Site icon Vistara News

Murder Case: ಪಚ್ಚಿ ಆಡುವಾಗ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಕಲ್ಲಲ್ಲಿ ಜಜ್ಜಿ ಕೊಂದ ಕಿರಾತಕರು

#image_title

ಆನೇಕಲ್: ಇಲ್ಲಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ಕೊಲೆಯಲ್ಲಿ (Murder Case) ಅಂತ್ಯವಾಗಿದೆ. ಹಕ್ಕಿ ಪಿಕ್ಕಿ ಕಾಲೋನಿ ನಿವಾಸಿ ದೊಡ್ಡ ಮಾದಯ್ಯ (57) ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಕಳೆದ ಶನಿವಾರ ಪಚ್ಚಿ ಆಟ (ಹುಣಸೆ ಬೀಜ) ಆಡುವ ವೇಳೆ ಸ್ನೇಹಿತರ ನಡುವೆ ಗಲಾಟೆ ಶುರುವಾಗಿದೆ. ಕುಡಿದ ಅಮಲಿನಲ್ಲಿ ಜತೆಯಲ್ಲಿದ್ದವರನ್ನು ದೊಡ್ಡ ಮಾದಯ್ಯ ನಿಂದನೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದವರೇ ತಲೆ ಮೇಲೆ ಕಲ್ಲನ್ನು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ. ಬನ್ನೇರುಘಟ್ಟ ಪೊಲೀಸರು ಆರು ಮಂದಿ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: INDvsAUS : ಬುಮ್ರಾ ಇಲ್ಲದ್ದಕ್ಕೆ ಟರ್ನಿಂಗ್​ ಪಿಚ್​ ತಯಾರಿ, ಭಾರತದ ಬೌಲಿಂಗ್​ ವಿಭಾಗವನ್ನು ಟೀಕಿಸಿದ ಗವಾಸ್ಕರ್

ರೈಲು ಕಂಬಿ ಬಳಿ ಅಪರಿಚಿತ ಶವ ಪತ್ತೆ

ಬೆಂಗಳೂರಿನಲ್ಲಿ ಭದ್ರಪ್ಪ ಲೇಔಟ್ ಬಳಿಯ ರೈಲ್ವೆ ಕಂಬಿ ಪಕ್ಕದಲ್ಲಿ ಶವ ಪತ್ತೆ ಆಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದರೆ, ರೈಲಿಗೆ ಸಿಲುಕಿ ದೇಹ ಛಿದ್ರವಾಗುತ್ತಿತ್ತು. ಆದರೆ, ಕಂಬಿ ಪಕ್ಕದಲ್ಲಿ ಶವ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೆ.ಸಿ ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡು ಅಪರಿಚಿತನ ಗುರುತು ಪತ್ತೆಗೆ ಮುಂದಾಗಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version