ಮೈಸೂರು: ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಮೇಲೆ ಶಾಸಕ ತನ್ವೀರ್ ಸೇಠ್ ಬೆಂಬಲಿಗರು ಗೂಂಡಾಗಿರಿ ನಡೆಸಿರುವುದು ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಆವರಣದಲ್ಲಿ ಸೋಮವಾರ ನಡೆದಿದೆ. ಶಾಸಕರ ಬೆಂಬಲಿಗನ ಪತ್ನಿಯೊಬ್ಬಳು ಪೊಲೀಸರ ಎದುರಿನಲ್ಲೇ ಮಚ್ಚು ತೋರಿಸಿ ಅಧಿಕಾರಿಗಳಿಗೆ ಧಮ್ಕಿ ಹಾಕಿದಲ್ಲದೆ, ಕೊಲೆ ಬೆದರಿಕೆಯನ್ನೂ (Murder Threat) ಹಾಕಿ ರಂಪಾಟ ನಡೆಸಿದ್ದಾಳೆ.
ತನ್ವೀರ್ ಸೇಠ್ ಬೆಂಬಲಿಗ ಷಫಿ ಅಹಮದ್ ಹಾಗೂ ಪತ್ನಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಸುಮಾರು 3 ವರ್ಷಗಳಿಂದ ಬಸ್ ನಿಲ್ದಾಣದ ಕಟ್ಟಡವನ್ನು ಖಾಸಗಿ ಶಾಲೆ ನಡೆಸಲು ಷಫಿ ಅಹಮದ್ ಬಾಡಿಗೆಗೆ ಪಡೆದಿದ್ದಾರೆ. ಆದರೆ, 1.80 ಕೋಟಿ ರೂಪಾಯಿ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಬಾಡಿಗೆ ಬಾಕಿ ವಸೂಲಿ ಮಾಡಲು ಅಧಿಕಾರಿಗಳು ಮುಂದಾದಾಗ ಷಫಿ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ.
ಬಡ್ಡಿ ಮಗನೇ, ನಾವು ಸಾಬರು ಯಾರಿಗೂ ಹೆದರಲ್ಲ, ಮಚ್ಚಿನಲ್ಲಿ ಕೊಚ್ಚಿ ಹಾಕಿ ಜೈಲಿಗೆ ಹೋಗಲೂ ಹೆದರಲ್ಲ ಎಂದು ಷಫಿ ಪತ್ನಿ ಕೈಯಲ್ಲಿ ಮಚ್ಚು ಹಿಡಿದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾಳೆ. ಮರ್ಯಾದೆಯಿಂದ ಇಲ್ಲಿಂದ ಹೋಗಿಬಿಡಿ, ಮುಸ್ಲಿಮರ ಮೇಲೆ ದೌರ್ಜನ್ಯ ಮಾಡುತ್ತೀರಾ ಎಂದು ಷಫಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದು, ಮಚ್ಚನ್ನು ಕಸಿಯಲು ಪೊಲೀಸರು ಯತ್ನಿಸಿದಾಗ ಅಧಿಕಾರಿಗಳನ್ನು ಬೈಯುತ್ತಾ ಮಹಿಳೆ ರಂಪಾಟ ನಡೆಸಿದ್ದಾಳೆ.
ಇದನ್ನೂ ಓದಿ | Road accident | ಕುಷ್ಟಗಿ, ಮೈಸೂರಿನಲ್ಲಿ ಅಪಘಾತ: ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತ್ಯು