Site icon Vistara News

Murugha seer case | ಪಿತೂರಿ ಪ್ರಕರಣದಲ್ಲಿ ಬಂಧಿತ ಸೌಭಾಗ್ಯ ಬಸವರಾಜನ್‌ ಚಿತ್ರದುರ್ಗಕ್ಕೆ ಶಿಫ್ಟ್‌

soubhagya basavarajan

ದಾವಣಗೆರೆ: ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯದ ಸುಳ್ಳು ದೂರು ನೀಡುವಂತೆ ಕೆಲವು ಬಾಲಕಿಯರು ಮತ್ತು ಅವರ ಕುಟುಂಬಕ್ಕೆ ಆಮಿಷ ಮತ್ತು ಬೆದರಿಕೆ ಹಾಕಿದ ಆರೋಪದಲ್ಲಿ ಬಂಧಿತರಾಗಿರುವ ಸೌಭಾಗ್ಯ ಬಸವರಾಜನ್‌ ಅವರನ್ನು ಶುಕ್ರವಾರ ಬೆಳಗ್ಗೆ ಚಿತ್ರದುರ್ಗಕ್ಕೆ ಕರೆ ತರಲಾಗಿದೆ.

ಸೌಭಾಗ್ಯ, ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಅವರ ಪತ್ನಿ ಹಾಗೂ ಜಿ.ಪಂ‌ ಮಾಜಿ ಅಧ್ಯಕ್ಷೆಯಾಗಿದ್ದಾರೆ. ಗುರುವಾರ ಅವರನ್ನು ವಶಕ್ಕೆ ಪಡೆದ ಪೊಲೀಸರು ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಟ್ಟಿದ್ದರು.

ಮುರುಘಾಶ್ರೀ ವಿರುದ್ದ ಸುಳ್ಳು ದೂರು ದಾಖಲಿಸಲು ಪಿತೂರಿ ನಡೆದಿದೆ ಎಂದು ಮುರುಘಾಮಠದ ಉಸ್ತುವಾರಿ ಬಸವಪ್ರಭು ಶ್ರೀ ಅವರು, ನವೆಂಬರ್ 9ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಮಠದ ಶಾಲಾ ಶಿಕ್ಷಕನಾಗಿದ್ದ ಬಸವರಾಜೇಂದ್ರ ಶಾಲಾ ಬಾಲಕಿಯೊಬ್ಬಳಿಗೆ ಪ್ರಚೋದನೆ ನೀಡಿದ್ದ ಆಡಿಯೊ ಸಾಕ್ಷ್ಯ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ನ.10ರಂದು ಬಸವರಾಜೇಂದ್ರ ಹಾಗೂ ಇದಕ್ಕೆ ಬೆಂಬಲ ನೀಡಿದ್ದ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ಬಂಧನವಾಗಿತ್ತು. ಆದರೆ ಸೌಭಾಗ್ಯ ಬಸವರಾಜನ್ ನಾಪತ್ತೆಯಾಗಿದ್ದರು.

ಖಾಸಗಿ ಕಾರಿನಲ್ಲಿ ಬಂದ ಸೌಭಾಗ್ಯ
ದಾವಣಗೆರೆಯಲ್ಲಿ ವಶಕ್ಕೆ ಪಡೆಯಲಾದ ಸೌಭಾಗ್ಯ ಬಸವರಾಜನ್‌ ಅವರನ್ನು ಶುಕ್ರವಾರ ಬೆಳಗ್ಗೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದರು. ಇದೀಗ ಅವರನ್ನು ಅವರನ್ನು ಚಿತ್ರದುರ್ಗಕ್ಕೆ ಕರೆ ತರಲಾಗಿದೆ. ನ.10ರಂದು ಬಸವರಾಜೇಂದ್ರ ಬಂಧಿಸಿ ಪೊಲೀಸರ ವಿಚಾರಣೆ ನಡೆಸಿ ಹಲವು ಮಾಹಿತಿ ಪಡೆದಿದ್ದರು. ಅಂದೇ ರಾತ್ರಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ಬಂಧನ ಆಗಿತ್ತು. ಇದೀಗ ಬಂಧನವಾಗಿರುವ ಸೌಭಾಗ್ಯ ಬಸವರಾಜನ್ ಅವರನ್ನು ಕೂಡಾ ತೀವ್ರ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ಜೈಲಿಗೆ ಕಳುಹಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ | Murugha Seer | ಮುರುಘಾ ಮಠಕ್ಕೆ ಆಡಳಿತಾಧಿಕಾರಿಯಾಗಿ ಪಿ.ಎಸ್. ವಸ್ತ್ರದ್ ನೇಮಕ

Exit mobile version