Site icon Vistara News

Murder Case : ಬಡ್ಡಿ ಹಣ ಕೊಡಲು ತಡವಾಗಿದ್ದಕ್ಕೆ ಕೋಳಿ ಕಟ್ ಮಾಡುವ ಮಚ್ಚಿನಿಂದ ಕೊಚ್ಚಿದ!

Abdhul Kalil

ತುಮಕೂರು : ಬಡ್ಡಿ ಹಣ ನೀಡುವ ವಿಚಾರಕ್ಕೆ ಶುರುವಾದ ಗಲಾಟೆಯು ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ತುಮಕೂರು ಜಿಲ್ಲೆ (Tumkur News) ಕುಣಿಗಲ್ ತಾಲೂಕಿನ ಅಮೃತ್ತೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತ್ತೂರು ಗ್ರಾಮದ ಅಬ್ದುಲ್ ಖಲೀಲ್ (55) ಮೃತ ದುರ್ದೈವಿ.

ಅಬ್ದುಲ್ ಖಲೀಲ್ ಮಗಳ ಮದುವೆಗಾಗಿ ಅದೇ ಗ್ರಾಮದ ಕೋಳಿ ಅಂಗಡಿ ವ್ಯಾಪಾರಿ ತೌಸೀಪ್‌ ಪಾಷ ಎಂಬಾತನಿಂದ 50,000 ರೂ. ಸಾಲ ಪಡೆಡಿದ್ದರು. 50,000 ರೂ. ಸಾಲಕ್ಕೆ ಅಬ್ದುಲ್ ಖಲೀಲ್ ಪ್ರತಿ ತಿಂಗಳು 5 ಸಾವಿರ ಬಡ್ಡಿ ಕಟ್ಟುತ್ತಿದ್ದರು. ಆದರೆ ಈ ತಿಂಗಳು ಬಡ್ಡಿ ಹಣ ನೀಡಲು ತಡವಾಗಿದ್ದಕ್ಕೆ ಅಬ್ದುಲ್ ಖಲೀಲ್ ಹಾಗೂ ತೌಸೀಪ್‌ ಷಾಷ ನಡುವೆ ಗಲಾಟೆ ನಡೆದಿದೆ.

ಇದನ್ನೂ ಓದಿ: Tumkur News : ಮನೆಯಲ್ಲಿ ನೇತಾಡುತ್ತಿದ್ದ ದಂಪತಿ ಶವ! ಕೈ ಹಿಡಿದವಳ ವೇಲೇ ಕುಣಿಕೆ

ಗಲಾಟೆ ವಿಕೋಪಕ್ಕೆ ತಿರುಗಿದ್ದು ತೌಸಿಪ್‌ ಪಾಷಾ ಕುಟುಂಬಸ್ಥರು ಅಬ್ದುಲ್‌ ಖಲೀಲ್ ಮೇಲೆ ಹಲ್ಲೆ ಮಾಡಿದ್ದಾರೆ. ಕೋಳಿ ಕತ್ತರಿಸುವ ಮಚ್ಚಿನಿಂದಲೇ ಹಲ್ಲೆ ನಡೆಸಿದ್ದಾರೆ ಎಂದು ಅಬ್ದುಲ್‌ ಖಲೀಲ್‌ ಕುಟುಂಬಸ್ಥರು ಆರೋಪಿಸಿದ್ದಾರೆ. ಗಲಾಟೆಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್‌ ಖಲೀಲ್‌ನನ್ನು ಕೂಡಲೇ ಬೆಂಗಳೂರಿನ ನಿಮಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಗ್ಗೆ ಅಬ್ದುಲ್ ಖಲೀಲ್ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version