ಚಿತ್ರದುರ್ಗ: ಮುರುಘಾ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮುರುಘಾ ಶರಣರು ಬಂಧನದಲ್ಲಿರುವುದರಿಂದ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿಗೆ ಪವರ್ ಆಫ್ ಅಟಾರ್ನಿ ನೀಡಲಾಗಿದೆ.
ಕಾರ್ಯದರ್ಶಿ ಎಸ್.ಬಿ. ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಿರುವ ಮುರುಘಾ ಶರಣರು, ಎಸ್‌ಜೆಎಂ ವಿದ್ಯಾಪೀಠದ ಚೆಕ್ ಸಹಿ ಸೇರಿ ವಿವಿಧ ಆಡಳಿತಾತ್ಮಕ ನಿರ್ಧಾರವನ್ನು ತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.
ಮರುಘಾಶ್ರೀಗಳ ಹಿಡಿತದಲ್ಲಿಯೇ ಎಲ್ಲ ಆಡಳಿತ ವ್ಯವಸ್ಥೆ ಇದ್ದಿದ್ದರಿಂದ ವಿದ್ಯಾಪೀಠ ಸೇರಿದಂತೆ ಇನ್ನಿತರ ಕಡೆಗಳಲ್ಲಿ ವೇತನ ಕೊಡಲು ಕಷ್ಟವಾಗುತ್ತಿತ್ತು. ಇನ್ನು ಮಠದ ದೈನಂದಿನ ವ್ಯವಹಾರಗಳಿಗೂ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮುರುಘಾಶ್ರೀಗಳಿಂದ ಪವರ್ ಆಫ್ ಅಟಾರ್ನಿ ಬರೆಸಿಕೊಳ್ಳಲು ಹೈಕೋರ್ಟ್ ಮೊರೆ ಹೋಗಲಾಗಿತ್ತು. ಹೈಕೋರ್ಟ್ ಇದಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಠದ ಕಾರ್ಯದರ್ಶಿ ಎಸ್.ಬಿ. ವಸ್ತ್ರದಮಠಗೆ ಪವರ್ ಆಫ್ ಅಟಾರ್ನಿ ನೀಡಿದ್ದು, ಅಧಿಕೃತವಾಗಿ ನೋಟರಿ ಮಾಡಿ ಅಧಿಕಾರ ನೀಡಲಾಗಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಮಠದ ಮುಖ್ಯದ್ವಾರ, ಸುತ್ತಮುತ್ತ ಸಿಸಿ ಕ್ಯಾಮೆರಾ ಅಳವಡಿಕೆ, ಭದ್ರತೆಗೆ ಹೆಚ್ಚಿನ ಕ್ರಮ