ಮಂಗಳೂರು: ಇಲ್ಲಿನ ಉಳ್ಳಾಲದ ಕೊಲ್ಯ ಸಾರಸ್ವತ ಕಾಲನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ದುಷ್ಟರಿಬ್ಬರು ಕುಡಿದು ಬಿಯರ್ ಬಾಟಲ್‌ಗಳನ್ನು ಎಸೆಯುತ್ತಿದ್ದರು. ಇದನ್ನು ಕಂಡು ಯುವಕನೊಬ್ಬ ಪ್ರಶ್ನೆ ಮಾಡಿದ್ದ. ಸಿಟ್ಟಿಗೆದ್ದ ಕಿಡಿಗೇಡಿಗಳು ಚಾಕುವಿನಿಂದ ಇರಿದು (Murder case) ಕೊಂದಿದ್ದಾರೆ.
ವರುಣ್ ಗಟ್ಟಿ (28) ಕೊಲೆಯಾದವರು. ಸೂರಜ್ ಮತ್ತು ರವಿರಾಜ್ ಹತ್ಯೆಕೋರರು. ಈ ದುಷ್ಕರ್ಮಿಗಳಿಬ್ಬರು ನಿನ್ನೆ ತಡರಾತ್ರಿ ಶಾಲೆ ಸಮೀಪದ ಕಟ್ಟೆಯೊಂದರಲ್ಲಿ ಕುಳಿತು ಬಿಯರ್ ಕುಡಿಯುತ್ತಿದ್ದರು. ಬಳಿಕ ಬಿಯರ್ ಬಾಟಲಿಯನ್ನು ರಸ್ತೆಗೆ ಎಸೆಯುತ್ತಿದ್ದರು.
ಶಾಲೆ ಸಮೀಪದ ನಿವಾಸಿಯಾಗಿದ್ದ ವರುಣ್ ಗಮಿಸಿ, ತನ್ನ ಸ್ನೇಹಿತ ಅಕ್ಷಯ್ ಜತೆಗೆ ಹೋಗಿ ಸೂರಜ್ ಮತ್ತು ರವಿರಾಜ್‌ನನ್ನು ಬಾಟಲ್ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಈ ವೇಳೆ ನಾಲ್ವರ ನಡುವೆ ವಾಗ್ವಾದ ನಡೆದಿದೆ. ಗಲಾಟೆ ಜೋರಾಗಿದ್ದು, ಸೂರಜ್ ವರುಣ್ ಬೆನ್ನಿಗೆ ಹರಿತವಾದ ಆಯುಧದಿಂದ ಇರಿದಿದ್ದಾನೆ.
ಗಂಭೀರ ಗಾಯಗೊಂಡ ಸ್ಥಿತಿಯಲ್ಲೇ ವರುಣ್ ಸಮೀಪದ ತನ್ನ ಮನೆ ಕಡೆ ನಡೆದು ಹೋಗಿದ್ದಾನೆ. ತಕ್ಷಣ ಕುಟುಂಬಸ್ಥರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ವರುಣ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳದ ರಸ್ತೆಯುದ್ದಕ್ಕೂ ವರುಣ್ ರಕ್ತ ಹರಿದಿದು ಕಲೆಗಳು ಹಾಗೆ ಇವೆ.
ಆರೋಪಿಗಳು ಅದೇ ಸಾರಸ್ವತ ಕಾಲೋನಿಯ ನಿವಾಸಿಗಳಾಗಿದ್ದಾರೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನೂ ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯನಾಗಿದ್ದ, ಮತ್ತೊಬ್ಬ ಆರೋಪಿ ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ಮಂಗಳೂರು ಮೂಡಾದ ಕಮೀಷನರ್ ವಾಹನದ ಚಾಲಕನಾಗಿದ್ದ.
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರನ್ನು ಅಟ್ಟಾಡಿಸಿ ಹೊಡೆದ ಟೂರಿಸ್ಟ್ ಬೋಟ್ ಸಿಬ್ಬಂದಿ; ವಿಡಿಯೊ ವೈರಲ್
ಉಡುಪಿ: ಮಲ್ಪೆ ಬೀಚ್‌ನಲ್ಲಿ (Malpe Beach) ನೈತಿಕ ಪೊಲೀಸ್‌ಗಿರಿ (Moral policing) ನಡೆದ ಘಟನೆಯೊಂದು ವರದಿಯಾಗಿದೆ. ಟೂರಿಸ್ಟ್ ಬೋಟ್ ಸಿಬ್ಬಂದಿಯಿಂದಲೇ (Tourist boat crew) ಪ್ರವಾಸಿಗರ ಮೇಲೆ ಹಲ್ಲೆ (Attack on tourists) ನಡೆದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಲ್ಲದೆ, ಹಲ್ಲೆ ವಿಡಿಯೊ ವೈರಲ್ (Video Viral) ಆಗಿದೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆದರೆ, ಯಾವ ವಿಷಯಕ್ಕೆ ಹಲ್ಲೆ ಮಾಡಲಾಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಪ್ರವಾಸಿಗರನ್ನು ಅಟ್ಟಾಡಿಸಿಕೊಂಡು ಹೋಗಿ ಹೊಡೆದಿರುವ ದೃಶ್ಯ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೀಚ್‌ನಲ್ಲಿ ಪ್ರವಾಸಿಗರು ಹೋಗುವಾಗ ಅವರ ಮೇಲೆ ದಾಳಿ ನಡೆಸಿದ ಟೂರಿಸ್ಟ್ ಬೋಟ್ ಸಿಬ್ಬಂದಿ ಏಕಾಏಕಿ ಹೊಡೆಯಲು ಶುರು ಮಾಡಿದ್ದಾರೆ. ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಈ ಪ್ರವಾಸಿಗರು ಹರಸಾಹಸಪಟ್ಟಿದ್ದಾರೆ. ಬುಧವಾರ (ನ.14) ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾವಿರಾರು ಪ್ರವಾಸಿಗರಿದ್ದ ವೇಳೆಯೇ ನೈತಿಕ ಪೊಲೀಸ್‌ಗಿರಿ ನಡೆಸಿರುವುದರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ, ಈ ಬಗ್ಗೆ ಪೊಲೀಸ್ ಕೇಸ್ ದಾಖಲಾದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹಲ್ಲೆ ಮಾಡಿದವರು ಟೂರಿಸ್ಟ್ ಬೋಟ್ ಸಿಬ್ಬಂದಿಯಾಗಿದ್ದರಿಂದ ಬೋಟ್ ವಿಚಾರವಾಗಿ ಇವರುಗಳ ಮಧ್ಯೆ ಯಾವುದಾದರೂ ತಕರಾರುಗಳು ನಡೆದಿದ್ದವೇ? ಇಲ್ಲವೇ ಗಲಾಟೆ ಮಾಡಿಕೊಂಡು ಬರಲಾಗಿದೆಯೇ? ಈ ಕಾರಣಕ್ಕಾಗಿ ಅವರು ಎಲ್ಲರೂ ಒಟ್ಟಾಗಿ ಬಂದು ಹೊಡೆದಿದ್ದಾರೆಯೇ? ಎಂಬುದು ಗೊತ್ತಾಗಿಲ್ಲ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.