Site icon Vistara News

Murder Case : ರೈಲ್ವೇ ಟ್ರ್ಯಾಕ್‌ನಲ್ಲಿ ಬಿಎಡ್‌ ವಿದ್ಯಾರ್ಥಿ ಶವ; ಯುವತಿ ಪ್ರೀತಿಯೇ ಮುಳುವಾಯ್ತೇ?

Hanumanth Student death

ರಾಯಚೂರು: ರಾಯಚೂರು ನಗರದ ರೈಲ್ವೆ ನಿಲ್ದಾಣದ (Raichur Railway station) ಬಳಿ ರೈಲ್ವೆ ಟ್ರ್ಯಾಕ್‌ ಮೇಲೆ ಯುವಕನೊಬ್ಬನ ಶವ ಪತ್ತೆಯಾಗಿದೆ. ಆದರೆ ಆತ ರೈಲಿಗೆ ಸಿಲುಕಿ ಮೃತಪಟ್ಟಿದ್ದಲ್ಲ. ಬದಲಾಗಿ ಆತನನ್ನು ಎಲ್ಲೋ ಕೊಲೆ ಮಾಡಿ ತಂದು ಹಾಕಿದ ಹಾಗಿದೆ. ಅಥವಾ ಅಲ್ಲೇ ಕೊಲೆ ಮಾಡಿ (murder Case) ಎಸೆದು ಹೋಗಿರುವ ಸಾಧ್ಯತೆಯೂ ಇದೆ.

ಅನುಮಾನಾಸ್ಪದವಾಗಿ ಮೃತಪಟ್ಟಿರುವ ಯುವಕನ ಹೆಸರು ಹನುಮಂತ (23). ಮಾನ್ವಿ ತಾಲೂಕಿನ ಬೈಲ್ಮಾರ್ಚಾಡ್ ನಿವಾಸಿ‌ಯಾಗಿರುವ ಹನುಮಂತ ನಗರದ ಖಾಸಗಿ ಕಾಲೇಜಿನಲ್ಲಿ ಬಿಎಡ್ ಓದುತ್ತಿದ್ದ. ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಬಿಎಡ್ (BEd Student) ಕೋರ್ಸ್ ಸ್ಟಡಿ ಮಾಡುತ್ತಿದ್ದ.

ಸೋಮವಾರ ಸಂಜೆ ಹಾಸ್ಟೆಲ್‌ನಿಂದ ಬ್ಯಾಗ್ ಸಮೇತ ಹೊರ ನಡೆದಿದ್ದ ಹನುಮಂತ ಮಂಗಳವಾರ ಬೆಳಗ್ಗೆ ಅನುಮಾನಾಸ್ಪದವಾಗಿ ರೈಲ್ವೆ ಟ್ರ್ಯಾಕ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಪೊಲೀಸ್‌ ಪರೀಕ್ಷೆ ಕೂಡಾ ಬರೆದಿದ್ದ

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಹನುಮಂತ ಶಿಕ್ಷಕನಾಗಬೇಕು ಎಂಬ ಕನಸು ಹೊಂದಿದ್ದ. ಅದೇ ವೇಳೆ ಪೊಲೀಸ್‌ ಇಲಾಖೆಯ ಪರೀಕ್ಷೆಯನ್ನೂ ಬರೆದಿದ್ದ. ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ಸಿದ್ಧ ಮಾಡಿಕೊಳ್ಳಬೇಕು ಎಂದು ಹೇಳುತ್ತಿದ್ದ. ಆದರೆ ಈಗ ಎಲ್ಲ ಕನಸುಗಳು ನುಚ್ಚು ನೂರಾಗಿವೆ.

ಇದನ್ನೂ ಓದಿ: Gold Smuggling : ವಿಮಾನದಲ್ಲಿ ಬಂಗಾರದ ಮನುಷ್ಯರು!; ಪ್ಯಾಂಟಲ್ಲೂ ಚಿನ್ನ, ಪ್ಯಾಂಟಿನೊಳಗೂ ಚಿನ್ನ, ಗಂಟಲ್ಲೂ ಚಿನ್ನ!

ಪ್ರೀತಿಯೇ ಮುಳುವಾಯ್ತಾ ಯುವಕನಿಗೆ?

ಮೃತ ಯುವಕ ಹನುಮಂತ ಶಹಾಪುರ ಮೂಲದ ಯುವತಿ ಜೊತೆ ಪ್ರೀತಿ ಹೊಂದಿದ್ದ ಎಂದು ಹೇಳಲಾಗಿದೆ. ಈ ವಿಚಾರದಲ್ಲಿ ಏನಾದರೂ ತೊಂದರೆಯಾಗಿ ಪ್ರಾಣವೇ ಹೋಯಿತೆ ಎಂಬ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ರಿಮ್ಸ್ ಆಸ್ಪತ್ರೆಯಲ್ಲಿ ಮೃತ ಯುವಕನ ಮರಣೋತ್ತರ ಪರೀಕ್ಷೆ ನಡೆದಿದ್ದು, ಆಸ್ಪತ್ರೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಆಟೋ

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ರಸ್ತೆಯ ಬಳಿ ಚಾಲಕನ ನಿಯಂತ್ರಣ ತಪ್ಪಿದ ಆಟೋ ಒಂದು ಕಂದಕಕ್ಕೆ ಉರುಳಿದೆ. ಆಟೋ‌ ಚಾಲಕ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿವೆ. ಚಾಲಕನ ಸ್ಥಿತಿ ಗಂಭೀರವಾಗಿದ್ದು ಬೆಳ್ತಂಗಡಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಬೆಳ್ತಂಗಡಿ ಮೂಲದ ಆಟೋ ಚಾಲಕ ನಜೀರ್ ಅವರು ತಮ್ಮ ರಿಕ್ಷಾದಲ್ಲಿ ಜಾವಗಲ್‌ನಿಂದ ಬೆಳ್ತಂಗಡಿಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಚಾರ್ಮಾಡಿ ಘಾಟ್ ರಸ್ತೆಯ ಅತ್ತಿಗೆರೆ ಸಮೀಪ ಆಟೋ ಪಲ್ಟಿ ಹೊಡೆದಿದೆ.

ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.

Exit mobile version