Site icon Vistara News

Murder Case: ಕೊಲೆಯಲ್ಲಿ ಕೊನೆಯಾದ ಅನೈತಿಕ ಸಂಬಂಧ; ಬೆತ್ತಲೆ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಹತ್ಯೆಗೆ ಕಾರಣ

Uttar Pradesh Man dead after being trapped in lift In Bengaluru

ಬೆಂಗಳೂರು: ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬ ಆರ್‌ಎಮ್‌ಸಿ ಯಾರ್ಡ್ ಮಾರುಕಟ್ಟೆ ಬಳಿ ಬರ್ಬರವಾಗಿ (Murder Case) ಹತ್ಯೆಯಾಗಿದ್ದಾನೆ. ಉಮಾಪತಿ (47) ಹತ್ಯೆಯಾದವನು.

ಮೃತ ಉಮಾಪತಿ ಹಾಗೂ ಬಂಧಿತ ಆರೋಪಿಗಳು

ಉಮಾಪತಿ ಮಹಿಳೆಯ ಜತೆ ಅನೈತಿಕ ಸಂಬಂಧ ಹೊಂದಿದ್ದ. ಆದರೆ, ಇತ್ತೀಚೆಗೆ ಆ ಮಹಿಳೆ ಉಮಾಪತಿಯನ್ನು ದೂರವಿಟ್ಟಿದ್ದಳು. ಇದರಿಂದ ಕೋಪಗೊಂಡಿದ್ದ ಉಮಾಪತಿ, ನನ್ನ ಬಳಿ ನಿನ್ನ ನಗ್ನ ಫೋಟೊಗಳು ಹಾಗೂ ಅಶ್ಲೀಲ ವಿಡಿಯೊ ಇದೆ ಎಂದು ಬೆದರಿಸಲು ಶುರು ಮಾಡಿದ್ದ ಎನ್ನಲಾಗಿದೆ.

ಫೋಟೊ ಹಾಗೂ ವಿಡಿಯೊವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಇದೇ ವಿಚಾರವಾಗಿ ಮಾತನಾಡಲು ಭಾನುವಾರ ಆರ್‌ಎಮ್‌ಸಿ ಮಾರ್ಕೆಟ್‌ ಬಳಿ ಮಹಿಳೆಯ ಕಡೆಯವರು ಬಂದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು, ಮಹಿಳೆಯ ಕಡೆಯವರು ಉಮಾಪತಿಗೆ ಚಾಕು ಇರಿದು ಪರಾರಿ ಆಗಿದ್ದಾರೆ.

ಇದನ್ನೂ ಓದಿ: Meter Taxi: ರೋಡಿಗಿಳಿದ ಕ್ಯೂಟ್‌ ಮೀಟರ್‌ ಟ್ಯಾಕ್ಸಿ; ಮಿನಿಮಮ್‌ ಚಾರ್ಜ್‌ ಎಷ್ಟು?

ತೀವ್ರ ರಕ್ತಸ್ರಾವವಾಗಿ ಉಮಾಪತಿ ಮೃತಪಟ್ಟಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಆರ್‌ಎಮ್‌ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ನರಸಿಂಹಯ್ಯ, ಸುನೀಲ ಎಂಬ ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Exit mobile version