Site icon Vistara News

ಮುರುಘಾಶರಣರ ಬಂಧನಕ್ಕೆ ಬೇಸರ: ಆತ್ಮಹತ್ಯೆಗೆ ಯತ್ನಿಸಿದ ನಾಯಕನಹಟ್ಟಿ ಮಠದ ಸ್ವಾಮೀಜಿ

murugha sree suicide attempt

ಚಿತ್ರದುರ್ಗ: ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾಶರಣರನ್ನು ಪೋಕ್ಸೊ ಕಾಯಿದೆಯಡಿ ಬಂಧಿಸಿದ ವಿದ್ಯಮಾನದಿಂದ ಬೇಸತ್ತು ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ನಾಯಕನ ಹಟ್ಟಿ ಮಠದ ತಿಪ್ಪೇರುದ್ರ ಸ್ವಾಮೀಜಿ ಅವರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ಜೀಪಿನಲ್ಲಿ ಹಾಕಿ ಕರೆದುಕೊಂಡು ಹೋಗಿದ್ದಾರೆ.

ಇವರು ಮುರುಘಾಶರಣರ ಶಿಷ್ಯರಾಗಿದ್ದು, ವಿದ್ಯಮಾನಗಳಿಂದ ತೀವ್ರ ನೊಂದಿದ್ದರು. ಜಿಲ್ಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಆಗಮಿಸಿದ ಅವರು ತುಂಬ ಭಾವುಕವಾಗಿ ವರ್ತಿಸಿದ್ದಾರೆ.
ನಾಯಕನಹಟ್ಟಿ ಮಠವನ್ನು ನೋಡಿಕೊಳ್ಳುತ್ತಿರುವ ಇವರು ಈ ಹಿಂದೆಯೂ ಇದೇ ರೀತಿ ವರ್ತಿಸಿದ್ದನ್ನು ನೆನಪಿಸಿಕೊಳ್ಳಬಹುದು. ಹಿಂದೆ ಯೋಗವನ ಬೆಟ್ಟ ಮಠ ಪೀಠಾಧ್ಯಕ್ಷ ಸ್ಥಾನ ತಪ್ಪಿ ಹೋಗಿದೆ ಎಂಬ ಕಾರಣಕ್ಕಾಗಿ ಬೇಸರಗೊಂಡು ಅವರು ಆತ್ಮಹತ್ಯೆಗೆ ಯತ್ನಿಸಿದ್ದರು.

ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ಮನವಿ
ಈ ನಡುವೆ ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕರ್ನಾಟಕ ಉಪ್ಪಾರ ಮಹಾಸಭಾ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿದ ಬಳಿಕ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಶ್ರೀಗಳನ್ನು ಕಟಕಟೆಯಲ್ಲಿ ನಿಲ್ಲಿಸಿದ ಜಡ್ಜ್‌, 4 ದಿನ ಕಸ್ಟಡಿ, ಆಸ್ಪತ್ರೆ ಹೈಡ್ರಾಮಾಕ್ಕೆ ತೆರೆ

Exit mobile version