Site icon Vistara News

Murder Case | ನಾ ನಿನ್ನ ಬಿಡಲಾರೆ ಎಂದವನು ಪ್ರೇಯಸಿಯ ಕೊಂದೇಬಿಟ್ಟ; ವಿಷ ಸೇವಿಸಿ ಆಸ್ಪತ್ರೆ ಸೇರಿದ ಪ್ರೇಮ ಕೈದಿ

murder case davanagere

ದಾವಣಗೆರೆ: ಲವ್‌ ಕಹಾನಿಯೊಂದು ಯುವತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಆಕೆಯ ಅಂದ ಚೆಂದಕ್ಕೆ ಹುಚ್ಚನಂತಾಗಿದ್ದ ಪಾಗಲ್‌ ಪ್ರೇಮಿಯೊಬ್ಬ, ಪ್ರೀತಿಸಿದವಳನ್ನು ಬಿಡಲಾಗದೆ ಅಂತಿಮವಾಗಿ ನಡು ರಸ್ತೆಯಲ್ಲಿ ಆಕೆಯನ್ನು ಕೊಂದು ಹಾಕಿದ್ದಾನೆ (Murder Case), ತಾನು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾನೆ.

ದಾವಣಗೆರೆ ನಗರದ ವಿನೋಭನಗರ ನಿವಾಸಿ ಚಾಂದ್ ಸುಲ್ತಾನ್ (೨೪) ಕೊಲೆಯಾದ ಯುವತಿ. ಚಾಂದ್‌ ಸುಲ್ತಾನ್‌ ಎಂದಿನಂತೆ ಮನೆಯಿಂದ ಕೆಲಸಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಳು. ಮೊದಲೆ ಬೈಕ್‌ನಲ್ಲಿ ಬಂದು ಇವಳಿಗಾಗಿ ಕಾದು ನಿಂತಿದ್ದ ಚಾಂದ್ ಪೀರ್ ಅಲಿಯಾಸ್ ಸಾದತ್ ಎಂಬಾತ ಮಾತನಾಡಿಸುವ ನೆಪದಲ್ಲಿ ಆಕೆಯ ಕೊರಳಿಗೆ ಚೂಪಾದ ಆಯುಧ ಚುಚ್ಚಿ ಹತ್ಯೆ ನಡೆಸಿದ್ದ.

ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ

ಹತ್ಯೆ ಮಾಡಿ ಬಂದ ಬೈಕ್‌ನಲ್ಲಿ ಕಾಲ್ಕಿತ್ತಿದ್ದ ಸಾದತ್‌ ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳೀಯರು ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಏನಿದು ಪ್ರೇಮಕಥೆ?
ದಾವಣಗೆರೆ ಮೂಲದ ಹರಿಹರದ ನಿವಾಸಿ ಚಾಂದ್‌ ಸಾದತ್ ಹಾಗೂ ಕೊಲೆಯಾದ ಚಾಂದ್‌ ಸುಲ್ತಾನ್‌ ಇಬ್ಬರು ಸಂಬಂಧಿಕರು. ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಸಾದತ್‌ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು, ಆದರೆ ಚಾಂದ್‌ ಸುಲ್ತಾನ್‌ ಮನೆಯಲ್ಲಿ ಮದುವೆಗೆ ನಿರಾಕರಿಸಿದರು. ಈ ಮಧ್ಯೆ ಬೇರೆ ಯುವಕನ ಜತೆ ಚಾಂದ್‌ ಸುಲ್ತಾನ್‌ ನಿಶ್ಚಿತಾರ್ಥ ಮಾಡಿದ್ದರು. ಇದಾದ ಬಳಿಕ ಯುವತಿಯಿಂದ ದೂರವೇ ಉಳಿದಿದ್ದ ಸಾದತ್‌ಗೆ ಆಕೆಯನ್ನು ಬಿಟ್ಟು ಇರುವುದು ಕಷ್ಟವಾಗಿತ್ತು. ಹೀಗಾಗಿ ಪ್ರೀತಿಸಿದವಳನ್ನೇ ಹತ್ಯೆಗೈದು ತಾನು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಹತ್ಯೆಗೂ ಮುನ್ನ ಸಾದತ್‌ ಆಕೆಯನ್ನು ಬಿಟ್ಟು ಇರಲಾರೆ, ಅವಳನ್ನು ಕೊಲೆ ಮಾಡಿ ತಾನು ಸಾಯುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದನಂತೆ. ಅದರಂತೆ ಗುರುವಾರ ಬೆಳಗ್ಗೆ ಚಾಂದ್‌ ಸುಲ್ತಾನ್‌ ಕೆಲಸಕ್ಕೆ ಹೋಗುವಾಗ ಮಾತನಾಡಿಸುವ ನೆಪದಲ್ಲಿ ಬಂದ ಸಾದತ್‌ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮೊದಮೊದಲು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರು ಪ್ರಾಣ ಉಳಿಸಲಾಗಲಿಲ್ಲ. ಹತ್ಯೆ ಮಾಡಿದ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Student Murder | ಹದಲಿಯ ಅತಿಥಿ ಶಿಕ್ಷಕನ ಅಟ್ಟಹಾಸ: ಬಾಲಕನ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೆ ಸಾವು

Exit mobile version