Site icon Vistara News

Murder Case | ಕತ್ತಿಯಿಂದ ಕೊಚ್ಚಿ ಕೊಡಗಿನ ಕುವರಿಯ ಬರ್ಬರ ಹತ್ಯೆ ಪ್ರಕರಣ; ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆ

ಕೊಡಗು: ಕತ್ತಿಯಿಂದ ಕೊಚ್ಚಿ ಯುವತಿಯ ಬರ್ಬರ ಹತ್ಯೆ (Murder Case) ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಇದೀಗ ಮತ್ತೊಂದು ಸುಳಿವು ಸಿಕ್ಕಿದೆ. ಕೊಲೆಯಾದ ಸ್ಥಳದಲ್ಲಿ ಹೆಲ್ಮೆಟ್‌ ಹಾಗೂ ವಿಷದ ಬಾಟಲಿ ಪತ್ತೆ ಆಗಿದೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನ‌ ನಾಂಗಲ ಗ್ರಾಮದಲ್ಲಿ ಭಾನುವಾರ (ಜ.15) ರಾತ್ರಿ ನಡೆದಿತ್ತು. ನಾoಗಲ ಗ್ರಾಮದ ಬುಟ್ಟಿಯಂಡ ಮಾದಪ್ಪ, ಸುನಂದ ಅವರ ಪುತ್ರಿ ಆರತಿ (24) ಕೊಲೆಯಾಗಿದ್ದಾಗಿ ತಿಳಿದು ಬಂದಿತ್ತು. ಈಕೆಯ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮನೆಯಿಂದ ಹೊರಗೆ ಕರೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯೊಬ್ಬನ ಹೆಲ್ಮೆಟ್ ಪತ್ತೆ ಆಗಿದೆ. ಅದೇ ಗ್ರಾಮದ ತಮ್ಮಯ್ಯ ಎಂಬಾತನ ಹೆಲ್ಮೆಟ್ ಹಾಗೂ ಕೊಲೆಯಾದ ಅನತಿ ದೂರದಲ್ಲಿ ಆತನ ಬೈಕ್ ಪತ್ತೆ ಆಗಿದೆ.

ಆರತಿಗೆ ಟಾರ್ಚರ್‌ ನೀಡುತ್ತಿದ್ದ ತಮ್ಮಯ್ಯ
ತಮ್ಮಯ್ಯ ಎಂಬಾತ ಮೂರು ದಿನಗಳಿಂದ ಆರತಿಗೆ ಟಾರ್ಚರ್ ನೀಡುತ್ತಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಭಾನುವಾರ ರಾತ್ರಿ ಈತನೇ ಹತ್ಯೆ ಮಾಡಿರುವ ಬಗ್ಗೆ ಅನುಮಾನ ಮೂಡಿದ್ದು, ತಮ್ಮಯ್ಯನ ಮೊಬೈಲ್ ಹಾಗೂ ಚಪ್ಪಲಿ ಕೊಲೆಯಾದ ಸ್ಥಳದಲ್ಲಿದೆ.

ಕೊಲೆಯಾದ ಅನತಿ ದೂರದಲ್ಲಿ ಬೈಕ್‌ ಕೂಡ ಪತ್ತೆ ಆಗಿದೆ. ಆರತಿಯ ಹತ್ಯೆ ಬಳಿಕ ತಮ್ಮಯ್ಯ ಕೂಡ ವಿಷ ಸೇವಿಸಿರುವ ಬಗ್ಗೆ ಅನುಮಾನ ಇದೆ. ಮದ್ಯದ ಜತೆಗೆ ವಿಷ ಸೇವಿಸಿರಬಹುದೆಂದು ಶಂಕಿಸಲಾಗಿದೆ. ಸದ್ಯ ಆರೋಪಿಯ ಪತ್ತೆಗಾಗಿ ಪೊಲೀಸರ ಹುಡುಕಾಟ ನಡೆಸಿದ್ದು, ತಮ್ಮಯ್ಯಗೂ ಮೃತ ಆರತಿಗೂ ಏನು ಸಂಬಂಧ, ಯಾವ ಕಾರಣಕ್ಕೆ ಹತ್ಯೆ ಆಗಿರಬಹುದು ಎಂದು ತನಿಖೆ ಮುಂದುವರಿಸಿದ್ದಾರೆ,

ಇದನ್ನೂ ಓದಿ | Fire accident | ಶಾರ್ಟ್‌ ಸರ್ಕಿಟ್‌ನಿಂದ ಸುಟ್ಟು ಕರಕಲಾದ ಮನೆ, 3 ಮೇಕೆ ಮರಿಗಳು ಸಜೀವ ದಹನ

Exit mobile version