Site icon Vistara News

Murder Case : ಕುಡಿದ ಮತ್ತಿನಲ್ಲಿ ಅಪ್ಪನನ್ನೇ ಕಲ್ಲು ಹೊತ್ತು ಹಾಕಿ ಕೊಂದ ಪಾಪಿ ಮಗ!

murder symbolic

ಚಿತ್ರದುರ್ಗ: ಕುಡಿತದ ಮತ್ತಿನಲ್ಲಿ ಮಗನೊಬ್ಬ ತಂದೆಯನ್ನೇ ತಲೆಗೆ ಕಲ್ಲು ಹೊತ್ತು ಹಾಕಿ ಕೊಲೆ (Son kills Father) ಮಾಡಿದ್ದಾನೆ. ಕೌಟುಂಬಿಕ ಕಲಹದ (Family dispute) ಹಿನ್ನೆಲೆಯನ್ನು ಇಟ್ಟುಕೊಂಡು ಜಗಳ ಮಾಡಿಕೊಂಡು ಆತ ಈ ಕೃತ್ಯವನ್ನು (Murder Case) ಎಸಗಿದ್ದಾನೆ.

ಚಿತ್ರದುರ್ಗ ಜಿಲ್ಲೆ (Chitradurga News) ಚಳ್ಳಕೆರೆ ತಾಲೂಕಿನ ವರವು ಕಾವಲು ಬಳಿ ಘಟನೆ ನಡೆದಿದೆ. ಬತ್ತಯ್ಯನ ಹಟ್ಟಿ ಗ್ರಾಮದ ನಿವಾಸಿಯಾಗಿರುವ ಸೂರಯ್ಯ (55) ಎಂಬವರೇ ಕೊಲೆಯಾದವರು. ಅವರನ್ನು ಕೊಂದಿದ್ದು ಅವರ ಸ್ವಂತ ಮಗ ಮೋಹನ.

ಕೌಟುಂಬಿಕ ಕಲಹ, ಆಸ್ತಿ ವಿಚಾರದಲ್ಲಿ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಇದರ ಮುಂದುವರಿದ ಭಾಗ ಸೋಮವಾರ ರಾತ್ರಿಯೂ ನಡೆದಿತ್ತು. ಚೆನ್ನಾಗಿ ಕುಡಿದು ಬಂದಿದ್ದ ಮೋಹನ ಅಪ್ಪನ ಜತೆ ಖ್ಯಾತೆ ತೆಗೆದಿದ್ದ. ಅದೆಲ್ಲ ಮುಗಿದು ಎಲ್ಲರೂ ಮಲಗಿದ್ದರೂ ಅಪ್ಪ-ಮಗನ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಆಗ ಮತ್ತಿನಲ್ಲಿದ್ದ ಮೋಹನ ದೊಡ್ಡ ಕಲ್ಲನ್ನು ತಂದು ತಂದೆಯ ತಲೆ ಮೇಲೆ ಎತ್ತಿಹಾಕಿದ್ದಾನೆ. ಸೂರಯ್ಯ ಅವರು ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಹೀಗೆ ಕೊಲೆ ಮಾಡಿದ ಬಳಿಕ ಮೋಹನ ನೇರವಾಗಿ ಚಳ್ಳಕೆರೆ ಠಾಣೆಗೆ ಬಂದು ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಮೀವುಲ್ಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆಯನ್ನು ಕಲ್ಲು ಎತ್ತಿ ಹಾಕಿ ಕೊಂದ ಮಗ

ರಾಯಚೂರು: ತಾಯಿಗೆ ಸದಾ ಕಿರುಕುಳ (Harassment to mother) ನೀಡುತ್ತಿದ್ದಾನೆ ಎಂಬ ಸಿಟ್ಟಿನಲ್ಲಿ ಮಗನೊಬ್ಬ ತಂದೆಯನ್ನು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ (Murder Case) ಮಾಡಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಂಡಿ ತಿಮ್ಮಣ್ಣ (55) ಎಂಬಾತನನ್ನು ಅವನ ಮಗ ಶೀಲವಂತ (32) ಕೊಲೆ (Son Kills Father) ಮಾಡಿದ್ದಾನೆ. ಕೊಂದ ಬಳಿಕ ಮೊದಲು ಶವವನ್ನು ನಾಶ ಮಾಡಲು ಮುಂದಾಗಿದ್ದನಾದರೂ ಬಳಿಕ ಭಯಗೊಂಡು ತಾನೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಬಂಡಿ ತಿಮ್ಮಪ್ಪ, ಅವನ ಪತ್ನಿ, ಮಗ ಶೀಲವಂತ, ಸೊಸೆ ಮತ್ತು ಇಬ್ಬರು ಮಕ್ಕಳು ಜತೆಯಾಗಿ ವಾಸಿಸುತ್ತಿದ್ದರು. ಬಂಡಿ ತಿಮ್ಮಣ್ಣ ಯಾವಾಗಲೂ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಗ ಶೀಲವಂತ ಹಲವಾರು ಬಾರಿ ಹೇಳಿದರೂ ಜಗಳ ನಿಲ್ಲಲೇ ಇಲ್ಲ. ಇದರಿಂದ ಆತ ಕುಪಿತನಾಗಿದ್ದ ಎನ್ನಲಾಗಿದೆ.

ಭಾನುವಾರದಂದು ಈ ಕುರಿತ ಮಾತುಕತೆ ತಾರಕಕ್ಕೆ ಏರಿದೆ. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಕೊಲೆ ಸಂಭವಿಸಿದೆ. ಎಲ್ಲ ಕುಟುಂಬಿಕರ ಮುಂದೆಯೇ ಮಗ ತಂದೆಯನ್ನು ಕೊಂದು ಹಾಕಿದ್ದಾನೆ.

ಮನೆಯಲ್ಲಿ ಜಗಳ ಜೋರಾಗುತ್ತಿದ್ದಂತೆಯೇ ಶೀಲವಂತ ತನ್ನ ಸಣ್ಣ ಮಗನನ್ನು ಮೊದಲು ಒಂದು ಕೋಣೆಗೆ ಹೋಗುವಂತೆ ಹೇಳಿದ್ದಾನೆ. ಬಳಿಕ ಹೆಂಡತಿ ಮತ್ತು ಮಗಳ ಮುಂದೆಯೇ ಒಂದು ಕಲ್ಲು ತಂದು ತಂದೆಯ ತಲೆಯ ಮೇಲೆ ಎತ್ತಿ ಹಾಕಿದ್ದಾನೆ. ಮನೆಯಲ್ಲಿದ್ದವರು ತಡೆಯಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ.

ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಂಡಿ ತಿಮ್ಮಪ್ಪ ಅಲ್ಲೇ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾನೆ. ಈ ನಡುವೆ, ಕೊಲೆ ಮಾಡಿದ ಮಗ ಪ್ರಕರಣ ಮುಚ್ಚಿ ಹಾಕಲು ಮೊದಲು ಯತ್ನಿಸಿದ್ದಾರೆ. ಶವವನ್ನು ಮನೆಯಿಂದ ಹೊರಗೆ ಎಳೆದು ತಂದು ದೇಹವನ್ನು ನಾಶ ಮಾಡಲು ಯತ್ನಿಸಿದ್ದಾನೆ. ಆದರೆ, ತೀವ್ರ ರಕ್ತಸ್ರಾವ ಆಗಿದ್ದರಿಂದ ಆತನ ಪ್ಲ್ಯಾನ್‌ ಯಶಸ್ವಿಯಾಗಲಿಲ್ಲ.

Exit mobile version