ಮೈಸೂರು: ಚಿತ್ರದುರ್ಗದ ಮುರುಘಾ ಶರಣರ (Murugha Seer) ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಚಿತ್ರದುರ್ಗದ ೧೦ ಪೊಲೀಸರ ವಿರುದ್ಧ ಒಡನಾಡಿ ಸಂಸ್ಥೆ ನೀಡಿದ್ದ ದೂರಿನ ಪ್ರಕರಣದಲ್ಲಿ ಸಾಕ್ಷ್ಯ ಒದಗಿಸುವಂತೆ ಪೊಲೀಸರಿಂದಲೇ ಈಗ ನೋಟಿಸ್ ಜಾರಿಯಾಗಿದೆ.
ಚಿತ್ರದುರ್ಗದ ಹತ್ತು ಪೊಲೀಸರು ಮಡಿಲು ಪುನರ್ ವಸತಿ ಕೇಂದ್ರಕ್ಕೆ ನವೆಂಬರ್ ೩೦ರಂದು ಮಫ್ತಿಯಲ್ಲಿ ಪ್ರವೇಶಿಸಿ ಮಕ್ಕಳನ್ನು ಭಯಗೊಳಿಸಿದ್ದಾರೆ ಎಂದು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ದೂರು ನೀಡಿದ್ದರು. ಈಗ ಈ ಪ್ರಕರಣ ಸಂಬಂಧ ಅಗತ್ಯ ದಾಖಲೆ ನೀಡುವಂತೆ ಒಡನಾಡಿ ಸಂಸ್ಥೆಗೆ ವಿಜಯನಗರ ಪೊಲೀಸರು ನೋಟಿಸ್ ನೀಡಿದ್ದಾರೆ.
ನೋಟಿಸ್‌ನಲ್ಲೇನಿದೆ?
“ನೀವು ವಿಜಯನಗರ ಪೊಲೀಸ್ ಠಾಣೆಗೆ ನೀಡಿರುವ ಅರ್ಜಿಯಲ್ಲಿ, ದಿನಾಂಕ: 30.11.2022 ರಂದು ಮಡಿಲು ಪುನರ್ ವಸತಿ ಕೇಂದ್ರಕ್ಕೆ ಚಿತ್ರದುರ್ಗದ 10 ಮಂದಿ ಪೊಲೀಸ್‌ನವರು ಮಫ್ತಿಯಲ್ಲಿ ಒಳಗೆ ಪ್ರವೇಶಿಸಿ ಹುಡುಕಾಟ ನೆಡೆಸಿದ್ದಾರೆ. ಕಾನೂನು ಪ್ರಕಾರ ಮಕ್ಕಳ ಸುರಕ್ಷತೆ ಇರುವ ಸ್ಥಳದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದಾರೆ, ಎಂಬಿತ್ಯಾದಿಯಾಗಿ ಅರ್ಜಿ ನೀಡಿದ್ದು, ಈ ಸಂಬಂಧ ತಮ್ಮ ಸಂಸ್ಥೆಯಲ್ಲಿರುವ ಸಿಸಿಟಿವಿ ಫುಟೇಜ್ ಹಾಗೂ ಇತರೆ ದಾಖಲಾತಿಗಳು ಇದ್ದಲ್ಲಿ ವಿವರವಾದ ಮಾಹಿತಿ ನೀಡಿ ಅರ್ಜಿ ವಿಚಾರಣೆಗೆ ಸಹಕರಿಸಲು ಸೂಚಿಸಿರುತ್ತದೆ ಎಂದು ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಿಂದ ನೋಟಿಸ್ ಜಾರಿಯಾಗಿದೆ.
ಇದನ್ನೂ ಓದಿ | Sexual Assault | ಶಾಲೆಗೆ ಹೋಗಿದ್ದ ಬಾಲಕಿ ಅಪಹರಣ; ಗುಜರಾತಿಗೆ ಹೊತ್ತೊಯ್ದ ಯುವಕನಿಂದ ಅತ್ಯಾಚಾರ