ಚಿತ್ರದುರ್ಗ: ಅಪ್ರಾಪ್ತ ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ (pocso case) ನೀಡಿದ ಆರೋಪದಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ (Murugha Seer) ಒಂದು ಪ್ರಕರಣದಲ್ಲಿ ಜಾಮೀನು ದೊರೆತಿರುವ ಬೆನ್ನಲ್ಲೇ, ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್ ರೇಖಾ ಅವರ ದಿಢೀರ್ ವರ್ಗಾವಣೆ ಆಗಿದೆ.
ಬಿ.ಎಸ್ ರೇಖಾ ಅವರು ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಆಗಿದ್ದುದಲ್ಲದೆ, ಚಿತ್ರದುರ್ಗದ ಮುರುಘಾ ಮಠದ ಆಡಳಿತಾಧಿಕಾರಿಗಳೂ ಆಗಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಸರ್ಕಾರಿ ನಿರ್ದೇಶನದಂತೆ ಮುರುಘಾ ಮಠದ ಆಡಳಿತವನ್ನು ಬಿ.ಎಸ್.ರೇಖಾ ವಹಿಸಿಕೊಂಡಿದ್ದರು.
ಇದೀಗ ಬಿ.ಎಸ್ ರೇಖಾ ದಿಢೀರ್ ವರ್ಗಾವಣೆಯಾಗಿದ್ದು, ಜಿಲ್ಲಾ ನ್ಯಾಯಾಧೀಶರಾಗಿ ಯಾದಗಿರಿಗೆ ವರ್ಗಾವಣೆ ಮಾಡಲಾಗಿದೆ. ಚಿತ್ರದುರ್ಗ ನೂತನ ಜಿಲ್ಲಾ ನ್ಯಾಯಾಧೀಶರಾಗಿ ತುಮಕೂರು ಜಿಲ್ಲಾ ನ್ಯಾಯಾಧೀಶರಾಗಿದ್ದ ಗೀತಾ ಕೆ.ಬಿ. ಅವರನ್ನು ನೇಮಿಸಿ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ.
ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೆಣ್ಣುಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಅವರು ಜೈಲಿನಲ್ಲಿದ್ದು, ಜಾಮೀನು ನಿರಾಕರಣೆಯಾಗುತ್ತ ಬಂದಿತ್ತು. ಇದೀಗ ಒಂದು ಪ್ರಕರಣದಲ್ಲಿ ಜಾಮೀನು ದೊರೆತಿದೆ. ಇನ್ನೂ ಎರಡು ಪ್ರಕರಣದಲ್ಲಿ ದೊರೆಯಬೇಕಿದೆ.
ಇದನ್ನೂ ಓದಿ: Murugha Seer : ಮುರುಘಾ ಮಠಕ್ಕೆ ನೂತನ ಆಡಳಿತಾಧಿಕಾರಿ ನೇಮಕ; ಚಾರ್ಜ್ ಪಡೆದ ಜಿಲ್ಲಾ ನ್ಯಾಯಾಧೀಶರು