ಕಾರವಾರ: ಭಟ್ಕಳದ ಮುರ್ಡೇಶ್ವರ ಕಡಲಿನಲ್ಲಿ (Murdeshwar Beach) ಅಪಾಯ ಮಟ್ಟವಿದ್ದ ಕಡೆಗೆ ಈಜಲು ಮುಂದಾಗಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಲೈಫ್‌ಗಾರ್ಡ್ ಮೇಲೆ ಹಲ್ಲೆ ನಡೆಸಲಾಗಿದೆ.
ಗದಗ ಜಿಲ್ಲೆಯಿಂದ ಆಗಮಿಸಿದ್ದ ನೀಲಪ್ಪ ಬಾಲರೆಡ್ಡಿ ಮತ್ತು ಪ್ರಶಾಂತ ಹಳ್ಳಿಗಂಡಿ ಎಂಬುವವರು ಕುಡಿದ ಮತ್ತಿನಲ್ಲಿ ಮುರ್ಡೇಶ್ವರ ಕಡಲಿನಲ್ಲಿ ಈಜಲು ಹೋಗಿದ್ದಾರೆ. ಅಲ್ಲದೆ, ಅಪಾಯದ ಮಟ್ಟ ಇರುವ ಕಡೆಗೂ ಈಜಲು ಹೋಗಿದ್ದಾರೆ. ಇದನ್ನು ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ತಕ್ಷಣವೇ ನೀರಿಗೆ ಧುಮುಕಿ ಅವರಿಬ್ಬರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ.
ರಕ್ಷಣೆ ಮಾಡಿ ಕರೆ ತಂದಿದ್ದಕ್ಕೆ ಸಿಟ್ಟಿಗೆದ್ದ ಪ್ರವಾಸಿಗರು ಲೈಫ್‌ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ. ತಮ್ಮನ್ನು ಈಜಲು ಬಿಡಬೇಕಿತ್ತು ಎಂದು ಗಲಾಟೆ ಮಾಡಿದ್ದಾರೆ. ಈಗ ಪ್ರಕರಣ ಮುರ್ಡೇಶ್ವರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಇದನ್ನೂ ಓದಿ | Ramakrishna Hegde | ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆ ಅಧ್ಯಯನ ಪೀಠ: ಸಿಎಂ ಬೊಮ್ಮಾಯಿ ಘೋಷಣೆ