ಶಿವಮೊಗ್ಗ: ಹೃದಯ ಸಮಸ್ಯೆ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆ ನಡೆಸಿದ ಬಳಿಕ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರಿಗೆ ಶುಕ್ರವಾರ ಚಿತ್ರದುರ್ಗಕ್ಕೆ ಕರೆದೊಯ್ಯಲಾಯಿತು.
ಚಿತ್ರದುರ್ಗ ನ್ಯಾಯಾಲಯದ ನಿರ್ದೇಶನದಂತೆ ಕಳೆದ ಎರಡು ದಿನಗಳಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮುರುಘಾಶ್ರೀಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಂಜಿಯೋಗ್ರಾಂ, ಇಕೋ ಪರೀಕ್ಷೆ ಬಳಿಕ ಮುರುಘಾಶ್ರೀಗಳನ್ನು ಆಸ್ಪತ್ರೆಯಿಂದ ಚಿತ್ರದುರ್ಗ ಜೈಲಿಗೆ ಪೊಲೀಸ್ ವಾಹನದಲ್ಲಿ ಸಿಬ್ಬಂದಿ ಕರೆದೊಯ್ದರು.
ಇದನ್ನೂ ಓದಿ | Shivamogga terror | ಮಗ ಉಗ್ರನಾದ ನೋವು: ಮಹಮ್ಮದ್ ಮಾಜ್‌ನ ತಂದೆ ಹೃದಯಾಘಾತದಿಂದ ನಿಧನ
ಮೆಗ್ಗಾನ್ ಆಸ್ಪತ್ರೆ ನಿರ್ದೇಶಕ ಡಾ.ವಿರೂಪಾಕ್ಷಪ್ಪ ಮಾತನಾಡಿ, ಕರೋನರಿ ಆಂಜಿಯೋಗ್ರಾಮ್ ಪರೀಕ್ಷೆಗೆ ಮುರುಘಾ ಶರಣರು ಆಸ್ಪತ್ರೆಗೆ ಸೆ.21ರಂದು ಬಂದಿದ್ದರು. ಅವರಿಗೆ ಅಗತ್ಯ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ನೀಡಿದ್ದೇವೆ. ಆಂಜಿಯೋಗ್ರಾಮ್ ಯಶಸ್ವಿಯಾಗಿದೆ. ಅವರಿಗೆ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ. ಇಲ್ಲಿಗೆ ಬಂದಾಗ ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದಿತ್ತು, ಚಿಕಿತ್ಸೆ ನಂತರ 24 ಗಂಟೆ ಅವರ ಮೇಲೆ ನಿಗಾ ಇಡಲಾಗಿತ್ತು. ಈಗ ಅವರ ಆರೋಗ್ಯದಲ್ಲಿ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ನ್ಯಾಯಾಲಯದಿಂದ ಜಾಮೀನು ನಿರಾಕರಣೆ
ಪೋಕ್ಸೊ ಪ್ರಕರಣದಡಿ ಬಂಧಿತರಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿರುವ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ಶ್ರೀಗಳಿಗೆ ಜಾಮೀನು ನೀಡಲು ನಿರಾಕರಿಸಿದೆ. ಮುರಘಾಶ್ರೀ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ಅರ್ಜಿಯನ್ನು ತಿರಸ್ಕರಿಸಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸೆ.27ರವರೆಗೆ ಮುರುಘಾಶ್ರೀಗಳು ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.
ಇದನ್ನೂ ಓದಿ | ಡಾ. ರಾಜಕುಮಾರ್ ಪಾಠಕ್ಕೆ ಕತ್ತರಿ: ದೇವನೂರು ಸೇರಿ ಏಳು ಸಾಹಿತಿಗಳ ಪಠ್ಯ ಬೋಧಿಸದಂತೆ ಶಿಕ್ಷಣ ಇಲಾಖೆ ತಡೆ