Site icon Vistara News

Murder case : ಪತ್ನಿಯ ಶೀಲ ಶಂಕಿಸಿ ಕತ್ತು ಕೊಯ್ದು ಕೊಲೆ ಮಾಡಿ ಪೊಲಿಸ್‌ ಠಾಣೆಗೆ ತೆರಳಿದ ಪತಿರಾಯ!

murder kolara

#image_title

ಕೋಲಾರ: ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯ ಕತ್ತು ಕೊಯ್ದು ಕೊಲೆ (Murder case) ಮಾಡಿದ್ದಾನೆ. ಅಷ್ಟೇ ಅಲ್ಲ, ತಾನೇ ಸ್ವತಃ ಪೊಲೀಸ್‌ ಠಾಣೆಗೆ ಹೋಗಿ ತಪ್ಪೊಪ್ಪಿಕೊಂಡಿದ್ದಾನೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಮರಾವತಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ನಂದಿನಿ (34) ಪತಿಯಿಂದಲೇ ಕೊಲೆಯಾದ ಗೃಹಿಣಿ. ನಾಗರಾಜ್ ಎಂಬಾತ ಪತ್ನಿಯ ಕತ್ತು ಕೊಯ್ದು ಪೊಲೀಸ್ ಠಾಣೆಗೆ ತೆರಳಿರುವ ಪತಿ ಮಹಾಶಯ.

ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡು ಅಡಿ ಜಾಗದ ವಿವಾದ: ಕುಟುಂಬಗಳ ನಡುವೆ ಮಾರಾಮಾರಿ

ಚಿಕ್ಕಮಗಳೂರು: ಕೇವಲ 2 ಅಡಿ ಜಾಗಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಮನಸೋ ಇಚ್ಛೆ ಗುದ್ದಲಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದು, ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ದೊಡ್ಡ ಲಿಂಗದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಾಗದ ವಿಚಾರಕ್ಕೆ ಹೆಂಗಸರು ಮಕ್ಕಳು ಎನ್ನದೆ ದಾಳಿ ನಡೆಸಲಾಗಿದ್ದು, ಮಾರಾಮಾರಿಯಲ್ಲಿ ಗಾಯತ್ರಿ ಬಾಯಿ, ಅಮರ್ ನಾಯ್ಕ್, ರಾಮನಾಯ್ಕ್‌ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಹಲ್ಲೆ ಮಾಡಿದ ಮಂಜನಾಯ್ಕ, ಉಮೇಶ್ ನಾಯ್ಕ, ಅಣ್ಣನಾಯ್ಕ, ತೇಜು ಪರಾರಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಗಾಯಾಳುಗಳು ಆರೋಪಿಸಿದ್ದು, ಎಸ್‌ಪಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ : Kirik Party: ಮಹಿಳಾ ಬೈಕ್‌ ರೈಡರ್ಸ್‌ ಮೇಲೆ ಸ್ಥಳೀಯನ ಕಿರಿಕ್‌, ಉಭಯ ಕಡೆಗಳಿಂದ ದೂರು

Exit mobile version