Site icon Vistara News

Murder Case: ಬೈಕ್‌ ಪಾರ್ಕಿಂಗ್‌ ವಿಚಾರಕ್ಕೆ ಕಿರಿಕ್‌; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

woman urinated next to the house was hit with a rod on her private part

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಡುರಸ್ತೆಯಲ್ಲಿಯೇ ಯುವಕನೊಬ್ಬ ಕೊಲೆಯಾಗಿ (Murder Case) ಹೋಗಿದ್ದಾನೆ. ಐವರು ಆರೋಪಿಗಳು ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಅರುಣ್ (22) ಹತ್ಯೆಯಾದ ದುರ್ದೈವಿ ಆಗಿದ್ದಾನೆ.

ಅರುಣ್‌ ಹಾಗೂ ಹತ್ಯೆಕೋರರು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಚಿಕ್ಕಬಾಣವಾರದ ಫಂಕ್ಷನ್‌ ಹಾಲ್ ಬಳಿ ಐವರು ಆರೋಪಿಗಳು ಬೈಕ್‌ ಪಾರ್ಕ್‌ ಮಾಡಿದ್ದರು. ಈ ವೇಳೆ ಅಲ್ಲಿಗೆ ಸ್ನೇಹಿತರ ಜತೆ ಬೈಕ್‌ನಲ್ಲಿ ಅರುಣ್ ಬಂದಿದ್ದರು.

ಆಗ ಬೈಕ್ ಪಾರ್ಕ್ ಮಾಡುವ ವಿಚಾರಕ್ಕೆ ಅರಣ್ ಹಾಗೂ ಆರೋಪಿಗಳ ನಡುವೆ ಗಲಾಟೆ ಆಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿಗೆದ್ದು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಅಲ್ಲೇ ಇದ್ದ ಕಲ್ಲಿನಿಂದ ಅರುಣ್ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಶುಕ್ರವಾರ ತಡರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Karnataka Elections : ಮೋದಿಯನ್ನು ವಿಷದ ಹಾವು ಎಂದ ಖರ್ಗೆ ರಾಜಕೀಯದಲ್ಲಿ ಇರಬಾರದು; ಕೆ.ಎಸ್‌ ಈಶ್ವರಪ್ಪ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.

Exit mobile version