ನೆಲಮಂಗಲ: ಬೆಂಗಳೂರು ಉತ್ತರ ತಾಲೂಕು ಬೈರಗೌಡನಹಳ್ಳಿಯಲ್ಲಿ ಯುವಕನೊಬ್ಬನನ್ನು ಬೈಕ್‌ಗೆ ಕಾರು ಡಿಕ್ಕಿ ಹೊಡೆಸಿ ಕೊಲೆ (Murder case) ಮಾಡಿದೆ. ಸಿನಿಮೀಯ ರೀತಿಯಲ್ಲಿ ನಡೆದ ಕೃತ್ಯದಲ್ಲಿ ಕೊಲೆಯಾದ ಯುವಕನನ್ನು ಚಂದನ್ ಎಂದು ಗುರುತಿಸಲಾಗಿದೆ.
ಫೈನಾನ್ಸ್ ವಿಚಾರದಲ್ಲಿ ಕೊಲೆ ನಡೆದಿರುವ ಶಂಕೆ ಇದ್ದು ಗೆಳೆಯರಾದ ಚಂದನ್ ಮತ್ತು ಅಭಿ ಎಂಬವರೇ ಕೊಲೆಗಾರರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಚಂದನ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬೆನ್ನಟ್ಟಿ ಬಂದ ದುಷ್ಕರ್ಮಿಗಳು ಬೈಕ್‌ಗೆ ಡಿಕ್ಕಿ ಹೊಡೆಸಿದ್ದಾರೆ. ಚಂದನ್ ಕೆಳಗೆ ಉರುಳಿಬೀಳುತ್ತಿದ್ದಂತೆಯೇ ಮುಂದೆ ಹೋಗಿದ್ದ ಕಾರನ್ನು ಮತ್ತೆ ರಿವರ್ಸ್ ತಂದು ಆತನ ಮೇಲೆ ಹತ್ತಿಸಿದ್ದಾರೆ. ಹೀಗೆ ಅತ್ಯಂತ ಭಯಾನಕವಾಗಿ ಕೊಲೆ ಮಾಡಲಾಗಿದೆ.
ಆರೋಪಿಗಳು ಮತ್ತು ಚಂದನ್ ಸ್ನೇಹಿತರೇ ಆಗಿದ್ದಾರೆ. ಅವರಿಬ್ಬರ ಮಧ್ಯೆ ಹಣಕಾಸು ವಿಷಯದಲ್ಲಿ ಜಗಳವಾಗಿದೆ. ಜಗಳ ಮಾಡಿ ಚಂದನ್ ಮುಂದೆ ಹೋಗುತ್ತಿದ್ದಂತೆಯೇ ಆಕ್ರೋಶದಿಂದ ಕುದಿಯುತ್ತಿದ್ದ ಅಭಿ ಮತ್ತು ಚಂದನ್ ಬೆನ್ನಟ್ಟಿ ಕೊಲೆ ಮಾಡಿದ್ದಾರೆ ಎನ್ಲಾಗಿದೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಚಂದನ್ ಜತೆಗಿದ್ದ ಇನ್ನೊಬ್ಬ ವ್ಯಕ್ತಿಗೂ ಗಾಯಗಳಾಗಿವೆ.
ದ್ವಿತೀಯ ಪಿಯು ಪರೀಕ್ಷೆಯ ನಡುವೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ
ಕಾರವಾರ: ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾಳೆ. ಬೆಳಂಬಾರ ತಾಳೇಬೈಲಿನ ನಿವಾಸಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಲ್ಪಾ ಗೌಡ (17) ಮೃತ ದುರ್ದೈವಿ. ಇವಳು ಸರ್ಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.
ಮಾರ್ಚ್ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಆಕೆ ಆರಂಭದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಳು. ಬುಧವಾರ ಬೆಳಗ್ಗೆ ಪಾಲಕರು ಎಂದಿನಂತೆ ಕೂಲಿ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ವಿಷ ಸೇವಿಸಿದ್ದಾಳೆ. ಕೆಲ ಹೊತ್ತಿನ ಬಳಿಕ ಆಕೆ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.
ಬಡ, ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯ ಸಾವಿಗೆ ಏನು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ. ಯಾವುದೇ ಡೆತ್ ನೋಟ್ ಬರೆದಿಟ್ಟಂತೆ ಕಾಣುತ್ತಿಲ್ಲ. ಆಕೆಗೆ ಪರೀಕ್ಷೆಗಳು ಕಷ್ಟವಾಗಿ ಇಲ್ಲವೇ ನಿರೀಕ್ಷಿತ ಅಂಕಗಳು ಬರಲಾರದು ಎಂಬ ಆತಂಕದಲ್ಲಿ ಈ ತೀವ್ರ ಹೆಜ್ಜೆಯನ್ನು ಇಟ್ಟಳೇ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ Love and murder : ಬೇರೆ ಮದುವೆಗೆ ಒಪ್ಪಿಕೊಂಡ ಪ್ರೇಯಸಿಯನ್ನು ಉಸಿರುಗಟ್ಟಿಸಿ ಕೊಂದು ಹಾಕಿದ ಕಿರಾತಕ