ರಾಯಚೂರು: ರಾಯಚೂರು ಜಿಲ್ಲೆಯ (Raichur News) ಸಿಂಧನೂರು ತಾಲೂಕಿನ ಜವಳಗೇರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯೊಬ್ಬರ (Dead Body of woman) ಶವ ಪತ್ತೆಯಾಗಿದ್ದು, ಇದೊಂದು ಅತ್ಯಾಚಾರ (Physical abuse) ಮಾಡಿ ಕೊಲೆ ಮಾಡಿ (Murder case) ಎಸೆದು ಹೋದ ಪ್ರಕರಣ ಎಂದು ಭಾವಿಸಲಾಗಿದೆ. ಮೃತ ಮಹಿಳೆಯ ಮುಖದ ಮೇಲೆ ಕಪ್ಪು ಬಣ್ಣದ ಆಯಿಲ್ ಹಾಕಲಾಗಿದ್ದು, ಸಾಕ್ಷ್ಯ ನಾಶಪಡಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ.
ರಾಯಚೂರು ಹೆದ್ದಾರಿಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ಈ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 30-35 ವರ್ಷದ ಮಹಿಳೆ ಇವರು ಎಂದು ಅಂದಾಜಿಸಲಾಗಿದೆ ಯಾರೋ ರಕ್ಕಸರು ಮೊದಲು ಅತ್ಯಾಚಾರ ಎಸಗಿ ಬಳಿಕ ಬಲವಾದ ವಸ್ತುವಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮಹಿಳೆಯ ತಲೆಯ ಹಿಂಬದಿಯಲ್ಲಿ ರಕ್ತದ ಗಾಯಗಳಿವೆ. ಮಹಿಳೆಯ ಮೈಮೇಲಿರುವ ಬಟ್ಟೆಗಳನ್ನು ಎಳೆದಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಬೇರೆ ಸ್ಥಳದಲ್ಲಿ ಕೊಲೆಗೈದು ಸಾಕ್ಷ್ಯ ನಾಶಪಡಿಸಲು ದುರುಳರು ನಿರ್ಜನ ಪ್ರದೇಶದಲ್ಲಿ ಶವ ತಂದು ಹಾಕಿದ್ದಾರೆ ಎನ್ನ ಲಾಗಿದೆ.
ಮೃತಪಟ್ಟ ಮಹಿಳೆಯ ಬಲಗೈಯಲ್ಲಿ ತಿರುಪತಮ್ಮ ಎಂದು ತೆಲಗು ಭಾಷೆಯಲ್ಲಿ ಹಚ್ಚೆ ಇದೆ. ಬಲಗೈ ಬೆರಳಿಗೆ ಆಮೆ ಆಕೃತಿಯ ಉಂಗುರ ಧರಿಸಿದ್ದಾಳೆ. ಸಿಂಧನೂರು ಭಾಗದಲ್ಲಿ ನೆರೆ ರಾಜ್ಯದಿಂದ ಬಂದು ನೆಲೆಸಿರುವ ಜನರು ಸಾಕಷ್ಟಿದ್ದಾರೆ. ಇದೆಲ್ಲವೂ ನೋಡಿದಾಗ ಈ ಅಪರಿಚಿ ಶವ ಹೊರ ರಾಜ್ಯದ ಮಹಿಳೆಯದು ಎಂಬ ಸಂಶಯ ಮೂಡುತ್ತಿದೆ.
ಪೊಲೀಸರು ಮಹಿಳೆ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಇತ್ತ ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯ ಮೃತದೇಹವನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: Murder Case : ಪತ್ನಿಯನ್ನು ಜನ ಕಳ್ಳಿ ಎಂದಿದ್ದಕ್ಕೆ ಕೊಂದೇ ಬಿಟ್ಟ!
ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ
ಹಾಸನ: ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಪಲ್ಟಿಯಾಗಿ ಹದಿನೈದಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯವಾಗಿದೆ. ಇವರಲ್ಲಿ ಐವರು ಮಹಿಳಾ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿವೆ
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆಬ್ಬಸಾಲೆ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಸಕಲೇಶಪುರ ಪಟ್ಟಣದ ಸಮೀಪವಿರುವ ಕುಡಗರಗಳ್ಳಿ, ಆಚಂಗಿ, ಗ್ರಾಮದಿಂದ ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಹಾರ್ಲೆ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್‌ಅಪ್ ವಾಹನ ಪಲ್ಟಿಯಾಗಿದೆ.
ಪಿಕ್‌ಅಪ್ ವಾಹನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾರ್ಮಿಕರಿದ್ದರು. ಗಾಯಾಳುಗಳನ್ನು ಸಕಲೇಶಪುರ ಹಾಗೂ ಹಾಸನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.