Site icon Vistara News

Murugha Seer: ಮುರುಘಾ ಶರಣರ ಬಿಡುಗಡೆಗೆ ಕೂಡಿ ಬರದ ಕಾಲ

Murugha seer

ಚಿತ್ರದುರ್ಗ: ಜೈಲು ಸಮಯ ಮೀರಿದ ಕಾರಣ ನ್ಯಾಯಾಂಗ ಬಂಧನದಲ್ಲಿದ್ದ ಮುರುಘಾ ಶರಣರಿಗೆ ಬುಧವಾರ ಬಿಡುಗಡೆ ಭಾಗ್ಯ ಲಭಿಸಲಿಲ್ಲ. ವಕೀಲರು ಕೋರ್ಟ್ ಆದೇಶ ತರುವಲ್ಲಿ ತಡ ಮಾಡಿದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳ ಬಿಡುಗಡೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ. ಇದರಿಂದ ಜೈಲು ಹೊರಗೆ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗುವಂತಾಯಿತು.

ಜೈಲು ಸಮಯ ಮೀರಿದ ಕಾರಣ ನ.16ರಂದು ಬೆಳಗ್ಗೆ ಶ್ರೀಗಳನ್ನು ಬಿಡುಗಡೆ ಸಾಧ್ಯತೆ ಇದೆ. ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮುರುಘಾ ಶ್ರೀಗಳ ವಿರುದ್ಧ ಎರಡು ಪೋಕ್ಸೊ ಪ್ರಕರಣ ದಾಖಲಾಗಿದ್ದವು. ಆದರೆ, ಮೊದಲ ಪ್ರಕರಣದಲ್ಲಿ ಶ್ರೀಗಳಿಗೆ ಜಾಮೀನು ಸಿಕ್ಕಿದ್ದರಿಂದ ಬಿಡುಗಡೆ ಮಾಡಲು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಜೈಲು ಸಮಯ ಮೀರಿದ ಹಿನ್ನೆಲೆಯಲ್ಲಿ ಶ್ರೀಗಳನ್ನು ಬುಧವಾರ ಬಿಡುಗಡೆ ಮಾಡಲಾಗಿಲ್ಲ.

ಇನ್ನು 2ನೇ ಪೋಕ್ಸೊ ಪ್ರಕರಣದಲ್ಲಿ ಶರಣರ ವಿರುದ್ಧ ಬಾಡಿ ವಾರಂಟ್‌ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತನೆ ಮಾಡಬೇಕು ಎಂಬ ಸರ್ಕಾರಿ ವಕೀಲರ ಅರ್ಜಿಯ ವಿಚಾರಣೆಯನ್ನು ಕೋರ್ಟ್‌, ನ.16ಕ್ಕೆ ಮುಂದೂಡಿದೆ.

ಎರಡನೇ ಪ್ರಕರಣದಲ್ಲಿ ಶ್ರೀಗಳು ಅರೆಸ್ಟ್‌ ಆಗಿರಲಿಲ್ಲ ಹಾಗೂ ಅವರನ್ನು ಕಸ್ಟಡಿಗೆ ಪಡೆದಿರಲಿಲ್ಲ. ಪ್ರಕರಣದಲ್ಲಿ ತನಿಖೆ ಮುಗಿದು, ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ತನಿಖೆ ವ್ಯಾಪ್ತಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಬಾಡಿ ವಾರಂಟ್‌ ಇದ್ದರೂ ಕಾರಾಗೃಹದಲ್ಲಿಡುವಂತಿಲ್ಲ ಎಂದು ಶ್ರೀಗಳ ಪರ ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ | Udupi Murder : ನಾಲ್ವರನ್ನು ಕೊಂದವನ ಟಾರ್ಗೆಟ್‌ ಅವಳೇ ಅಯ್ನಾಜ್‌; ಕಾರಣ ಬಿಚ್ಚಿಟ್ಟ ಹಂತಕ

ಮುರುಘಾ ಶ್ರೀಗಳು ಬಿಡುಗಡೆಯಾಲಿದ್ದಾರೆ ಎಂಬ ವಿಷಯ ತಿಳಿದು ಮುರುಘಾ ಮಠದ ನೂರಾರು ಭಕ್ತರು ಜೈಲಿನ ಮುಂದೆ ಜಮಾಯಿಸಿದ್ದರು. ಶ್ರೀಗಳನ್ನು ಕರೆದೊಯ್ಯಲು ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಆಗಮಿಸಿದ್ದರು. ಬಿಡುಗಡೆ ಬಳಿಕ, ಜೈಲಿಂದ ನೇರವಾಗಿ ಶ್ರೀಗಳು ದಾವಣಗೆರೆಗೆ ಪ್ರಯಾಣಿಸಬೇಕಿತ್ತು. ಅಲ್ಲಿನ ಭಕ್ತರ ಮನೆಯಲ್ಲಿ ಶ್ರೀಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಶ್ರೀಗಳು ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಭಕ್ತರು ನಿರಾಸೆ ಅನುಭವಿಸುವಂತಾಯಿತು.

Kill DK Brothers ಎಂದು ಪೋಸ್ಟ್‌ ಮಾಡಿದ ನಕಲಿ ಡಿಟೆಕ್ಟಿವ್‌ ಅರೆಸ್ಟ್‌

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ KILL DK brothers’ ಎಂದು ಪೋಸ್ಟ್‌ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ (Private Company worker) ಕೆಲಸ ಮಾಡುತ್ತಿರುವ ರಂಜಿತ್‌ ಆರ್‌ ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಕಿಲ್ ಡಿಕೆ ಬ್ರದರ್ಸ್ ಎಂದು ಪೋಸ್ಟ್ ಮಾಡಿದ್ದ. ರಂಜಿತ್‌ ಕಾಂಗ್ರೆಸ್‌ ಸರ್ಕಾರ ಮತ್ತು ಡಿ.ಕೆ ಬ್ರದರ್ಸ್‌ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದ. ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದ ಆರೋಪಿ ಮೇಲೆ ಜಯನಗರ ಕಾಂಗ್ರೆಸ್‌ ವತಿಯಿಂದ ಎಫ್‌ಐಆರ್‌ ದಾಖಲಾಗಿತ್ತು.

ಜಯನಗರ ಯೂತ್ ಕಾಂಗ್ರೆಸ್‌ ಉಪಾಧ್ಯಕ್ಷ ಶರತ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ಕೇಸು ದಾಖಲಾಗಿತ್ತು. ಈತ ಡಿ.ಕೆ. ಬ್ರದರ್ಸ್‌ ಮಾತ್ರವಲ್ಲದೆ, ಮುಸ್ಲಿಮರ ಬಗ್ಗೆಯೂ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ್ದ. ಕಾಂಗ್ರೆಸ್‌ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದ. ಕಿಕ್ ಔಟ್ ಕಾಂಗ್ರೆಸ್‌ ಎಂದು ಶಬ್ದ ಪ್ರಯೋಗ ಮಾಡಿ ಪೋಸ್ಟ್ ಮಾಡಿದ್ದ.

ಸೈಬರ್‌ ಕ್ರೈಂ ಡಿಟೆಕ್ಟಿವ್‌ ಎಂದು ಹೇಳಿಕೊಂಡಿದ್ದ!

ಕಾಂಗ್ರೆಸ್‌ ಮತ್ತು ಅದರ ನಾಯಕರ ವಿರುದ್ಧ ಕೆಟ್ಟದಾಗಿ ಪೋಸ್ಟ್‌ ಮಾಡುತ್ತಿದ್ದ ಆತ ತನ್ನನ್ನು ತಾನು ಸೈಬರ್ ಕ್ರೈಂ ಡಿಟೆಕ್ಟಿವ್‌ ಎಂದು ಕಾಲ್‌ ಡಿಟೇಲ್ಸ್‌ನಲ್ಲಿ ಹಾಕಿಕೊಂಡಿದ್ದ. ತಾನು ಬೆಂಗಳೂರು ಸಿಟಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ ಎಂದಿದ್ದ. ಜಯನಗರ ಪೊಲೀಸರು ಆತನನ್ನು ಬಂಧಿಸಿದ್ದು, ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ : Murder case : ಆಸ್ತಿಗಾಗಿ ಪತ್ನಿಯನ್ನೇ ಕೊಂದ ಗಂಡ; ಮುಖಕ್ಕೆ ದಿಂಬು ಇಟ್ಟು ಉಸಿರುಗಟ್ಟಿಸಿದ!

ರಂಜಿತ್‌ ವಿರುದ್ಧ ಧರ್ಮಗಳ ಮಧ್ಯೆ ದ್ವೇಷಕ್ಕೆ ಕಾರಣವಾಗುವ ಮತ್ತು ಮಾನಹಾನಿಕರವಾಗಿ ವರ್ತಿಸುವ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version