ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಟಾಪಟಿಯಲ್ಲಿ (Figght for road) ಒಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ (Chitragurga news) ಹೊಸದುರ್ಗ ತಾಲೂಕಿನ ಲಕ್ಷ್ಮಿ ದೇವರಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಕೊಲೆಯಾದವರು ಪಾಲಾಕ್ಷಿ ಎಂಬ 35 ವರ್ಷದ ಮಹಿಳೆ.
ಜಮೀನಿಗೆ ಹೋಗುವ ದಾರಿ ಬಿಟ್ಟುಕೊಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಪಾಲಾಕ್ಷಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿತ್ತು. ಎರಡು ಗುಂಪುಗಳೂ ದೊಣ್ಣೆ ಮತ್ತಿತರ ಪರಿಕರಗಳನ್ನು ಹಿಡಿದುಕೊಂಡೇ ಹೊಡೆದಾಟ ನಡೆಸಿದ್ದವು. ಈ ವೇಳೆ ಪಾಲಾಕ್ಷಿ ಅವರಿಗೆ ಗಂಭೀರ ಗಾಯಗಳಾಗಿ ಅವರು ಪ್ರಾಣ ಕಳೆದುಕೊಂಡರು.
ರಾಜಪ್ಪ, ಬಸವರಾಜ್, ಚಂದ್ರಶೇಖರ್, ನಾಗರಾಜ್ ಸೇರಿ ಹಲವರು ಗುಂಪಾಗಿ ಬಂದು ಹಲ್ಲೆ ಮಾಡಿ ಈ ಕೊಲೆಗೆ ಕಾರಣರಾಗಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಹೊಸದುರ್ಗ ಸಿಪಿಐ ತಿಮ್ಮಣ್ಣ ಭೇಟಿ ನೀಡಿದ್ದು, ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ತಹಸೀಲ್ದಾರ್ ಹೃದಯಾಘಾತದಿಂದ ಸಾವು
ಬೆಳಗಾವಿ: ಇಲ್ಲಿನ ತಹಸೀಲ್ದಾರ್ ಅಶೋಕ ಮಣ್ಣಿಕೇರಿ (48) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಬೆಳಗಾವಿಯ ಕ್ಲಬ್ ರಸ್ತೆಯ ಮನೆಯಲ್ಲಿ ರಾತ್ರಿ ಊಟ ಮಾಡಿ, ಮನೆಯವರ ಜತೆಗೆ ಮಾತನಾಡಿ ಮಲಗಿದ್ದರು ಅಶೋಕ್ ಮಣ್ಣಿಕೇರಿ. ತಡ ರಾತ್ರಿ ಮಲಗಿದಲ್ಲೇ ಅವರಿಗೆ ಹೃದಯಾಘಾತವಾಗಿದ್ದು, ನೋವಿನಿಂದ ನರಳುತ್ತಿದ್ದ ಅವರನ್ನು ಕುಟುಂಬಸ್ಥರು ಕೂಡಲೇ ಕೆಎಲ್ಇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಬೆಳಗಿನ ಜಾವ ಅವರು ವಿಧಿವಶರಾದರು.
ಅಶೋಕ ಮಣ್ಣಿಕೇರಿ ಅವರು ಬೆಳಗಾವಿ ಎಸಿ ಕಚೇರಿಯಲ್ಲಿ ತಹಶೀಲ್ದಾರ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಬ್ಯಾಡಗಿ ಬಳಿ ಖಾಸಗಿ ಬಸ್ ಪಲ್ಟಿ ಇಬ್ಬರು ಸ್ಥಳದಲ್ಲೇ ಸಾವು
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿ ಖಾಸಗಿ ಬಸ್ ಒಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದಾನಂದ ಬೆಳಗಾವ್ (50), ವೀರಬಸಪ್ಫ (22) ಮೃತ ದುರ್ದೈವಿಗಳು. ಇವರಲ್ಲಿ ಒಬ್ಬರು ಚಾಲಕರಾಗಿದ್ದರೆ, ಇನ್ನೊಬ್ಬರು ಪ್ರಯಾಣಿಕರು.
ಬೆಂಗಳೂರಿನಿಂದ ಮೀರಜ್ ಕಡೆ ಹೊರಟಿದ್ದ ಬಸ್ ವೇಗವಾಗಿ ಸಾಗುವ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕಕ್ಕೆ ಗುದ್ದಿ ಪಲ್ಟಿಯಾಗಿ ಈ ಸಾವು ಸಂಭವಿಸಿದೆ. ಬಸ್ ಪಲ್ಟಿಯಾಗಿ ಬಿದ್ದು ಚಾಲಕ ಮತ್ತು ಪ್ರಯಾಣಿಕರೊಬ್ಬರು ಪ್ರಾಣ ಬಿಟ್ಟರೆ, ಇತರ ಹಲವು ಮಂದಿ ಗಾಯಗೊಂಡರು.
ಬ್ಯಾಡಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Wheeling for Insta | ಪ್ರತಿ ದಿನ ಇನ್‌ಸ್ಟಾ ಅಪ್ಡೇಟ್ ಮಾಡಲು ರಸ್ತೆಯಲ್ಲಿ ವೀಲಿಂಗ್ ಮಾಡಿ ಯುವಕನ ಹುಚ್ಚಾಟ