ಬೆಂಗಳೂರು: ಇಲ್ಲಿನ ಗಿರಿನಗರದಲ್ಲಿ ಬೈಕ್ ಓಡಿಸುವ ವಿಚಾರಕ್ಕೆ ಸ್ನೇಹಿತರಿಬ್ಬರು ಕಿತ್ತಾಡಿಕೊಂಡಿದ್ದು, ಕೊಲೆಯಲ್ಲಿ (Murder case) ಅಂತ್ಯವಾಗಿದೆ. ನೇಪಾಳ ಮೂಲದ ತಿಲಕ್ ಚಂದ್ ಕೊಲೆಯಾದವರು. ಸ್ನೇಹಿತ ಸಿದ್ದರಾಜು ಎಂಬಾತ ತಿಲಕ್‌ಗೆ ಚಾಕು ಇರಿದು ಹತ್ಯೆ (Murder case in bengaluru) ಮಾಡಿದ್ದಾನೆ.
ಕುಚುಕು ಗೆಳೆಯರಾದ ತಿಲಕ್ ಹಾಗೂ ಸಿದ್ದರಾಜು ಇಬ್ಬರು ರಾತ್ರಿಯಾದರೆ ಬಾರ್‌ವೊಂದರಲ್ಲಿ ಸೇರುತ್ತಿದ್ದರು. ನಿನ್ನೆ ಭಾನುವಾರ ರಾತ್ರಿಯೂ ಇಬ್ಬರು ಬಾರ್‌ವೊಂದರಲ್ಲಿ ಜತೆಯಾಗಿ ಕುಡಿದು ಮೋಜು ಮಸ್ತಿ ಮಾಡಿದ್ದರು. ಕಂಠಪೂರ್ತಿ ಕುಡಿದ ಇವರಿಬ್ಬರು ಬಾರ್‌ನಿಂದ ಹೊರಗೆ ಬಂದಿದ್ದರು.
ವಾಪಸ್ ಹೋಗುವಾಗ ಬೈಕ್ ಓಡಿಸುವ ವಿಚಾರಕ್ಕೆ ಇಬ್ಬರು ಮಾತಿಗೆ ಮಾತು ಬೆಳೆಸಿದ್ದಾರೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಇವರಿಬ್ಬರು ಒಮ್ಮೆಲೆ ಗಲಾಟೆ ಶುರುವಾಗಿ, ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಸಿದ್ದರಾಜು ತಿಲಕ್ ಚಂದ್‌ಗೆ ಚಾಕು ಇರಿದು ಬಿಟ್ಟಿದ್ದಾನೆ. ತೀವ್ರ ರಕ್ತಸ್ರಾವವಾಗಿ ತಿಲಕ್ ಅಲ್ಲೇ ಜೀವ ಬಿಟ್ಟಿದ್ದಾನೆ.
ಇನ್ನು ಇವರಿಬ್ಬರು ಕೋಳಿ ಅಂಗಡಿಯಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಕ್ಷುಲಕ ಕಾರಣಕ್ಕೆ ಶುರುವಾದ ಇವರಿಬ್ಬರ ಕೋಳಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಂಗಿಯನ್ನು ಚುಡಾಯಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಅಣ್ಣನನ್ನು ಕಲ್ಲು ಎತ್ತಿಹಾಕಿ ಕೊಂದ ಗೆಳೆಯರು!
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚೌಡಾಪುರ ಗ್ರಾಮದಲ್ಲಿ ಯುವಕನೊಬ್ಬನನ್ನು (Youngster Murdered) ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ (Murder Case) ಮಾಡಲಾಗಿದೆ. ಮಹಾಂತಪ್ಪ ಗಂಡೋಲಿ (26) ಕೊಲೆಯಾದ ಯುವಕ. ಮಹಾಂತಪ್ಪನ ತಂಗಿಯನ್ನು ಆತನದೇ ಕೆಲವು ಗೆಳೆಯರು ಚುಡಾಯಿಸುತ್ತಿದ್ದರು (Murder for questioning molestation of sister) ಇದನ್ನು ಪ್ರಶ್ನಿಸಿದ್ದೇ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಭಾನುವಾರ ಸಂಜೆ (ಜು.30) ಚೌಡಾಪುರದಲ್ಲಿ ಮಹಾಂತೇಶ್ ತನ್ನ ಗೆಳೆಯರೊಂದಿಗೆ ಬಾರ್‌ನಲ್ಲಿ ಕುಡಿಯಲು ಕೂತಾಗ ಚುಡಾಯಿಸಿದ ವಿಷಯ ಚರ್ಚೆಗೆ ಬಂದಿದೆ. ತಂಗಿಯನ್ನು ಚುಡಾಯಿಸಿದರೆ ಸರಿ ಇರುವುದಿಲ್ಲ ಎಂದು ಮಹಾಂತೇಶ್ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಅಲ್ಲೇ ಸಣ್ಣ ಮಟ್ಟದ ಜಗಳ ನಡೆದಿತ್ತು.
ಈ ನಡುವೆ, ಮಹಾಂತೇಶ್ ಬಾರ್‌ನಿಂದ ಹೊರಗೆ ಬರುವಾಗ ಆತನನ್ನು ತಡೆದು ನಿಲ್ಲಿಸಿ, ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಪರಶುರಾಮ ದಶರಥ ಎಂಬಾತ ಒಳಗಡೆ ಏನು ಮಾತನಾಡಿದ್ದು ನೀನು ಎಂದು ಪ್ರಶ್ನಿಸಿ ಮಹಾಂತೇಶನ ಮೇಲೆ ಎರಗಿದ್ದಾನೆ. ಮತ್ತು ಮಹಾಂತೇಶನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಂಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಡೆದಿರುವ ಈ ಕೊಲೆ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆರೋಪಿ ವಿರುದ್ಧ ಮತ್ತು ಆತನಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಕೇಳಿಬಂದಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ