅಶ್ವಿನಿಯು ದೂರಾಗುವುದು ಹೇಳಿದ್ದಾಳೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ