ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದಾರುಣ ಘಟನೆ (Murder Case) ಜಯನಗರದಲ್ಲಿ ನಡೆದಿದೆ. ಶನಿವಾರ ಸಂಜೆ ಜಯನಗರ ಬಳಿಯ ಶಾಲಿನಿ ಗ್ರೌಂಡ್ ಸಮೀಪದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದ್ದು, ಈ ವೇಳೆ ಪ್ರಿಯತಮೆಗೆ ಪ್ರಿಯಕರ ಚಾಕುವಿನಿಂದ ಇರಿದಿದ್ದಾನೆ.
ಕೋಲ್ಕೊತಾ ಮೂಲದ ಫರೀದಾ ಖಾನ್ (42) ಮೃತ ಮಹಿಳೆ. ಗಿರೀಶ್ ಹತ್ಯೆ ಆರೋಪಿ. ಜಯನಗರದ ಓಯೋ ರೂಮ್‌ನಲ್ಲಿ ತಂಗಿದ್ದ ಗಿರೀಶ್ ಮತ್ತು ಫರೀದಾ, ಸಂಜೆ ಜಯನಗರ ಬಳಿಯ ಶಾಲಿನಿ ಗ್ರೌಂಡ್‌ಗೆ ಬಂದಿದ್ದರು. ಆ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಆಗ ಕೈನಲ್ಲಿದ್ದ ಚಾಕುವಿನಿಂದ ಮಹಿಳೆಯನ್ನು ಇರಿದು ಪ್ರಿಯಕರ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಗಿರೀಶ್‌ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Adult Movies: ಅಶ್ಲೀಲ ವಿಡಿಯೊ ಚಿತ್ರೀಕರಣ; ಮಹಿಳೆಯರು ಸೇರಿ 13 ಮಂದಿಯ ಬಂಧನ
ಫರ್ನಿಚರ್ ಗೋಡೌನ್‌ನಲ್ಲಿ ಬೆಂಕಿ ಅವಘಡ
ಬೆಂಗಳೂರು: ಫರ್ನಿಚರ್ ಗೋಡೌನ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಗರದ ಹೆಬ್ಬಾಳದ ಲುಂಬಿನಿ ಗಾರ್ಡನ್‌ನ ಮರಿಯಣ್ಣನಪಾಳ್ಯದಲ್ಲಿ ನಡೆದಿದೆ. ಎರಡು ಅಗ್ನಿಶಾಮಕ ವಾಹನದಲ್ಲಿ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಬೆಂಕಿಯ ತೀವ್ರತೆ ಹೆಚ್ಚಿದ್ದು, ಮತ್ತೆರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ. ಹೆಬ್ಬಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸಾಧಿಕ್ ಪಾಷಾ ಎಂಬುವವರ ಗೋಡೌನ್ ಬೆಂಕಿ ಅವಘಡ ಸಂಭವಿಸಿದ್ದು, ಕಳೆದ ಮೂರು ತಿಂಗಳ ಹಿಂದಷ್ಟೇ ಫಾರ್ನಿಚರ್ ಮಳಿಗೆ ಅರಂಭವಾಗಿತ್ತು.
ತಲಘಟ್ಟಪುರದಲ್ಲಿ ಚಾಕು ಇರಿದು ವ್ಯಕ್ತಿ ಹತ್ಯೆ; ಕೊಲೆಗಾರ ಎಸ್ಕೇಪ್
ಬೆಂಗಳೂರು: ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ (Murder case) ಮಾಡಲಾಗಿದೆ. ಬೆಂಗಳೂರಿನ (Bengaluru News) ತಲಘಟ್ಟಪುರ (Talaghattapura) ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಘಟನೆ ನಡೆದಿದೆ. ಪಂಚಲಿಂಗ (42) ಮೃತ ದುರ್ದೈವಿ.
ಪಂಚಲಿಂಗ ಲಾರಿಯಲ್ಲಿದ್ದ ಮರಳು ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಶುಕ್ರವಾರ ಲಾರಿ ಮನೆ ಬಳಿ ಓಡಾಡುವಾಗ ಧೂಳು ಬರುತ್ತಿದೆ ಎಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಪಂಚಲಿಂಗ ಅದೇ ಊರಿನ ಚಿರಂಜೀವಿ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.
ಧೂಳಿನ ವಿಚಾರವು ಗಲಾಟೆಯಲ್ಲಿ ಅಂತ್ಯವಾಗದೆ ದ್ವೇಷಕ್ಕೆ ತಿರುಗಿದೆ. ನಿನ್ನೆ ರಾತ್ರಿ ಚಿರಂಜೀವಿ ತನ್ನಿಬ್ಬರು ಸ್ನೇಹಿತರನ್ನು ಕರೆತಂದು ಪಂಚಲಿಂಗನಿಗೆ ಚಾಕು ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಪಂಚಲಿಂಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿ ಆರೋಪಿ ಚಿರಂಜೀವಿ ಪರಾರಿ ಆಗಿದ್ದಾನೆ.
ಇದನ್ನೂ ಓದಿ | Self Harming: 1 ವರ್ಷದ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ತಾಯಿ ಆತ್ಮಹತ್ಯೆ
ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.