ಕಲಬುರಗಿ: ಅವರಿಬ್ಬರು ಒಬ್ಬರಿಗೊಬ್ಬರು ಆಸರೆಯಾಗಿ ಇರಬೇಕಾದ ಇಳಿ ವಯಸ್ಸಿನ ದಂಪತಿ. ಮಕ್ಕಳು-ಮೊಕ್ಕಳೊಂದಿಗೆ ನೆಮ್ಮದಿಯಾಗಿ ಇರಬೇಕಾದವರು, ಈಗ ಒಬ್ಬರು ಜೈಲುಪಾಲಾಗಿದ್ದರೆ, ಮತ್ತೊಬ್ಬರು ಮಸಣ ಸೇರಿದ್ದಾರೆ. 62ರ ವೃದ್ಧ ಪತಿಯೊಬ್ಬ ಕಟ್ಟಿಗೆಯಿಂದ ಹೊಡೆದು 60 ವರ್ಷದ ಪತ್ನಿಯನ್ನೇ ಬರ್ಬರವಾಗಿ ಹತ್ಯೆ (Murder case) ಮಾಡಿದ್ದಾರೆ.
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕಾಶಮ್ಮ (60) ಪತಿಯಿಂದಲೇ ಕೊಲೆಯಾದವರು. ಪತ್ನಿ ಕಾಶಮ್ಮಳನ್ನು ಕೊಲೆ ಮಾಡಿ ಪತಿ ಮಾರುತಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅನೈತಿಕ ಸಂಬಂಧ ಇದ್ದ ಕಾರಣಕ್ಕೆ ಪತ್ನಿಯನ್ನು ಕೊಲೆಗೈದಿದ್ದಾಗಿ ಮಾರುತಿ ಹೇಳಿಕೆ ನೀಡಿದ್ದಾರೆ. ಇದೇ ವಿಷಯಕ್ಕೆ ಆಗಾಗ ಇವರಿಬ್ಬರು ನಡುವೆ ಗಲಾಟೆ ನಡೆಯುತ್ತಿತ್ತು. ಇಂದು ಅದೇ ಕಾರಣಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ಮಾರುತಿ ಹೇಳಿಕೆ ಪಡೆದು ಘಟನಾ ಸ್ಥಳಕ್ಕೆ ರಟಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Road Accident : ಬೈಕ್‌ನಿಂದ ಸ್ಕಿಡ್ ಆಗಿ ಬಿದ್ದ ಶಿಕ್ಷಕ; ಲಾರಿ ಹರಿದು ಸಾವು
ಅಣ್ಣನ ಜತೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಕೊಂದ ತಮ್ಮ!
ಕೋಲಾರ: ಗಂಡನನ್ನು ಕಳೆದುಕೊಂಡ ಮಹಿಳೆಯೊಬ್ಬರನ್ನು (Widow woman) ಚಾಕುವಿನಿಂದ ಇರಿದು ಕೊಲೆ (Murder Case) ಮಾಡಿದ ಘಟನೆ ಕೋಲಾರ ಜಿಲ್ಲೆಯ (Kolara News) ಕೆಜಿಎಫ್ ತಾಲ್ಲೂಕಿನ ಕೊತ್ತೂರು ಗ್ರಾಮದಲ್ಲಿ ನಡೆದಿದೆ. ತೇಜಸ್ವಿನಿ (35) ಕೊಲೆಯಾದ ಮಹಿಳೆ.
ಕೊತ್ತೂರು ಗ್ರಾಮದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ತೇಜಸ್ವಿನಿಯನ್ನು ಬೇತಮಂಗಲದ ಮುರಳಿ, ರಂಜಿತ್ ಹಾಗೂ ಇನ್ನಿಬ್ಬರು ಸೇರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮುರಳಿ ಮತ್ತು ರಂಜಿತ್‌ರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ.
ವಿಧವೆಯಾಗಿರುವ ತೇಜಸ್ವಿನಿ ಜತೆಗೆ ಬೇತಮಂಗಲ ಮೂಲದ ಚಲಪತಿ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಈ ಕಾರಣಕ್ಕಾಗಿ ಚಲಪತಿಯ ಸಹೋದರ ಮುರಳಿ ಈ ಕೊಲೆಯನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.
ತೇಜಸ್ವಿನಿ ಮತ್ತು ಚಲಪತಿಗೆ ಇತ್ತೀಚೆಗೆ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. ಚಲಪತಿ ಯಶಸ್ವಿನಿಗೆ ಆಸರೆಯಾಗಿ ನಿಂತಿದ್ದ. ಆದರೆ, ಅದೇ ವೇಳೆ ಚಲಪತಿ ತನ್ನ ಕುಟುಂಬವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಅವನ ಮನೆಯವರನ್ನು ಕೆರಳಿಸಿತ್ತು. ಹೀಗಾಗಿ ಚಲಪತಿಯ ತಮ್ಮ ಮುರಳಿ ಇಬ್ಬರಿಗೂ ಬುದ್ಧಿ ಹೇಳಿದ್ದ. ಆದರೆ, ಚಲಪತಿಯಾಗಲೀ, ತೇಜಸ್ವಿನಿಯಾಗಲಿ ಅವನ ಮಾತು ಕೇಳಿಸಿಕೊಳ್ಳದೆ ತಮ್ಮ ಅಕ್ರಮ ಸಂಬಂಧ ಮುಂದುವರಿಸಿದ್ದರು ಎನ್ನಲಾಗಿದೆ.
ಹೀಗಾಗಿ ಮುರಳಿ ತನ್ನ ಸ್ನೇಹಿತರ ಜತೆಗೆ ಬಂದು ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬೇತಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.