ಬೆಂಗಳೂರು: ಪರಪುರುಷನ ವ್ಯಾಮೋಹಕ್ಕೆ ಬಿದ್ದ ತಾಯಿಯೊಬ್ಬಳು ಬೆಳೆದು ನಿಂತ ಮಗನನ್ನು ಕಳೆದುಕೊಂಡಿದ್ದಾಳೆ. ಎರಡನೇ ಮದುವೆಯಾದ ಪತ್ನಿಗೆ ಬುದ್ಧಿ ಕಲಿಸಬೇಕೆಂದು ಸಿಟ್ಟಿಗೆ ಬಿದ್ದು ಮಲ ಮಗನನ್ನು ಕೆರೆಗೆ ತಳ್ಳಿ ಹತ್ಯೆ (Murder Case) ಮಾಡಿದ್ದಾನೆ. ಚೇತನ್ ರೆಡ್ಡಿ ಮೃತ ದುರ್ದೈವಿ.
ಟಿಪ್ಪರ್ ಲಾರಿ ಡ್ರೈವರ್ ಆಗಿರುವ ಪ್ರವೀಣ್ ಹಾಗೂ ಪುಷ್ಪ ದಂಪತಿಯ ಮಗನೇ ಈ ಚೇತನ್ ರೆಡ್ಡಿ. ಪ್ರವೀಣ್‌ಗೆ ಸಂಪತ್ ಎಂಬ ಸ್ನೇಹಿತ ಇದ್ದ. ಆದರೆ, ಈ ಸಂಪತ್ ಗೆಳೆಯನ ಪತ್ನಿ ಮೇಲೆ ಕಣ್ಣು ಹಾಕಿದ್ದ. ಅದು ಹೇಗೋ ಬಲೆಗೆ ಬೀಳಿಸಿಕೊಂಡ ಸಂಪತ್ ಪುಷ್ಪಾಳೊಂದಿಗೆ ಪ್ರೀತಿ ಪ್ರೇಮದೊಂದಿಗೆ ದೈಹಿಕ ಸಂರ್ಪಕವನ್ನೂ ಬೆಳೆಸಿದ್ದ.
ಪುಷ್ಪಾಳ ಪತಿ ಪ್ರವೀಣ್ ಕೆಲಸಕ್ಕೆ ಹೋಗುತ್ತಿದ್ದಂತೆ ಈ ಸಂಪತ್ ಮನೆಗೆ ಬಂದು ಹೋಗುವುದು ಮಾಡುತ್ತಿದ್ದ. ಪುಷ್ಪಾ ಮತ್ತು ಸಂಪತ್ ನಡುವಿನ ಅಕ್ರಮ ಸಂಬಂಧ ತಿಳಿಯುತ್ತಿದ್ದಂತೆ ಪ್ರವೀಣ್ ಪತ್ನಿ ಪುಷ್ಪಳಿಗೆ ಡಿವೋರ್ಸ್ ಕೊಟ್ಟಿದ್ದರು. ಇತ್ತ ಪ್ರವೀಣ್ ತನ್ನ ಮಗ ಚೇತನ್ ರೆಡ್ಡಿಯನ್ನು ಪೋಷಿಸಿದರೆ, ಮಗಳನ್ನು ಪೋಷಿಸುವ ಜವಾಬ್ದಾರಿಯನ್ನು ಪುಷ್ಪಾ ತೆಗೆದುಕೊಂಡಿದ್ದಳು.
ಪ್ರವೀಣ್ ಜತೆಗೆ ಪುಷ್ಪಾ ಡಿವೋರ್ಸ್ ಪಡೆದುಕೊಂಡ ಬಳಿಕ ಸಂಪತ್ ಜತೆಗೆ ವಾಸವಿರಲು ಮುಂದಾಗಿದ್ದಳು. ಒಂದು ಹೆಜ್ಜೆ ಮುಂದೆ ಹೋಗಿ ಸಂಪತ್, ಪುಷ್ಪಳನ್ನು ರಿಜಿಸ್ಟರ್ ಮ್ಯಾರೇಜ್ ಆಗಿ ಕೋಲಾರದ ಕೆಜಿಎಫ್‌ನಲ್ಲಿ ವಾಸವಾಗಿದ್ದ. ಈ ನಡುವೆ ಸಂಪತ್‌ಗೆ ಪುಷ್ಪಳ ನಡೆತೆ ಮೇಲೆ ಅನುಮಾನ ಪಡುತ್ತಿದ್ದ. ಹೀಗಾಗಿ ಪದೆ ಪದೇ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದನಂತೆ. ಇದರಿಂದ ನೊಂದ ಪುಷ್ಪಾ ಸಂಪತ್ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದ್ದಳು.
ಮಕ್ಕಳನ್ನು ಮುಂದಿಟ್ಟು ಬ್ಲ್ಯಾಕ್ ಮೇಲ್
ಇತ್ತ ಪುಷ್ಪಾ ಫೋನ್ ನಂಬರ್ ಬ್ಲಾಕ್ ಮಾಡಿದ ಕಾರಣಕ್ಕೆ ಸಾಕಷ್ಟು ಬಾರಿ ಮನೆ ಬಳಿ ತೆರಳಿದ್ದ ಆದರೆ ಆಕೆ ಸಿಕ್ಕಿರಲಿಲ್ಲ. ಹೀಗಾಗಿ ಸಂಪತ್ ಪುಷ್ಪಾಳ ಮಕ್ಕಳನ್ನು ಮುಂದಿಟ್ಟು ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನ ಮಾಡಿದ್ದ. ಮೊದಲು ಮನೆ ಬಳಿ ಇದ್ದ ಪುಷ್ಪಾಳ ಮಗಳನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದು ಆಕೆ ಬರಲು ಒಪ್ಪದೆ ಇದ್ದಾಗ ನಿರಾಸೆ ಆಗಿದ್ದ.
ಬಿರಿಯಾನಿ ಆಸೆಗೆ ಬಿದ್ದ ಬಾಲಕ
ಯಾವಾಗ ಪ್ಲ್ಯಾನ್ ಎ ಫ್ಲಾಪ್ ಆಯಿತೋ ಬಳಿಕ ಪುಷ್ಪಾಳ ಮಗ ಚೇತನ್ ರೆಡ್ಡಿಯನ್ನು ಕಿಡ್ನ್ಯಾಪ್ ಮಾಡಲು ಸಂಪತ್ ಪ್ಲ್ಯಾನ್ ಮಾಡಿಕೊಂಡಿದ್ದ. ಚಿಲ್ಡ್ರನ್ ವುಡ್ ಕೇಂದ್ರದಲ್ಲಿ ಇದ್ದ ಪ್ರವೀಣ್ ಪುತ್ರ ಚೇತನ್ ರೆಡ್ಡಿಗೆ ಬಿರಿಯಾನಿ ಹಾಗೂ ಚಾಕಲೇಟ್ ಕೊಡಿಸುವುದಾಗಿ ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗಿದ್ದ.
ಬಾಲಕ ಚೇತನ್ ರೆಡ್ಡಿಯನ್ನು ಬೈಕ್‌ನಲ್ಲಿ ಸುತ್ತಾಡಿಸಿದ್ದ ಸಂಪತ್, ಪುಷ್ಪಾಳ ಫೋನ್‌ಗೆ ಕರೆ ಮಾಡಿದ್ದ. ಆದರೆ, ಪುಷ್ಪಾ ಸಂಪತ್ ಫೋನ್ ನಂಬರ್ ಅನ್ನು ಬ್ಲ್ಯಾಕ್ ಮಾಡಿದರಿಂದ ಕನೆಕ್ಟ್ ಆಗಿರಲಿಲ್ಲ. ಇತ್ತ ಸಿಟ್ಟಿಗೆ ಬಿದ್ದ ಸಂಪತ್ ಪುಷ್ಪಾಳಿಗೆ ಬುದ್ಧಿ ಕಲಿಸಬೇಕೆಂದು ಅಲ್ಲೇ ಪಕ್ಕದಲ್ಲಿದ್ದ ಕೆರೆಗೆ ಚೇತನ್ ರೆಡ್ಡಿಯನ್ನು ತಳ್ಳಿ ಬಂದಿದ್ದಾನೆ.
9 ದಿನಗಳ ನಂತರ ಕೃತ್ಯ ಬಯಲಿಗೆ
ಚೇತನ್ ರೆಡ್ಡಿ ಕಾಣದೆ ಇದ್ದಾಗ ಪ್ರವೀಣ್ ಮತ್ತು ಪುಷ್ಪಾ ಇಬ್ಬರು ಸಂಪತ್ ಬಳಿ ಮಗನ ಬಗ್ಗೆ ವಿಚಾರಿಸಿದಾಗ ಗೊತ್ತಿಲ್ಲ ಎಂದು ಹೇಳಿದ್ದ. ಬಳಿಕ ತನ್ನ ರೂಮಿಗೆ ಸೇರಿಕೊಂಡಿದ್ದ ಸಂಪತ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ. ಇತ್ತ ಅಸ್ವಸ್ಥನಾಗಿದ್ದ ಸಂಪತ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರದ ಬಳಿಕ ಪುಷ್ಪ ಮೇಲಿನ ಸಿಟ್ಟಿಗೆ ಚೇತನ್‌ನನ್ನು ಕೆರೆಗೆ ತಳ್ಳಿದ್ದಾಗಿ ಒಪ್ಪಿಕೊಂಡಿದ್ದ.
ಇದನ್ನೂ ಓದಿ: Modi in Karnataka: ದಶಪಥ ಹೆದ್ದಾರಿ ಮಾಡಿಸಿದ್ದು ಮೋದಿಯೇ; ಈ ಬಾರಿ ಮಂಡ್ಯದಲ್ಲಿ ಕೇಸರಿ ಧ್ವಜ ಹಾರಾಟ: ನಳಿನ್ ಕುಮಾರ್ ಕಟೀಲ್
ಈ ಸಂಬಂಧ ಪ್ರವೀಣ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಗ್ನಿಶಾಮಕ ದಳ ಸಹಾಯದಿಂದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ 9 ದಿನಗಳ ನಂತರ ಚೇತನ್ ಮೃತದೇಹ ಸಿಕ್ಕಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲೂರು ಪೊಲೀಸರು ಆರೋಪಿ ಸಂಪತ್‌ನನ್ನು ಬಂಧಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ