Site icon Vistara News

Murder Case : ಮಲಗಿದ್ದವಳ ಮೇಲೆ ಕಲ್ಲು ಎತ್ತಿಹಾಕಿ ಕೊಂದ; ಬಳಿಕ ಮರಕ್ಕೆ ನೇಣು ಬಿಗಿದುಕೊಂಡ ಕುಡುಕ ಪತಿ!

Police visit sopt

ರಾಯಚೂರು: ರಾಯಚೂರಿನ ಮಾನ್ವಿ ತಾಲೂಕಿನ ರಾಜೋಳ್ಳಿ ಗ್ರಾಮದಲ್ಲಿ ಪತ್ನಿಯನ್ನು ಹತ್ಯೆಗೈದು (Murder case) ಪತಿ ನೇಣಿಗೆ ಶರಣಾಗಿದ್ದಾನೆ. ಅಂಬಮ್ಮ (31) ಹತ್ಯೆಯಾದ ದುರ್ದೈವಿ.

ಅಂಬಮ್ಮ ಪತಿ ಖಾಸಿಂಮಪ್ಪ ಎಂಬಾತ ಪತ್ನಿ ಮಲಗಿದ್ದಾಗ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಕೊಲೆಗೈದು ಬಳಿಕ ಅರೋಲಿ ಸೀಮಾದ ಅಡವಿಯಲ್ಲಿ ನೇಣಿಗೆ ಶರಣಾಗಿದ್ದಾನೆ.

ಕೊಲೆ ಬಳಿಕ ಖಾಸಿಂಮಪ್ಪನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಮರಕ್ಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದೆ. ಖಾಸಿಂಮಪ್ಪ ಕುಡಿತದ ಚಟವನ್ನು ಮೈಗೆ ಅಂಟಿಸಿಕೊಂಡಿದ್ದ. ನಿತ್ಯ ಕುಡಿದು ಬಂದು ಪತ್ನಿಗೆ ಮಾನಸಿಕ , ದೈಹಿಕವಾಗಿ ಕಿರುಕುಳವನ್ನು ನೀಡುತ್ತಿದ್ದ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಇತ್ತ ತಂದೆ-ತಾಯಿ ಮೃತಪಟ್ಟಿದ್ದರಿಂದ ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Accident Case : ಚಲಿಸುತ್ತಿದ್ದಾಗಲೇ ಸುಟ್ಟು ಕರಕಲಾದ ಕಾರು; ಬೈಕ್‌ಗೆ ಬಸ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

3 ವರ್ಷದ ಮಗುವಿನ ಕತ್ತು ಹಿಸುಕಿ ಬಾವಿಗೆ ಹಾರಿದ ತಾಯಿ

ತಾಯಿಯೊಬ್ಬಳು ತನ್ನ ಮೂರು ವರ್ಷದ ಮಗುವಿನ ಕತ್ತು ಹಿಸುಕಿ ಕೊಂದು ತಾನು ಬಾವಿಗೆ ಹಾರಿ ಆತ್ಮಹತ್ಯೆ (Mother Kills daugher and self) ಮಾಡಿಕೊಂಡಿದ್ದಾಳೆ. ಕೌಟುಂಬಿಕ ಕಲಹದ (Family dispute) ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ (Mother-child death) ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ. ಸುಧಾಮಣಿ (32) ಎಂಬ ಮಹಿಳೆ ಮೂರು ವರ್ಷದ ಮಗು (Three year old daughter killed) ಸಾನ್ವಿಯ ಕತ್ತು ಹಿಸುಕಿ ಕೊಂದು ಬಳಿಕ ತಾನು ಅಲ್ಲೇ ಇರುವ ಬಾವಿಗೆ ಹಾರಿ ಪ್ರಾಣ (Mother jumps into well) ಕಳೆದುಕೊಂಡಿದ್ದಾಳೆ.

ಸುಧಾಮಣಿ ಮತ್ತು ರವಿ, ಅವರು ವಾಸಿಸುತ್ತಿದ್ದ ಮನೆ, ಸುಧಾಮಣಿ ಹೆತ್ತವರ ಅಳಲು

ಸುಧಾಮಣಿ ಹಾಗು ಪತಿ ರವಿ ನಡುವೆ ನಡುವೆ ಐದು ವರ್ಷದ ಹಿಂದೆ ಮದುವೆ ನಡೆದಿತ್ತು. ಇವರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು. ಕೌಟುಂಬಿಕ ಕಲಹದಿಂದ ಆಕೆಗೆ ನೆಮ್ಮದಿ ಇರಲಿಲ್ಲ ಎಂದು ಹೇಳಲಾಗಿದೆ.

ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐದು ವರ್ಷದಿಂದ ಒಂದು ದಿನವೂ ನೆಮ್ಮದಿ ಇಲ್ಲ

ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ ಸುಧಾಮಣಿಯ ತಾಯಿ ತನ್ನ ಮಗಳು ಕಳೆದ ಐದು ವರ್ಷಗಳಿಂದಲೂ ನೋವಿನಲ್ಲೇ ಜೀವನ ಕಳೆದಿದ್ದಾಳೆ ಎಂದರು. ಗಂಡ ರವಿ, ಮನೆಯವರು ಚಿತ್ರಹಿಂಸೆ ನೀಡಿದ್ದಾರೆ ಎಂದರು.

ಕುಡಿದು ಬಂದು ಗಲಾಟೆ ಮಾಡುತ್ತಿದ್ದ ರವಿ ಕೆಲವೊಮ್ಮೆ ಮೂರ್ನಾಲ್ಕು ದಿನವೂ ಬರುತ್ತಲೇ ಇರಲಿಲ್ಲ. ಕೊನೆಗೆ ನಾವೇ ಹೋಗಿ ಫೋನ್‌ ಮಾಡಿ ಕರೆಸಿ ರಾಜೀ ಮಾಡುತ್ತಿದ್ದೆವು. ಅವನು ಮನೆಗೆ ಬಂದರೂ ನೆಮ್ಮದಿ ಇಲ್ಲ, ಬಾರದಿದ್ದರೆ ದಿಕ್ಕಿಲ್ಲ ಎಂಬ ಸ್ಥಿತಿಯಲ್ಲಿದ್ದಳು ಸುಧಾಮಣಿ ಎಂದರು.

ಹಾಗಂತ ನಿನಗೆ ಈ ನರಕ ಬೇಡ, ನಮ್ಮ ಮನೆಗೆ ಬಂದು ಬಿಡು ಎಂದು ಕೇಳಿದರೂ ಆಕೆ ಕೇಳುತ್ತಿರಲಿಲ್ಲ. ನಿಮಗೆ ಭಾರವಾಗಿ ಬದುಕುವುದಿಲ್ಲ ಅನ್ನುತ್ತಿದ್ದಳು. ಈಗ ಅವಳೇ ಹೋಗಿಬಿಟ್ಟಿದ್ದಾಳೆ. ಪುಟ್ಟ ಮಗುವೂ ಇಲ್ಲ ಎಂದು ನೋವಿನಿಂದ ಹೇಳಿದರು.

ಕುತ್ತಿಗೆ ಹಿಸುಕಿ ಚಾಪೆಯಲ್ಲಿ ಮಲಗಿಸಿ…

ಶನಿವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸುಧಾಮಣಿ ಮನೆಯಿಂದ ಹೊರ ಹೋಗಿದ್ದನ್ನು ಕೆಲವರು ನೋಡಿದ್ದಾರೆ. ಆದರೆ, ಆಕೆ ಮರಳಿ ಬಂದಿಲ್ಲ. ಎಷ್ಟು ಹೊತ್ತಾದರೂ ಬಂದಿಲ್ಲವಲ್ಲ, ಮಗು ಏನು ಮಾಡುತ್ತಿದೆ ಎಂದು ಒಳಗೆ ಇಣುಕಿ ನೋಡಿದರೆ ಅದು ಚೆನ್ನಾಗಿ ನಿದ್ದೆ ಮಾಡಿದಂತೆ ಮಲಗಿದೆ. ಆದರೂ ಸಂಶಯದಿಂದ ಅಕ್ಕಪಕ್ಕದವರು ಹೋಗಿ ನೋಡಿದರೆ ಮಗು ಮಲಗಿದ್ದು ನಿಜ. ಆದರೆ ಜೀವ ಇರಲಿಲ್ಲ.

ಸುಮ್ಮನೆ ಮಲಗಿದಂತೆ ಕಾಣುತ್ತಿದೆ ಮಗು..

ಬಹುಶಃ ಸುಧಾಮಣಿ ಮಗುವನ್ನು ಕತ್ತು ಹಿಸುಕಿ ಕೊಂದು ಹಾಗೇ ಚಾಪೆಯಲ್ಲಿ ಮಲಗಿಸಿ, ಅದರ ಮೇಲೊಂದು ಬಟ್ಟೆಯನ್ನು ಹಾಸಿ ಹೋಗಿದ್ದಾಳೆ ಅನಿಸುತ್ತದೆ. ಈ ನಡುವೆ ಸುಧಾಮಣಿ ಎಲ್ಲಿದ್ದಾಳೆ ಎಂದು ಹುಡುಕಿದರೆ ಆಕೆಯ ಚಪ್ಪಲಿ ಅಲ್ಲಿನ ಒಂದು ಬಾವಿಯ ಬಳಿ ಕಾಣಿಸಿದೆ. ಬಗ್ಗಿ ನೋಡಿದರೆ ಒಳಗೆ ಸುಧಾಮಣಿಯ ಶವ ಕಾಣಿಸಿದೆ. ಅದನ್ನು ಮೇಲೆತ್ತಲಾಗಿದೆ.

ಕಣ್ಮರೆಯಾಗಿದ್ದಾನೆ ರವಿ, ಅವನ ಕೈವಾಡವಿದೆಯಾ?

ಈ ನಡುವೆ, ಸುಧಾಮಣಿಯ ಪತಿ ರವಿ ಘಟನೆ ನಡೆದು ಹಲವು ಗಂಟೆಗಳೇ ಕಳೆದರೂ ನಾಪತ್ತೆಯಾಗಿದ್ದಾನೆ. ಇಡೀ ಊರಿಗೇ ವಿಷಯ ಗೊತ್ತಾಗಿದೆ. ಹಾಗಿದ್ದರೂ ಅವನು ಬಂದಿಲ್ಲ ಎಂದರೆ ಒಂದೋ ಅವನು ಭಯದಿಂದ ತಪ್ಪಿಸಿಕೊಂಡಿರಬೇಕು. ಇಲ್ಲವೇ ಈ ಸಾವಿನಲ್ಲಿ ಅವನ ಕೈವಾಡವೂ ಇರಬೇಕು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಊರಿನಲ್ಲಿ ತಾಯಿ ಮಗುವಿನ ಸಾವು ಎಲ್ಲರನ್ನೂ ಕಂಗೆಡಿಸಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version