Site icon Vistara News

Murder Case: ಬಕ್ರೀದ್‌ ಹಬ್ಬದಂದೇ ಮುಸ್ಲಿಂ ಯುವಕನ ಕೊಲೆ; ಪಾರ್ಟಿ ಮಾಡುತ್ತಿದ್ದಾಗ ಹುಟ್ಟಿದ ಜಗಳ

Murder case in hubballi

ಬಳ್ಳಾರಿ: ಬಕ್ರೀದ್‌ ಸಂಭ್ರಮದಲ್ಲಿದ್ದ (Eid al adah) ಮುಸ್ಲಿಂ ಯುವಕನೊಬ್ಬನನ್ನು (Muslim Youth) ಅವನದೇ ಸಮುದಾಯ ಸ್ನೇಹಿತರೇ ಕೊಲೆ (Murder Case) ಮಾಡಿರುವ ಘಟನೆ ಸೂರಿ ಕಾಲೊನಿಯಲ್ಲಿ ಗುರುವಾರ ಸಂಜೆ ನಡೆದಿದೆ. ಸ್ನೇಹಿತರ ನಡುವಿನ ವಾಗ್ವಾದ ಕೊಲೆಗೆ ಕಾರಣವೆಂದು ಹೇಳಲಾಗುತ್ತಿದೆ.

ಕೊಲೆಯಾದ ಯುವಕ ಬಳ್ಳಾರಿಯ (Ballary News) ನೇತಾಜಿ ನಗರದ ಲಿಯಾಖತ್ ಅಲಿಯಾಸ್ ರೋಷನ್ (24). ಇವನು ಕಲ್ಬುರ್ಗಿಯಲ್ಲಿ ಅರೇಬಿಕ್ ವಿದ್ಯಾಭ್ಯಾಸ ಮಾಡುತ್ತಿದ್ದು ಬಕ್ರೀದ್ ಹಿನ್ನಲೆಯಲ್ಲಿ ಬುಧವಾರ ಸಂಜೆ ಬಳ್ಳಾರಿಗೆ ಆಗಮಿಸಿದ್ದಾನೆ.

ಬಕ್ರೀದ್ ಸಂಜೆ ಸ್ನೇಹಿತರೊಂದಿಗೆ ಈದ್ಗಾ ಮೈದಾನದ ಎದುರುಗಡೆ ಇರುವ ಸೂರಿ ಕಾಲೋನಿಗೆ ಪಾರ್ಟಿ ಮಾಡಲು ಹೋದಾಗ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದು ಮಾರಾಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ಸ್ಥಳಕ್ಕೆ ಎಸ್ಪಿ ನಟರಾಜ್, ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ, ಮೃತ ದೇಹವನ್ನು ವಿಮ್ಸ್ ಗೆ‌ ಕಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸಂಶಯಾಸ್ಪದ ಯುವಕರನ್ನು ವಶಕ್ಕೆ ಪಡೆದು ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ‌ ತನಿಖೆ ಕೈಗೊಂಡಿದ್ದಾರೆ.

ದಾರಿಗಾಗಿ ಜಟಾಪಟಿ; ಮಹಿಳೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ

ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಟಾಪಟಿಯಲ್ಲಿ (Figght for road) ಒಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯ (Chitragurga news) ಹೊಸದುರ್ಗ ತಾಲೂಕಿನ ಲಕ್ಷ್ಮಿ ದೇವರಹಳ್ಳಿಯಲ್ಲಿ ನಡೆದ ಘಟನೆಯಲ್ಲಿ ಕೊಲೆಯಾದವರು ಪಾಲಾಕ್ಷಿ ಎಂಬ 35 ವರ್ಷದ ಮಹಿಳೆ.

ಇದನ್ನೂ ಓದಿ: Murder Case : ಲಕ್ಷ್ಮಿ ಹೆಬ್ಬಾಳ್ಕರ್‌ ಆಪ್ತ, ತಹಸೀಲ್ದಾರ್‌ ಸಾವಿಗೆ ಟ್ವಿಸ್ಟ್‌! ಹೃದಯಾಘಾತವಲ್ಲ, ಕೊಲೆ?

ಜಮೀನಿಗೆ ಹೋಗುವ ದಾರಿ ಬಿಟ್ಟುಕೊಡುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಸಂಜೆ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಪಾಲಾಕ್ಷಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿತ್ತು. ಎರಡು ಗುಂಪುಗಳೂ ದೊಣ್ಣೆ ಮತ್ತಿತರ ಪರಿಕರಗಳನ್ನು ಹಿಡಿದುಕೊಂಡೇ ಹೊಡೆದಾಟ ನಡೆಸಿದ್ದವು. ಈ ವೇಳೆ ಪಾಲಾಕ್ಷಿ ಅವರಿಗೆ ಗಂಭೀರ ಗಾಯಗಳಾಗಿ ಅವರು ಪ್ರಾಣ ಕಳೆದುಕೊಂಡರು.

ರಾಜಪ್ಪ, ಬಸವರಾಜ್, ಚಂದ್ರಶೇಖರ್, ನಾಗರಾಜ್ ಸೇರಿ ಹಲವರು ಗುಂಪಾಗಿ ಬಂದು ಹಲ್ಲೆ ಮಾಡಿ ಈ ಕೊಲೆಗೆ ಕಾರಣರಾಗಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

Exit mobile version