ಕಲಬುರಗಿ: ನಗರದ ಹಾಗರಗಾ ರಸ್ತೆಯಲ್ಲಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ (Murder case) ಮಾಡಲಾಗಿದೆ. ಮುಜತ್ ಸುಲ್ತಾನ್ (35) ಹತ್ಯೆಯಾದವರು. ಅಜೀಮ್ ಶೇಖ್, ವಸೀಂ ಶೇಖ್, ನಯಿಮ್, ನದೀಮ್ ಹತ್ಯೆ ಮಾಡಿದ ಹಂತಕರಾಗಿದ್ದಾರೆ.
ಕಲಬುರಗಿ ನಗರದ ಜಂಜಂ ಕಾಲೋನಿ ನಿವಾಸಿಯಾಗಿರುವ ಮಜತ್ ಸುಲ್ತಾನ್ ಸಾಮಾಜಿಕ ಕಾರ್ಯಕರ್ತೆಯಾಗಿದ್ದರು. ಮಜತ್ ಸುಲ್ತಾನ್ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಂತಕರು ಮೊದಲು ಕಾರಿನಿಂದ ಗುದ್ದಿ ಕೆಳಗೆ ಬೀಳಿಸಿದ್ದಾರೆ. ಕೆಳಗೆ ಬಿದ್ದವಳು ಮೇಲೆ ಏಳಲು ಹೋದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹತ್ಯೆ ಕಾರಣ ಏನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಹುಡುಗಿಗೆ ಬಣ್ಣದೋಕುಳಿ ಎರಚಿದ ಹುಡುಗನ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ
ಕೋಲಾರ: ಇಲ್ಲಿನ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ಹುಡುಗನೊಬ್ಬ ಹುಡುಗಿಗೆ ಹೋಳಿ ಬಣ್ಣ ಎರಚಿದ ಕಾರಣಕ್ಕೆ ಸಿಟ್ಟಿಗೆದ್ದ ಗುಂಪು ಆತನನ್ನು ಕಿಡ್ನ್ಯಾಪ್ (Assault Case) ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಧು ಎಂಬುವವನು ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ಹುಡುಗಿಯ ಸೂಚನೆ ಮೇರೆಗೆ ದಾನಹಳ್ಳಿ ಗ್ರಾಮದ ಡಿಎನ್‌ಡಿ ಮಧು ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮಧು ಪೋಷಕರು ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಹಲ್ಲೆಗೊಳಗಾದ ಮಧು ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಅನುಪ್ರಿಯಾ ಎಂಬಾಕೆ ಕೋಲಾರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರಿಬ್ಬರು ಒಂದೇ ಗ್ರಾಮದವರಾಗಿದ್ದ ಕಾರಣ ನಿತ್ಯ ಒಂದೇ ಬಸ್‌ನಲ್ಲಿ ಸಂಚರಿಸುತ್ತಿದ್ದರು. ಹೋಳಿ ಹಬ್ಬ ಹಿನ್ನೆಲೆಯಲ್ಲಿ ಮಧು, ಅನುಪ್ರಿಯಾಗೆ ಬಣ್ಣವನ್ನು ಎರಚಿದ್ದಾನೆ.
ಇದನ್ನೂ ಓದಿ: Ugadi 2023: ಯುಗಾದಿಗೆ ಇಲಾಳ ಮೇಳದ ಫಲ ಭವಿಷ್ಯ; ಪಂಚಭೂತಗಳಿಗೂ ವಿಕೋಪ, ಗಾಳಿ ಗಂಡಾಂತರ
ಈ ಘಟನೆ ನಡೆದು ಎರಡು ದಿನಗಳ ನಂತರ ಡಿಎನ್‌ಡಿ ಮಧು ಗ್ಯಾಂಗ್ ಸೇರಿ ಬಣ್ಣ ಎರಚಿತ ಮಧುವನ್ನು ಅಪಹರಣ ಮಾಡಿದ್ದಾರೆ. ಬಳಿಕ ಬಯಲು ನರಸಾಪುರ ಗಿಡಾನ್‌ನಲ್ಲಿ ಮಧುವನ್ನು ತಲೆ ಕೆಳಗಾಗಿ ಕಟ್ಟಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಮಧುವಿಗೂ ದಾನಗಳ್ಳಿ ಗ್ರಾಮದ ಡಿಎನ್‌ಡಿ ಮಧುವಿಗೂ ಯಾವುದೇ ಸಂಬಂಧವಿಲ್ಲ. ಆದರೆ, ಅನುಪ್ರಿಯಾ ಸೂಚನೆಯಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಗಾಯಾಳು ಮಧುವನ್ನು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಪರಾರಿ ಆಗಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ