ಚಿತ್ರದುರ್ಗ: ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿ ಶ್ರೀಗಳು ನ್ಯಾಯಾಂಗ ಬಂಧನದಲ್ಲಿರುವಂತೆ ಶ್ರೀಮಠದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಇದೇ ವೇಳೆ ಮುರುಘಾಶ್ರೀಗಳ ಜತೆ ಗಣ್ಯರು ತೆಗೆಸಿಕೊಂಡಿದ್ದ ಫೋಟೊಗಳು ನಾಪತ್ತೆಯಾಗಿವೆ. ಈ ಸಂಬಂಧ ಈಗ ಮಠಕ್ಕೆ ಬಿಗಿ ಭದ್ರತೆ ನೀಡಲಾಗುತ್ತಿದ್ದು, ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.
ಮುರುಘಾ ಮಠದಲ್ಲಿ ಅ.5ರಂದು ಮುರುಘಾ ಶ್ರೀಗಳಿಗೆ ಸಂಬಂಧಪಟ್ಟ ಒಟ್ಟು 47 ಫೋಟೊಗಳು ಕಳ್ಳತನವಾದ ವರದಿಯಾಗಿವೆ. ಈ ಫೋಟೊಗಳಲ್ಲಿ ಮುರುಘಾಶ್ರಿಗಳ ಜತೆಗೆ ಹಲವಾರು ಗಣ್ಯರಿದ್ದ ಫೋಟೊಗಳಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ.
ಸಿಸಿ ಕ್ಯಾಮರಾ ಅಳವಡಿಕೆ
ಮಠಕ್ಕೆ ಭದ್ರತೆ ದೃಷ್ಟಿಯಿಂದ ಹಾಗೂ ಇನ್ನಿತರ ಕಾರಣಕ್ಕಾಗಿ ಶನಿವಾರ ಮುರುಘಾಮಠದ ಮುಖ್ಯದ್ವಾರ ಸೇರಿದಂತೆ ಆವರಣದ ಕೆಲವು ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಅಲ್ಲದೆ, ಮಠದ ಬಳಿ ಈಚೆಗೆ ಆಗಾಗ ಗಲಾಟೆ, ಗದ್ದಲ, ಕಳ್ಳತನವಾಗುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎರಡನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಟ್ವಿಸ್ಟ್; ಇನ್ನಿಬ್ಬರು ಪೋಷಕರ ಉಲ್ಟಾ ಹೇಳಿಕೆ?