Site icon Vistara News

Murder Case | ಪತ್ನಿ ಶೀಲ ಶಂಕಿಸಿದ ಪತಿ; ಉಸಿರುಗಟ್ಟಿಸಿ ಕೊಂದು ಪರಾರಿಯಾದ ಪಾಪಿ

ಬೆಂಗಳೂರು: ಇಲ್ಲಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿದ್ದು, ಆಕೆಯ ಉಸಿರುಗಟ್ಟಿಸಿ ಕೊಂದು (Murder Case) ಪರಾರಿ ಆಗಿದ್ದಾನೆ. ನಾಜ್‌ (22) ಕೊಲೆಯಾದ ದುರ್ದೈವಿ.

Murder Case

ತಾವರೆಕೆರೆಯ ಸುಭಾಷ್ ನಗರದ ಫ್ಲ್ಯಾಟ್‌ನಲ್ಲಿ ನಾಜ್ ಪತಿ ನಾಸೀರ್ ಹುಸೇನ್ ಹತ್ಯೆಗೈದಿದ್ದಾನೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಸೀರ್‌, ಕಳೆದ ಆರು ತಿಂಗಳ ಹಿಂದಷ್ಟೇ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಆದರೆ ಈ ನಡುವೆ ನಾಸೀರ್‌ ಹುಸೇನ್‌ಗೆ ಪತ್ನಿಯ ಮೇಲೆ ಅನುಮಾನ ಮೂಡಿದ್ದು ಶೀಲ ಶಂಕಿಸಿದ್ದ ಎಂದು ತಿಳಿದು ಬಂದಿದೆ.

ಇದೇ ಕಾರಣಕ್ಕೆ ಆಕೆಯನ್ನು ಕೊಂದು ಬಳಿಕ ಆಕೆ ಅಣ್ಣನಿಗೆ ಮೊಬೈಲ್‌ ಸಂದೇಶ ರವಾನಿಸಿ, ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ಸುದ್ದುಗುಂಟೆ ಠಾಣೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಪರಾರಿ ಆಗಿರುವ ಪತಿಯ ಹುಡುಕಾಟ ನಡೆಸಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ದಂಪತಿ
ನಾಜ್‌ ಹಾಗೂ ನಾಸಿರ್‌ ಪ್ರೀತಿಸಿ ಮದುವೆ ಆಗಿದ್ದರು. ತಂದೆ-ತಾಯಿ ಇಲ್ಲದ ನಾಸಿರ್‌ನ ಒಳ್ಳೆ ಕ್ಯಾರೆಕ್ಟರ್ ನೋಡಿ ನಾಜ್ ಪೋಷಕರು ಮದುವೆ ಮಾಡಿ ಕೊಟ್ಟಿದ್ದರು. ಕಳೆದ ಆರು ತಿಂಗಳ ಹಿಂದಷ್ಟೇ ಮದುವೆ ಆಗಿ ಬೆಂಗಳೂರಿನ ಫ್ಲ್ಯಾಟ್‌ನಲ್ಲಿದ್ದರು. ಈ ವೇಳೆ ನಜಾ ಗರ್ಭಿಣಿ ಎಂಬ ಸುದ್ದಿ ತಿಳಿದಿದೆ. ಇದರಿಂದ ಸಂತೋಷಗೊಳ್ಳದ ನಾಸಿರ್‌ ಸಂದೇಹ ಪಟ್ಟಿದ್ದ. ಅದು ತನ್ನ ಮಗುವಲ್ಲ ಎಂದು ಕಿರಿಕ್ ತೆಗೆದಿದ್ದ, ಅಷ್ಟೇ ಅಲ್ಲದೇ ಅಬಾರ್ಷನ್ ಮಾಡಿಸಬೇಕೆಂದು ಒತ್ತಾಯ ಮಾಡಿದ್ದ ಎಂದು ತಿಳಿದು ಬಂದಿದೆ. ಆದರೆ ಅಬಾರ್ಷನ್‌ ಮಾಡಿಸುವುದು ಪತ್ನಿಗೆ ಇಷ್ಟ ಇರಲಿಲ್ಲ. ಹೀಗಾಗಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು. ಜಗಳ ವಿಕೋಪಕ್ಕೆ ಹೋಗಿ ಹೆಂಡತಿಯನ್ನು ಕೊಲೆಗೈದಿದ್ದಾನೆ.

ಇದನ್ನೂ ಓದಿ | Thief Case | ಡಾಕ್ಟರ್‌ ಸೋಗಿನಲ್ಲಿ ಬಂದು ರೋಗಿಗಳ ಬಂಗಾರ ಕದ್ದು ಪರಾರಿಯಾದ ಕಳ್ಳಿ

Exit mobile version