Site icon Vistara News

ಕಾಂಗ್ರೆಸ್ ಗೆದ್ದ ಸಂಭ್ರಮಾಚರಣೆ; ಶಿರಸಿ ಮಾರಿಕಾಂಬಾ ದೇಗುಲದ ಮುಂಭಾಗದಲ್ಲಿ ಮುಸ್ಲಿಂ ಧ್ವಜ ಹಾರಾಟ

pakistan flag in sirsi After Congress Won In karnataka Election

#image_title

ಶಿರಸಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election Results)ಯಲ್ಲಿ ಕಾಂಗ್ರೆಸ್​ ಪಕ್ಷ ಗೆದ್ದ ಬೆನ್ನಲ್ಲೇ ರಾಜ್ಯಾದ್ಯಂತ ಕಾರ್ಯಕರ್ತರು ವಿಪರೀತ ಸಂಭ್ರಮಿಸುತ್ತಿದ್ದಾರೆ. ಆದರೆ ಈ ಮಧ್ಯೆ ಅಲ್ಲಲ್ಲಿ ಮುಸ್ಲಿಂ ಧ್ವಜಗಳು ಹಾರಾಡುತ್ತಿರುವುದು ಕಾಣಿಸುತ್ತಿವೆ. ಭಟ್ಕಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಕಾಳು ವೈದ್ಯ ಗೆಲುವಿನ ಬೆನ್ನಲ್ಲೇ ಅಲ್ಲಿನ ಸಂಶುದ್ದೀನ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆದಿತ್ತು. ಆದರೆ ಅಲ್ಲಿ ಮುಸ್ಲಿಂ ಧ್ವಜ ಹಾರಾಡಿತ್ತು. ಇದೀಗ ಶಿರಸಿಯ ಮಾರಿಕಾಂಬಾ ದೇಗುಲದ ಎದುರು ಕೂಡ ಮುಸ್ಲಿಂ ಧ್ವಜ ಹಾರಾಡಿದೆ. ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಲ್ಲಿ ಕಾರ್ಯಕರ್ತರೆಲ್ಲ ಒಟ್ಟಾಗಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಧ್ವಜ ಹಾರಾಡುತ್ತಿದೆ. ಆದರೆ ಅದರ ಮಧ್ಯೆ ಇಬ್ಬರು ಯುವಕರು ಮುಸ್ಲಿಂ ಧ್ವಜವನ್ನು ಹಾರಿಸಿದ್ದಾರೆ. ಈ ವಿಡಿಯೊಗಳನ್ನು ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು, ಕಾಂಗ್ರೆಸ್ ಗೆದ್ದ ಕೂಡಲೇ ಇಂಥದ್ದೆಲ್ಲ ಶುರುವಾಗಿಬಿಡ್ತು ಎನ್ನುತ್ತಿದ್ದಾರೆ.

ಶಿರಸಿ ಸೇರಿ ಕರ್ನಾಟಕದಲ್ಲಿ 134 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೋತಿದ್ದಾರೆ. ಕಾಂಗ್ರೆಸ್​ನ ಭೀಮಣ್ಣ ನಾಯ್ಕ್​ ಅವರು 76,887 ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಹೀಗೆ ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಸಂಭ್ರಮದ ನೆಪದಲ್ಲಿ ಅಲ್ಲಲ್ಲಿ ಮುಸ್ಲಿಂ ಧ್ವಜ ಹಾರಾಟ ಆಗುತ್ತಿರುವುದನ್ನು ನೋಡಿದವರು ಅನೇಕರು, ‘ಕಾಂಗ್ರೆಸ್ ಗೆದ್ದರೆ ಇನ್ನು ಐದು ವರ್ಷ ಹೀಗೇ’ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಇದನ್ನೂ ಓದಿ: Sirsi Election Results: ಶಿರಸಿಯಲ್ಲಿ ಕಾಗೇರಿ ಗೆಲುವಿನ ಓಟಕ್ಕೆ ಬಿತ್ತು ಬ್ರೇಕ್‌; ಗೆದ್ದು ಬೀಗಿದ ಭೀಮಣ್ಣ

Exit mobile version