Site icon Vistara News

Murder Case : ಪತಿಯಿಂದ ಪತ್ನಿಯ ಕೊಲೆ; ನೇಣಿಗೆ ಹಾಕಿ ತಪ್ಪಿಸಿಕೊಳ್ಳಲು ಯತ್ನಿಸಿದ ಭೂಪ

Hemavati Gururaj

ಹಾಸನ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು, (Murder case) ಆಕೆಯ ಮೃತದೇಹವನ್ನು ನೇಣಿಗೆ ಹಾಕಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ (Man kills his wife) ಎಂದು ಬಿಂಬಿಸಲು ಹೋಗಿ ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ.

ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಹೌಸಿಂಗ್ ಬೋರ್ಡ್ ನಿವಾಸಿ ಗುರುರಾಜ್ ಎಂಬಾತನೇ ಈ ಕೊಲೆಗಾರ. ಆತ ತನ್ನ ಪತ್ನಿಯ ಹೇಮಾವತಿ (28)ಯನ್ನು ಕೊಂದು ತಪ್ಪಿಸಿಕೊಳ್ಳಲು ಯತ್ನಿಸಿ ವಿಫಲನಾಗಿದ್ದಾನೆ.

ಚನ್ನರಾಯಪಟ್ಟಣದ ಗುರುರಾಜ್‌ ಹತ್ತು ವರ್ಷಗಳ ಹಿಂದೆ ಚಿಕ್ಕಮಗಳೂರು ಮೂಲದ ಹೇಮಾವತಿ (28) ಅವರನ್ನು ಮದುವೆಯಾಗಿದ್ದ. ಮದುವೆಯಾದ ವರ್ಷದಿಂದಲೂ ಆತ ವರದಕ್ಷಿಣೆ ಹೆಸರಿನಲ್ಲಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಹಲವಾರು ಬಾರಿ ಮನೆಯವರು ಮಾತುಕತೆ ನಡೆಸಿದ್ದರು. ಆದರೆ, ಕಿರುಕುಳ ನೀಡುವ ತನ್ನ ಚಾಳಿಯನ್ನು ಆತ ನಿಲ್ಲಿಸಿರಲಿಲ್ಲ.

ಗುರುವಾರ ಈತ ತನ್ನ ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯ ಜತೆ ಜಗಳ ಆರಂಭಿಸಿ ಕೊನೆಗೆ ಕೊಲೆ ಮಾಡಿದ್ದ.

ಕೊಲೆ ಮಾಡಿದ ನಂತರವೂ ಈತ ಎಷ್ಟೊಂದು ಬುದ್ಧಿವಂತಿಕೆ ಮೆರೆದಿದ್ದಾನೆ ಎಂದರೆ, ಹತ್ಯೆ ಮಾಡಿದ ಬಳಿಕ ಆತ ಮೃತದೇಹವನ್ನು ನೇತು ಹಾಕಿದ್ದಲ್ಲದೆ, ನನ್ನ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್‌ ಠಾಣೆಗೆ ಫೋನ್‌ ಮಾಡಿದ್ದಾನೆ.

ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಗುರುರಾಜನ ಮೇಲೆಯೇ ಸಣ್ಣಗೆ ಸಂಶಯ ಬರಲು ಆರಂಭಿಸಿತ್ತು. ಅವರು ಆತನನ್ನು ವಶಕ್ಕೆ ಪಡೆದು ಎರಡೇಟು ಬಿಗಿಯುತ್ತಿದ್ದಂತೆಯೇ ಕೊಲೆಯ ಕಥೆ ಹೊರಗೆ ಬಿತ್ತು.

ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road accident: ಹೊಸಪೇಟೆ ಬಳಿ ಆಟೋ- ಲಾರಿ ಡಿಕ್ಕಿ: ಆರಕ್ಕೂ ಅಧಿಕ ಮಂದಿ ಸಾವು

ಗದಗ‌: ಇಲ್ಲಿನ ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಸ್ತಿ ವಿವಾದಕ್ಕೆ (Property dispute) ಇಬ್ಬರು ಸಹೋದರರು ಸೇರಿ ತಮ್ಮನನ್ನೇ ಕೊಂದು (Murder Case) ಮುಗಿಸಿದ್ದಾರೆ. ಶೇಕಪ್ಪ ನವಲಗುಂದ (35) ಮೃತ ದುರ್ದೈವಿ.

ಗದಗ ಜಿಲ್ಲೆಯ ರೋಣ ಪಟ್ಟಣದ ಹೊರವಲಯದ ಜಮೀನಿನಲ್ಲಿ ಇದ್ದ ಶೇಕಪ್ಪನನ್ನು ಅಣ್ಣಂದಿರೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಇಬ್ಬರು ಸಹೋದರರನ್ನು ಪೊಲೀಸರು ವಶಕ್ಕೆ‌ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳು

ಜಮೀನು ವಿಚಾರ ಕೊಲೆಯಲ್ಲಿ ಅಂತ್ಯ

ಚಿತ್ರದುರ್ಗದ ಹೊಸದುರ್ಗದ ಲಕ್ಷ್ಮಿ ದೇವರಹಳ್ಳಿಯಲ್ಲಿ ಜಮೀನಿನ ವಿಚಾರ ಕೊಲೆಯಲ್ಲಿ ಅಂತ್ಯ ಆಗಿದೆ. ಹೊಲಕ್ಕೆ ಹೋಗುವ ದಾರಿಗಾಗಿ ಮಾರಾಮಾರಿ ನಡೆದಿತ್ತು. ಘಟನೆಯಲ್ಲಿ ಪಾಲಕ್ಷಿ ಎಂಬಾಕೆ ಹತ್ಯೆ ಆಗಿದ್ದು, ಪಾಲಕ್ಷಿ ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ಶ್ರೀರಾಂಪುರ ಪೊಲೀಸರು, ರಾಜಣ್ಣ, ಬಸವರಾಜಪ್ಪ, ನಾಗರಾಜ, ರುದ್ರೇಶ್ ಹಾಗೂ ರಾಮಕ್ಕ, ಶಿಲ್ಪ, ರೂಪ, ಶಾಂತಮ್ಮ, ಲತಾ ಎಂಬುವವರನ್ನು ಬಂಧಿಸಿದ್ದಾರೆ. ಚಿಕ್ಕ ಬ್ಯಾಲದಕೆರೆ ಗೇಟ್ ಹೋಗುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Exit mobile version