Site icon Vistara News

Murder Case: ಜಸ್ಟ್‌ 40 ಸೆಕೆಂಡ್‌ನಲ್ಲಿ 26 ಬಾರಿ ಮಚ್ಚಿನಿಂದ ಕೊಚ್ಚಿ ಕೊಚ್ಚಿ ಕೊಂದರು!

murder video

ಬೆಂಗಳೂರು: ನೀವೂ ನನ್ನ ಶಿಷ್ಯಂದರು ನಾನೇ ನಿಮ್ಮಗೆಲ್ಲ ಬಾಸ್‌.‌ ಏರಿಯಾದಲ್ಲಿ ನಿಮ್ಮಗಳದ್ದು ಹವಾ ಜಾಸ್ತಿ ಆಗಿದೆ ಎಂದು ಆವಾಜ್‌ ಹಾಕಿದ ರೌಡಿಶೀಟರ್‌ನನ್ನು ಆತನ ಸ್ನೇಹಿತರೇ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದರು. ಮಹದೇವಪುರದಲ್ಲಿ ಕಳೆದ ಮೇ 25ರಂದು ರೌಡಿಶೀಟರ್‌ ರೇಣುಕುಮಾರ್ (24) ಎಂಬಾತನನ್ನು ಪ್ರಶಾಂತ್, ಶ್ರೀಕಾಂತ್, ವಸಂತ ಕುಮಾರ್ ಎಂಬುವವರು ಅಟ್ಟಾಡಿಸಿ ಕೊಂದಿದ್ದರು.

ಬೈಕ್‌ಗೆ ಅಡ್ಡಗಟ್ಟಿ ರೇಣುಕುಮಾರ್‌ನನ್ನು ಕೊಂದ ಹಂತಕರು

ರೌಡಿಶೀಟರ್ ರೇಣುಕುಮಾರ್ ಹತ್ಯೆಯ ದೃಶ್ಯವು ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. 40 ಸೆಕೆಂಡ್‌ನಲ್ಲಿ 26 ಬಾರಿ ಮಚ್ಚು ಲಾಂಗಿನಿಂದ ಹೊಡೆದು ಕೊಂದಿದ್ದಾರೆ. ರೇಣುಕುಮಾರ್‌ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಬರುತ್ತಿದ್ದ. ಮತ್ತೊಂದು ಸ್ಕೂಟರ್‌ನಲ್ಲಿ ಹಿಂದಿನಿಂದ ಬಂದ ಈ ಮೂವರು ಹಂತಕರು ರೇಣುಕುಮಾರ್‌ನನ್ನು ಅಡ್ಡಗಟ್ಟಿದ್ದಾರೆ. ಬಳಿಕ ತಾವು ತಂದಿದ್ದ ಮಚ್ಚು, ಲಾಂಗುಗಳಿಂದ ಮನಬಂದಂತೆ ಕೊಚ್ಚಿಕೊಂದಿದ್ದಾರೆ. ಅನಂತರ ಅಲ್ಲಿಂದ ಪರಾರಿ ಆಗಿದ್ದರು.

ರೇಣುಕುಮಾರ್ ಕೊಲೆ ಯತ್ನ, ರಾಬರಿ, ಹಲ್ಲೆ ಸೇರಿದಂತೆ ಏಳು ಕೇಸ್‌ಗಳು ದಾಖಲಾಗಿದ್ದವು. ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ರೇಣುಕುಮಾರ್‌, ನೀವು ನನ್ನ ಜತೆಗೆ ಇರಬೇಕೆಂದು ಶ್ರೀಕಾಂತ್ ಮತ್ತು ಪ್ರಶಾಂತ್‌ಗೆ ಬೆದರಿಕೆಯನ್ನು ಹಾಕಿದ್ದನಂತೆ. ಒಂಟಿಯಾಗಿ ಏನಾದರೂ ಕೆಲಸ ಮಾಡಿದರೆ ನಿಮ್ಮನ್ನು ನಾನು ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದ ಎನ್ನಲಾಗಿದೆ.

`ಜೈಲಿಗೆ ಹೋಗಿ ಬಂದಿದ್ದೇನೆ ನಾನೇ ನಿಮಗೆಲ್ಲ ಬಾಸ್’ ಎಂದು ಈ ಇಬ್ಬರಿಗೆ ಬೆದರಿತ್ತಿದ್ದಂತೆ. ಕಳೆದ ಮೇ 25ರಂದು ಕೂಡ ಶ್ರೀಕಾಂತ್‌ ಮತ್ತು ಪ್ರಶಾಂತ್‌ಗೆ ರೇಣುಕುಮಾರ್‌ ಧಮ್ಕಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ಇವರಿಬ್ಬರು, ರೇಣುಕುಮಾರ್‌ ಬದುಕಿದ್ದರೆ ನಮ್ಮನ್ನು ಹೊಡೆದು ಮುಗಿಸಿಬಿಡುತ್ತಾನೆ. ಹೀಗಾಗಿ ನಾವೇ ಅವನನ್ನು ಹೊಡೆದು ಮುಗಿಸಿಬಿಡೋಣ ಎಂದು ಪ್ಲಾನ್‌ ಮಾಡಿದ್ದಾರೆ.

ಆರೋಪಿಗಳಾದ ಪ್ರಶಾಂತ್, ಶ್ರೀಕಾಂತ್ ಹಾಗೂ ಹತ್ಯೆಯಾದ ಶ್ರೀಕಾಂತ್‌

ಇದನ್ನೂ ಓದಿ: Murder Case : ನೀನೇ ನನ್ನುಸಿರು ಎಂದವ ಉಸಿರುಗಟ್ಟಿಸಿ ಕೊಂದ; ಆತ್ಮಹತ್ಯೆಯೆಂದು ಬಿಂಬಿಸಲಾಗದೆ ಓಡಿ ಹೋದ!

ಶ್ರೀಕಾಂತ್, ಪ್ರಶಾಂತ್ ಪ್ಲಾನ್‌ಗೆ ಬಂಗಾರಪೇಟೆ ಮೂಲದ ಗೆಳೆಯ ವಸಂತ್‌ನನ್ನು ಜತೆಗೆ ಸೇರಿಸಿಕೊಂಡಿದ್ದಾರೆ. ನಿನ್ನೆ ರೇಣುಕುಮಾರ್‌ನನ್ನು ಕರೆಸಿಕೊಂಡಿದ್ದು, ಮೊದಲೇ ಯೋಜಿಸಿದ್ದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹಳೇ ವೈಷಮ್ಯಕ್ಕೆ ಬಲಿಯಾದ ಉಮೇರ್‌

ಮಾರಕಾಸ್ತ್ರಗಳಿಂದ ಇರಿದು ಯುವಕನ ಬರ್ಬರ ಹತ್ಯೆ

ಕಲಬುರಗಿ ನಗರದ ಆಜಾದಪುರ್ ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ ಮಾಡಲಾಗಿದೆ. ಉಮೇರ್ (23) ಹತ್ಯೆಯಾದ ಯುವಕ. ಕಲಬುರಗಿ ನಗರದ ಬಿಲಾಲಾಬಾದ್ ಕಾಲೋನಿ ನಿವಾಸಿಯಾಗಿರುವ ಉಮೇರ್‌ಗೆ, ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಜೂನ್‌ 5ರ ರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಕ್ತಸಿಕ್ತವಾಗಿ ಬಿದ್ದಿದ್ದ ಉಮೇರ್‌ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version