Site icon Vistara News

Murder Case : ಹುಡುಗಿ ವಿಷ್ಯಕ್ಕೆ ಬಿತ್ತು ಹೆಣ; ರಾಗಿ ಹೊಲದಲ್ಲಿ ಹೂತುಹಾಕಿದವನು ಅರೆಸ್ಟ್‌

prathap

ಬೆಂಗಳೂರು: ಯುವಕನನ್ನು ಕೊಲೆ (Murder Case) ಮಾಡಿ ಬಳಿಕ ರಾಗಿ ಹೊಲದಲ್ಲಿ ಮೃತದೇಹವನ್ನು ಹೂತುಹಾಕಿದ್ದ ಆರೋಪಿಯ ಬಂಧನವಾಗಿದೆ. ಪ್ರತಾಪ್‌ ಬಂಧಿತ ಆರೋಪಿ ಆಗಿದ್ದಾನೆ.

ಕೊಲೆಯಾದ ಲೋಕೇಶ್‌ ಹಾಗೂ ಆರೋಪಿ ಪ್ರತಾಪ್‌ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅಲ್ಲಿದ್ದ ಹುಡುಗಿಯನ್ನು ಲೋಕೇಶ್‌ ಪ್ರೀತಿಸುತ್ತಿದ್ದ. ಇದೇ ಹುಡುಗಿಯನ್ನು ನಾಲ್ಕು ವರ್ಷದಿಂದ ಪ್ರತಾಪ್ ಕೂಡ ಪ್ರೀತಿ ಮಾಡುತ್ತಿದ್ದ.

ಕಳೆದ ಜುಲೈನಿಂದ ಲೋಕೇಶ್‌ ಹುಡುಗಿ ಜತೆಗೆ ಫೋನ್‌ ಕಾಲ್‌, ಮಸೇಗಳನ್ನು ಮಾಡುತ್ತಿದ್ದ. ಈ ವಿಚಾರ ತಿಳಿದ ಪ್ರತಾಪ್‌ ಲೋಕೇಶ್‌ಗೆ ಅವಾಜ್‌ ಹಾಕಿದ್ದ. ಇದಕ್ಕೆ ಕೇರ್ ಮಾಡದ ಲೋಕೇಶ್ ಹುಡುಗಿ ಜತೆಗೆ ಸಂಪರ್ಕ ಮುಂದುವರಿಸಿದ್ದ. ಇದರಿಂದ ಕೋಪಗೊಂಡ ಪ್ರತಾಪ್, ಲೋಕೇಶ್ ಕೆಲಸ ಮುಗಿಸಿ ಮನೆಗೆ ಹೋಗುವಾಗ ಹಿಂಬಾಲಿಸಿದ್ದ.

ಬಳಿಕ ಬಲವಂತವಾಗಿ ಕರೆದೊಯ್ದು ಲೋಕೇಶ್‌ನೊಟ್ಟಿಗೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಸಿಟ್ಟಿಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಹಾಕಿದ್ದ. ನಂತರ ರಾಗಿ ಹೊಲದಲ್ಲಿ ಹೂತಿಟ್ಟು ಕಾಲ್ಕಿತ್ತಿದ್ದ. ಇತ್ತ ಕೊಳೆತ ಸ್ಥತಿಯಲ್ಲಿದ್ದ ಶವದ ವಿವರ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version