Site icon Vistara News

Murdeshwar Beach‌ | ಸಮುದ್ರದಲೆಗೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಿಸಿದ ಲೈಫ್‌ಗಾರ್ಡ್

Murdeshwar Beach‌ TOURIST RESCUED

ಕಾರವಾರ: ಭಟ್ಕಳದ ಮುರ್ಡೇಶ್ವರ ಕಡಲತೀರದಲ್ಲಿ (Murdeshwar Beach‌) ಈಜಲು ತೆರಳಿದ್ದ ವೇಳೆ ಅಲೆಗಳಿಗೆ ಸಿಲುಕಿ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಧನಂಜಯ.ಎನ್.ಎಸ್ ರಕ್ಷಣೆಗೊಳಗಾದ ಪ್ರವಾಸಿಗ. ಈತ ಹೊಸ ವರ್ಷಾಚರಣೆಗೆಂದು ಸ್ನೇಹಿತರೊಂದಿಗೆ ಮುರ್ಡೇಶ್ವರಕ್ಕೆ ಬಂದಿದ್ದ. ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳೊಂದಿಗೆ ತೇಲಿಕೊಂಡು ಮುಂದೆ ಹೋಗಿದ್ದು ಮುಳುಗುವ ಹಂತ ತಲುಪಿದ್ದ. ಪ್ರವಾಸಿಗ ಮುಳುಗುವ ಹಂತದಲ್ಲಿ ಇದ್ದನ್ನು ಗಮನಿಸಿದ ಲೈಫ್‌ಗಾರ್ಡ್ ಕೂಡಲೇ ಈಜಿಕೊಂಡು ತೆರಳಿ ಪ್ರವಾಸಿಗನನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.

ಇದನ್ನೂ ಓದಿ | Siddheshwar Swamiji | ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯದಲ್ಲಿ ಚೇತರಿಕೆ; ನಾಳೆಯಿಂದ ವರ್ಚುವಲ್‌ ದರ್ಶನ

ಸದ್ಯ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುರ್ಡೇಶ್ವರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರು ತಂಡೋಪತಂಡವಾಗಿ ಕಡಲತೀರದಲ್ಲಿ ನೀರಲ್ಲಿ ಈಜಲು ತೆರಳುತ್ತಾರೆ. ಮುರ್ಡೇಶ್ವರ ಕಡಲತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿಗೆ ಇದ್ದು ಬೇರೆಡೆಗಳಿಂದ ಬಂದಂತಹ ಪ್ರವಾಸಿಗರಿಗೆ ಸಮುದ್ರದ ಅರಿವಿರುವುದಿಲ್ಲ. ಹೀಗಾಗಿ ಈಜಲು ತೆರಳುವವರು ಅಲೆಗಳಿಗೆ ಸಿಕ್ಕು ಅಪಾಯ ತಂದುಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಲೈಫ್‌ಗಾರ್ಡ್ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದರೂ ಬಹುತೇಕರು ಅವರ ಸೂಚನೆಯನ್ನು ಪಾಲನೆ ಮಾಡುತ್ತಿಲ್ಲ.

ಕಡಲತೀರದಲ್ಲಿ ಕೇವಲ ಐವರು ಲೈಫ್‌ಗಾರ್ಡ್ ಸಿಬ್ಬಂದಿ ಇದ್ದು, ಎಲ್ಲ ಪ್ರವಾಸಿಗರನ್ನೂ ಎಚ್ಚರಿಸುವುದು ಸಾಧ್ಯವಾಗುತ್ತಿಲ್ಲ. ಜತೆಗೆ ಕೆಲವೊಮ್ಮೆ ಲೈಫ್‌ಗಾರ್ಡ್ ನೀಡುವ ಸೂಚನೆಯನ್ನು ಧಿಕ್ಕರಿಸಿ ಕೆಲವರು ಅವರೊಂದಿಗೇ ಜಗಳಕ್ಕಿಳಿದ ಘಟನೆಗಳು ಸಹ ನಡೆಯುತ್ತಿವೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವಾಗ ಕಡಲತೀರದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಇದನ್ನೂ ಓದಿ | Karnataka Election | ಜೆಡಿಎಸ್‌ಗೆ ವೋಟ್ ಮಾಡಿದ್ರೆ ಕಾಂಗ್ರೆಸ್‌ಗೆ ವೋಟ್ ಮಾಡಿದ ಹಾಗೆ ಎಂದ ಅಮಿತ್ ಶಾ!

Exit mobile version