Site icon Vistara News

Murder case : ಆರ್‌ಟಿಐ ಕಾರ್ಯಕರ್ತನ ಕೊಲೆ ಪ್ರಕರಣ; ನ್ಯಾಯಾಲಯಕ್ಕೆ ಶರಣಾದ ಪ್ರಮುಖ ಆರೋಪಿ

jagaluru pdo-rti murder case

ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ರಾಮಕೃಷ್ಣ ಕೊಲೆ ಪ್ರಕರಣಕ್ಕೆ (Murder case) ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಪಿಡಿಒ ನಾಗರಾಜ್ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ.

ಜಗಳೂರಿನ ಹೊಸಕೆರೆ ಡಾಬಾದ ಬಳಿ ಜ. 7ರಂದು ಆರ್‌ಟಿಐ ಕಾರ್ಯಕರ್ತ ರಾಮಕೃಷ್ಣ ಅವರ ಕೊಲೆಯಾಗಿತ್ತು. ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ರಾಮಕೃಷ್ಣ ಬಯಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಿಡಿಒ ಎ.ಟಿ. ನಾಗರಾಜ್‌ನನ್ನು ಅಮಾನತು ಮಾಡಲಾಗಿತ್ತು.

ತನ್ನ ಭ್ರಷ್ಟಾಚಾರವನ್ನು ಬಯಲಿಗೆಳೆದು ಅಮಾನತಾಗಲು ಕಾರಣವಾದ ರಾಮಕೃಷ್ಣ ಅವರ ಮೇಲೆ ನಾಗರಾಜ್‌ ಬಹಳ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಅವರನ್ನು ಕೊಲೆ ಮಾಡಿಸಲು ಮುಂದಾಗಿದ್ದ. ಈ ಹಿನ್ನೆಲೆಯಲ್ಲಿ ಡಾಬಾದಲ್ಲಿ ಊಟ ಮಾಡುತ್ತಿದ್ದ ನಾಗರಾಜ್‌ ಮೇಲೆ ಮಚ್ವಿನಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಪ್ರಕರಣದ ಪ್ರಮುಖ ಆರೋಪಿ ಪಿಡಿಒ ಎ.ಟಿ. ನಾಗರಾಜ್ ತಲೆಮರೆಸಿಕೊಂಡಿದ್ದ. ಈತ ಈಗ ಗುರುವಾರ ನ್ಯಾಯಾಲಯದ ಮುಂದೆ ಶರಣಾಗತಿಯಾಗಿದ್ದಾನೆ. ಈತನಿಗೆ ಜನವರಿ 21ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಲಾಗಿದೆ.

ದಾವಣಗೆರೆ ಜಿಲ್ಲಾ ಮತ್ತು 2ನೇ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಆದರೆ, ಪೊಲೀಸರು ಈತನನ್ನು ಹೆಚ್ವಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ | Road Accident : ನಾಗೇಗೌಡನಪಾಳ್ಯದಲ್ಲಿ ಡಿವೈಡರ್‌ಗೆ ಬೈಕ್‌ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

Exit mobile version