Site icon Vistara News

Murder Case : ತಿಪಟೂರಿನಲ್ಲಿ ನಡುರಸ್ತೆಯಲ್ಲಿ ಅಟ್ಟಾಡಿಸಿ ಕೊಲೆ; ಮಂಡ್ಯದ ವ್ಯಕ್ತಿಯ ಮರ್ಡರ್‌

murder at tiptur

ತುಮಕೂರು: ತಿಪಟೂರು ನಗರದ ಕೆ.ಆರ್.ಬಡಾವಣೆಯ ಮೂರನೇ ಮುಖ್ಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಲಾಗಿದೆ (Murder Case). ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಮಹೇಂದ್ರ (34) ಮೃತ ದುರ್ದೈವಿ. ಅವರನ್ನು ಅವರ ಬಳಿ ಇದ್ದ ಡ್ರೈವಿಂಗ್‌ ಲೈಸೆನ್ಸ್‌ (Driving Licence) ಆಧಾರದಲ್ಲಿ ಗುರುತಿಸಲಾಗಿದೆ.

ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಸ್ವಲ್ಪ ಹೊತ್ತಿನಲ್ಲಿ ರಸ್ತೆಯಲ್ಲಿ ಜನರು ಓಡಾಡಲು ಶುರು ಮಾಡಿದಾಗ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಯಿತು. ಅವರ ಬಳಿ ಇದ್ದ ಆಧಾರ್‌ ಕಾರ್ಡ್‌ ಗಮನಿಸಿದಾಗ ಅವರು ಮದ್ದೂರಿನ ಮಹೇಂದ್ರ ಎಂದು ತಿಳಿದುಬಂತು. ಆದರೆ, ಅವರು ಇಲ್ಲಿ ಯಾಕೆ ಬಂದರು? ಯಾಕೆ ಕೊಲೆಯಾದರು ಎನ್ನುವುದು ತಿಳಿದುಬಂದಿಲ್ಲ.

ಮಹೇಂದ್ರ ಅವರು ಅರೆನಗ್ನಾವಸ್ಥೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರು ರಕ್ತಸಿಕ್ತ ಕಾಲುಗಳೊಂದಿಗೆ ರಸ್ತೆ ತುಂಬ ಓಡಾಡಿರುವ ಗುರುತುಗಳು ಪತ್ತೆಯಾಗಿವೆ. ಹೀಗಾಗಿ ಅವರನ್ನು ಯಾರೋ ಅಟ್ಟಾಡಿಸಿಕೊಂಡು ಬಂದು ಮಾರಣಾಂತಿಕವಾಗಿ ಹಲೆ ಮಾಡಿರುವ ಸಾಧ್ಯತೆ ಕಂಡುಬಂದಿದೆ.

ಎಲ್ಲಿಂದಲೋ ಬೆನ್ನಟ್ಟಿಕೊಂಡು ಬಂದಿರುವ ಆರೋಪಿಗಳು ಅವರನ್ನು ಕತ್ತರಿಸಿ ಹಾಕಿ ಬಳಿಕ ಅಲ್ಲಿಂದ ಪರಾರಿಯಾಗಿರುವ ಸಾಧ್ಯತೆ ಇದೆ. ಮಹೇಂದ್ರ ಅವರು ಗಾಯಗೊಂಡು ರಕ್ತದಲ್ಲೇ ಓಡಾಡಿ ಕೊನೆಗೆ ಪ್ರಾಣ ಕಳೆದುಕೊಂಡಂತೆ ಕಾಣುತ್ತಿದೆ.

ಮೃತ್ತ ವ್ಯಕ್ತಿ ಅರೆ ನಗ್ನಾವಸ್ಥೆಯಲ್ಲಿದ್ದು, ಸ್ಥಳದಲ್ಲಿ ಬ್ಯಾಗ್, ಮೊಬೈಲ್, ಡಿಎಲ್ ಪತ್ತೆಯಾಗಿದೆ. ಅವರ ಈ ಸ್ಥಿತಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಯಾವುದೋ ಅನೈತಿಕ ಸಂಬಂಧದ ಸುಳಿಯಲ್ಲಿ ಸಿಕ್ಕು ಈ ರೀತಿ ಕೊಲೆಯಾಗಿದ್ದಾರೆಯೇ ಎಂಬ ಸಂಶಯ ಕಾಡಿದೆ. ಅವರು ಯಾವುದಾದರೂ ವಾಹನದಲ್ಲಿ ಹೋಗುತ್ತಿದ್ದಾಗ ತಡೆದು ಕೊಲೆ ಮಾಡಿರುವ ಸಾಧ್ಯತೆಯೂ ಇದೆ. ಅಂತೂ ಯಾವುದೋ ಬಲವಾದ ಕಾರಣಕ್ಕೆ ದ್ವೇಷದಿಂದ ಈ ಕೊಲೆ ನಡೆದಿರುವುದು ಸ್ಪಷ್ಟವಾಗಿದೆ.

ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ತಿಪಟೂರು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತದೇಹವನ್ನು ತಿಪಟೂರು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : Murder Case : ಹಣಕಾಸಿನ ವಿಚಾರಕ್ಕೆ ಸ್ನೇಹಿತರ ಹೊಡೆದಾಟ, ಓರ್ವ ಸಾವು

Assault Case : ರಕ್ತ ಚಿಮ್ಮುವಂತೆ ಗುಂಪುಗಳ ನಡುವೆ ಹೊಡೆದಾಟ ಬಡಿದಾಟ!

ಕಲಬುರಗಿ/ರಾಮನಗರ/ಮಂಗಳೂರು: ಇತ್ತೀಚೆಗೆ ಗುಂಪು ಘರ್ಷಣೆಗಳು ಹೆಚ್ಚಾಗುತ್ತಿದ್ದು, ಕೆಲವೆಡೆ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗಿದೆ. ಕಲಬುರಗಿಯ ಕಮಲಾಪುರ ತಾಲೂಕಿನ ಹರಕಂಚಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯೇ (Assault Case) ನಡೆದಿದೆ. ಪರಿಣಾಮ ಹರಕಂಚಿ ಗ್ರಾಮದಲ್ಲಿ ಪ್ರಕ್ಷುಬದ್ಧ ವಾತಾವರಣ ನಿರ್ಮಾಣವಾಗಿದೆ.

ಘಟನೆಯಲ್ಲಿ ಜಗದೇವಪ್ಪ ಶಂಕರ ಕ್ವಾಟನೂರ (45) ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಹರಕಂಚಿ ಗ್ರಾಮದ ರೌಡಿಶೀಟರ್‌ ಶಂಕರ ಪರಮೇಶ್ವರ ನಾಯ್ಕೋಡಿ ಹಾಗೂ ಮಾಣಿಕಪ್ಪ ಶಾಮರಾವ ನಾಯಕೋಡಿ ಗುಂಪಿನಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.

ಮೆಹಬೂಬ ಸುಬಾನಿ ಸಂದಲ ನಡೆಯುತ್ತಿದ್ದ ವೇಳೆ ಜಗದೇವಪ್ಪ ಶಂಕರ ಸಹಚರರು ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಗುಂಪು ಘರ್ಷಣೆ ನಡೆದು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ಮಹಾಗಾಂವ ಪೊಲೀಸ್‌ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

Exit mobile version