ಕಲಬುರಗಿ : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರ್ ಕೆ ಗ್ರಾಮದಲ್ಲಿ ಪಾಪಿ ಪತಿಯೊಬ್ಬ ಪತ್ನಿಗೆ ಗುಂಡು ಹಾರಿಸಿ (Shoot out) ಹತ್ಯೆ (Murder case) ಮಾಡಿದ್ದಾನೆ. ಹನಮವ್ವ (36) ಮೃತ ದುರ್ದೈವಿ. ಬಸವರಾಜ್ ಎಂಬಾತ ಗುಂಡು ಹಾರಿಸಿದ ಪತಿಯಾಗಿದ್ದಾನೆ.
ಹನಮವ್ವ ಹಾಗೂ ಬಸವರಾಜ್ ಮದುವೆ ಆದಾಗಿಂದ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಗಂಡನ ಕಿರುಕುಳಕ್ಕೆ ಬೇಸತ್ತ ಹನಮವ್ವ ತವರು ಮನೆ ಸೇರಿದ್ದಳು. ಇತ್ತ ತವರುಮನೆಯಲ್ಲಿದ್ದ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಚಿತ್ತಾಪೂರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಚಿತ್ತಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Udupi News : ಅನ್ಲೋಡ್ ಮಾಡುವಾಗ ಗ್ರಾನೈಟ್ ಅಡಿ ಸಿಲುಕಿ ಕಾರ್ಮಿಕರು ಮೃತ್ಯು!
ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ಸಾವು
ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೊಬ್ಬಳ ಮೃತದೇಹವು ಪತ್ತೆ ಆಗಿದೆ. ಶ್ವೇತ ಮೃತ ದುರ್ದೈವಿ.
ಶ್ವೇತಾ ಪೋಷಕರ ವಿರೋಧದ ನಡುವೆಯು ಪ್ರೀತಿಸಿ ಅಂತರಜಾತಿ ವಿವಾಹವಾಗಿದ್ದಳು. ಮಹೇಶ್ ಎಂಬಾತನನ್ನು ಮದುವೆ ಆಗಿ ತಾವರೆಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಮೃತಳ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಮನೆಯಲ್ಲಿ ಕೂಡಾಕಿ ಹೊಡೆದು ಹತ್ಯೆ ಮಾಡಿ ಬಳಿಕ ನೇಣು ಹಾಕಿಕೊಂಡಿರುವುದಾಗಿ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮದುವೆಯಾದ ನಂತರ ಜಾತಿ ಹಾಗೂ ವರದಕ್ಷಿಣೆ ಹೆಸರಲ್ಲಿ ಗಂಡನ ಮನೆಯವರು ಶ್ವೇತಾಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಕಿಡಿಕಾರಿದ್ದಾರೆ. ಕಿರುಕುಳ ನೀಡಿ ನಂತರ ಕೊಲೆ ಮಾಡಿ ಆತ್ಮಹತ್ಯೆ ಡ್ರಾಮ ಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಮಗಳಿಗೆ ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ